Best home remedies to remove pimple marks, scars & pimple spots in Kannada language – ಮೊಡವೆ, ಕಲೆ ಹಾಗೂ ಮಚ್ಚೆಗಳ ನಿವಾರಣೆಗೆ ರಾಮಬಾಣದಂತಹ ಮನೆ ಮದ್ದು

ಮೊಡವೆಗಳು ಮುಖ, ಬೆನ್ನು ಹಾಗೂ ಭುಜಗಳ ಮೇಲೆ ಬರುತ್ತವೆ. ಮೊಡವೆಗಳು ಸಾಮಾನ್ಯವಾಗಿ ವೈರಾಣು ಹಾಗೂ ಪಸ್ಸಿನಿಂದ ಊದಿದ ಚರ್ಮಾವಷ್ಟೆ. ನಮ್ಮ ಚರ್ಮದಲ್ಲಿ ಅಡಗಿರುವ ಮೆದೋಗ್ರಂಥಿಗಳ(sebaceous glands) ಅತಿಯಾದ ಸ್ರಾವದಿಂದ ಮೊಡವೆಗಳು ಉಂಟಾಗುತ್ತವೆ. ಇದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮವಿಲ್ಲದಿದ್ದಾತು, ಮನುಷ್ಯನ ಸೌಂದರ್ಯದ ಮೇಲೆ ಇವು ನಕಾರಾತ್ಮಕ ಪರಿಣಾಮ ಬೀರುತ್ತವೆ. ತಿಳಿಗೆಂಪು ಮಚ್ಚೆ ಅತವಾ ಕಲೆಯಂತೆ ಕಾಣುವ ಈ ಮೊಡವೆಗಳು ಅತಿರೇಕಕ್ಕೆ ಹೋದಾಗ ಗುಳ್ಳೆಗಳಂತೆ ಅದರಿಂದ ಪಸ್ಸು ಒಸರಬಹುದು. ಸಾಮಾನಯವಾಗಿ ಕೆಲವು ದಿನಗಳಲ್ಲಿ ಮೊಡವೆಗಳು ತಾವಾಗಿಯೇ ಒಣಗಿಹೊಗುತ್ತವೆ ಆದರೆ ಹಾಗೆ ಆದಾಗ ಕೆಲವೊಮ್ಮೆ ಚರ್ಮದ ಮೇಲೆ ಕಲೆ ಉಳಿದುಹೋಗುತ್ತದೆ. ಈ ಮಚ್ಚೆಗಳನ್ನು ಅನೇಕ ರೀತಿಗಳಲ್ಲಿ ಗುಣಪಡಿಸಬಹುದು. ಈ ಕಾರಣಕ್ಕಾಗಿಯೇ ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಉತ್ಪನ್ನಗಳು ದೊರೆಯುತ್ತವೆ ಆದರೆ ಅವುಗಳಿಗಿಂತಲೂ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡದ, ಅಷ್ಟೇನೂ ದುಬಾರಿಯಲ್ಲದ, ನೈಸರ್ಗಿಕವಾದ ಮನೆ ಮದ್ದು ಉತ್ತಮ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳು ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತವೆ. ಆದ್ದರಿಂದ ಅವುಗಳನ್ನು ಬಳಸದಿರುವುದೇ ಲೇಸು.

ಮೊಡವೆಗಳು ಅತಿಹೆಚ್ಚು ಬಾದಿಸುವುದು ಹದಿಹರೆಯದವರನ್ನು. ಹರೆಯದ ಬಾಗಿಲಿನಲ್ಲಿ ಎಡತಾಕುವ ಮೊಡವೆ ಹಾಗೂ ಮಚ್ಚೆಗಳಿಂದ ಮುಕ್ತಿ ಪಡೆಯಲು ಅವರು ಅನೇಕ ಔಷಧಿಗಳ ಅಥವಾ ವಿಧಾನಗಳ ಮೊರೆಹೋಗುತ್ತಾರೆ. ಆದರೆ ಯಾವ ಉತ್ಪನ್ನದಲ್ಲಿರುವ ಯಾವ ರಾಸಾಯನಿಕ, ಯಾವ ಕಾಲಕ್ಕೆ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೆಳಲಿಕ್ಕೆ ಬರುವುದಿಲ್ಲ. ಕೆಲವರ ಚರ್ಮ ರಾಸಾಯನಿಕಗಳಿಗೆ ಬಹಳ ಬೇಗ ಹೊಂದಿಕೊಂಡುಬಿಡುತ್ತವೆ ಆದರೆ ಕೆಲವರವು ಬಹಳ ಸೂಕ್ಷ್ಮವಾಗಿದ್ದು ರಾಸಾಯನಿಕಗಳಿಗೆ ಹೊಂದಿಕೊಳ್ಳದೆಹೋಗಬಹುದು. ಅಂತಹ ಚರ್ಮದ ಮೊಡವೆ, ಕಲೆ, ಬೊಕ್ಕೆ ಇತ್ಯಾದಿ ನಿವಾರಣೆಗಾಗಿ ಹಾಗೂ ಚರ್ಮದ ಆರೈಕೆಗಾಗಿ ಮನೆ ಮದ್ದು ಹೇಳಿಮಾಡಿಸಿದ ಔಷಧವಾಗುತ್ತದೇ. ಅಷ್ಟೇ ಅಲ್ಲದೆ, ರಾಸಾಯನಿಕಗಳಿಗೆ ಒಗ್ಗಿಕೊಳ್ಳುವ ಚರ್ಮಕ್ಕು ಸಹ ಮನೆ ಮದ್ದು ಮೊಡವೆ ಇತ್ಯಾದಿಗಳ ನಿವಾರಣೆಗೆ ಸಹಾಯಮಾಡುತ್ತದೆ.

ಮೊಡವೆಯ ತೊಲಗಿಸಲು ಸಕ್ಕರೆಯ ಸ್ಕ್ರಬ್ (Sugar scrub to erase pimple marks)

ಕಲೆ ಹಾಗೂ ಮೊಡವೆಗಳನ್ನು ನಿವಾರಿಸಿ ಮುಖವನ್ನು ಕಾಂತಿಯುತವಾಗಿಸಲು ಇದೊಂದು ಸುಲಭ ಸಾಧನ. ಮೂರು ಚಮಚೆ ಸಕ್ಕರೆಗೆ ಒಂದು ಚಮಚ ಹಾಲಿನ ಪುಡಿ ಹಾಗೂ ಒಂದು ಚಮಚೆ ಜೇನುತುಪ್ಪವನ್ನು ಬೆರೆಸಿ ಅದರಿಂದ ಮುಖವನ್ನು ಉಜ್ಜಿಕೊಳ್ಳಬೇಕು. ಹದಿನೈದು ನಿಮಿಷಗಳು ಮೆಡಿವಾಗಿ ಉಜ್ಜಿದನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು.

ಮೊಟ್ಟೆಯ ಬಿಳಿಯಿಂದ ಕಲೆಗಳ ನಿವಾರಣೆ (Egg white to lighten pimple marks)

ಮೊಡವೆಗಳಿಂದ ಉಂಟಾಗುವ ಕಲೆ ಹಾಗೂ ಮಚ್ಚೆಗಳನ್ನು ನಿವಾರಿಸಲು ಮೊಟ್ಟೆಯ ಬಿಳಿ ಬಹಳ ಉಪಯೋಗಕಾರಿ. ಹಸಿ ಮೊಟ್ಟೆಯನ್ನು ಹೊಡೆದು ಅದರಲ್ಲಿನ ಹಳದಿ ಭಾಗವನ್ನು ಬೇರ್ಪಡಿಸಿ, ಬಿಳಿಯ ಭಾಗವನ್ನು ಮಚ್ಚೆ ಅಥವಾ ಕಲೆಗಳ ಮೇಲೆ ಹಚ್ಚಿಕೊಳ್ಳಬೇಕು. ಹತ್ತು ಅಥವಾ ಹದಿನೈದು ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಮೊಟ್ಟೆಯ ಬಿಳಿಯಲ್ಲಿರುವ ಪ್ರೋಟೀನ್ ಹಾಗೂ ವಿಟಮಿನ್ಗಳು ಚರ್ಮವನ್ನು ಪುನರುಜ್ಜೀವನಗೊಳಿಸಿ, ಮಚ್ಚೆ ಹಾಗೂ ಕಲೆಗಳನ್ನು ತೊಲಗಿಸುತ್ತವೆ.

ಕಲೆಗಳ ನಿವಾರಣೆಗೆ ಸೋಡಾ (Baking Soda for lightening pimple scars)

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಅಡುಗೆ ಸೋಡಾದ ಸಹಾಯದಿಂದ ಕಲೆ ಹಾಗೂ ಮಚ್ಚೆಗಳನ್ನು ತೊಲಗಿಸುವುದು ಸುಲಭ ಸಾಧ್ಯ. ಒಂದು ಚಮಚೆ ಸೋಡಾಗೆ ಕೆಲವು ಹನಿಗಳಷ್ಟು ನೀರನ್ನು ಬೆರೆಸಿ ಮಚ್ಚೆ ಅಥವಾ ಕಲೆಗಳಿರುವೆಡೆಗೆ ಹಚ್ಚಬೇಕು. ಸೋಡಾ ಬಲು ಸೂಕ್ಷ್ಮವಾದ ಕಣಗಳಿಂದ ಚರ್ಮದ ಪದರಗಳನ್ನು ಶುಚಿಗೊಳಿಸಿ ಮುಖ ಹಾಗೂ ದೇಹದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ. ಸೊಡಾ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಒಮ್ಮೆಗೇ ಐದು ನಿಮಿಷಗಳಿಗಿಂತ ಹೆಚ್ಚಾಗಿ ಈ ಲೇಪನವನ್ನು ಚರ್ಮದ ಮೇಲೆ ಇರಿಸಬಾರದು ಹಾಗೂ ಹಚ್ಚಿದ ನಂತರ ಐದು ನಿಮಿಷಗಳಲ್ಲಿ ಮುಖವನ್ನು ತಣ್ಣನೆಯ ನೀರಿನಲ್ಲಿ ತೊಳೆಯಬೆಕು.

ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಟೊಮ್ಯಾಟೋ (Tomatoes to remove pimples & scars)

ಟೊಮ್ಯಾಟೋಗಳಲ್ಲಿ ವಿಟಮಿನ್ ಎ(vitamin A) ಹಾಗೂ ಲೈಕೊಪೆನ್(lycopen) ಹೆಚ್ಚಾಗಿ ಇರುವುದರಿಂದ ಚರ್ಮವನ್ನು ಶುಭ್ರಗೊಳಿಸುವುದು ಮಾತ್ರವಲ್ಲದೆ ಆರೋಗ್ಯವಾಗಿ ಸಹ ಇರಿಸುತ್ತದೆ. ಟೊಮ್ಯಾಟೋಗಳಲ್ಲಿರುವ ವಿಟಮಿನ್ ಎ ಚರ್ಮದ ಪುನರುತ್ಪತ್ತಿಗೆ ಪುರಕವಾಗಿರುವುದರಿಂದ ಕಲೆಗಳನ್ನು ಸುಲಭವಾಗಿ ತೊಲಗಿಸುತ್ತದೆ. ತಾಜಾ ಟೊಮ್ಯಾಟೋ ರಸವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳು ಬಿಟ್ಟುಬಿಡಿ. ನಂತರ ನೀರಿನೊಂದಿಗೆ ತೊಳೆಯಿರಿ. ಅವಕಾಡೊ(avacado) ಹಣ್ಣು ಹಾಗೂ ಸೌತೆಕಾಯಿಯನ್ನು ಸಹ ರುಬ್ಬಿ, ಟೊಮ್ಯಾಟೋ ರಸದೊಂದಿಗೆ ಬೆರೆಸಿ ಬಳಸಬಹುದು.

ಈ ರೀತಿಯಾಗಿ ಸಿದ್ಧಪಡಿಸಿದ ಲೇಪನವನ್ನು ಮುಖಕ್ಕೆ ಹಚ್ಚಿ ಅರ್ಧ ಘಂಟೆಯ ನಂತರ ತಣ್ನೀರಿನೊಂದಿಗೆ ತೊಳೆಯಬೇಕು.ಈ ರೀತಿಯಾಗಿ ವಾರಕ್ಕೆ ಎರಡು ದಿನ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಕಲೆ ತೊಲಗಿಸಲು ಅರಿಶಿನದ ಲೇಪನ (Aloe vera and turmeric pack to clear scars of pimples)

ಲೊಳೆಸರ(aloe vera) ಹತ್ತು ಹಲವು ಪೋಷಕಾಂಶಗಳ ನಿಧಿಯಾಗಿರುತ್ತದೇ. ವೈರಾಣು ಹಾಗೂ ಶಿಲೀಂಧ್ರ ವಿರೋಧಿಯದ ಲೊಳೆಸರ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದರಲ್ಲಿ ಮಾತ್ರವಲ್ಲದೆ ಚರ್ಮದ ತೇವಾಂಶವನ್ನು ಕಾಯ್ಡುಕೊಳ್ಳುವಲ್ಲಿಯೂ ಸಹಾಯ ಮಾಡುತ್ತದೆ. ಅರಿಶಿನ .ನೈಸರ್ಗಿಕ ಶುದ್ದಿಕಾರಕ ಮಾತ್ರವಲ್ಲದೆ ಬಹಳ ಗುಣಾಕಾರಿಯು ಹೌದು. ತಾಜಾ ಅರಿಶಿನ ಹಾಗೂ ಒಂದು ಚಮಚ ಲೊಳೆಸರದ ರಸ ಬೆರಸಿ ತಯಾರಿಸಿದ ಲೇಪನವನ್ನು ಮೊದವೆಗಳ ಮೇಲೆ ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ.

ಆವರಿಕೆ ಮರ(tea tree)ದ ಎಣ್ಣೆಯಿಂದ ಕಲೆ ನಿವಾರಣೆ (Tea tree oil to get rid of pimple scars)

ಮೊಡವೆ ಕಲೆ ನಿವರಣೆಗೆ ಆವರಿಕೆ ಮರದ ಎಣ್ಣೆ ಬಲು ಉಪಯೋಗಿ. ಮೊಡವೆಗಳಿಂದ ಉಂಟಾಗುವ ಕಲೆಗಳ ನಿವರಣೆಗೆ ಆವರಿಗೆ ಮರದ ಎಣ್ಣೆ ಬಹಳ ಶಕ್ತಿಯುತವಾದ ಹಾಗೂ ನೈಸರ್ಗಿಕ ವೈರಾಣು ವಿರೋಧಿ ಔಷಧಿ. ಎರಡು ಅಥವಾ ಮೂರು ಹನಿಗಳಷ್ಟು ಆವರಿಗೆ ಎಣ್ಣೆಯನ್ನು ಬಾದಾಮಿ ಅಥವಾ ಸೂರ್ಯಕಾಂತಿ ಎಣ್ಣೆ (ಅಥವಾ ಇನ್ಯಾವುದೇ ವಾಹಕ ತೈಲ (base oil)) ಯಲ್ಲಿ ಬೆರೆಸಿ ಕಲೆಗಳಿಗೆ ಲೇಪಿಸಿ. ಕೆಲವು ಗನ್ತೆಗಳ ತರುವಾಯು ಹತ್ತಿಯ ಸಹಾಯದಿಂದ ಎಣ್ಣೆಯನ್ನು ಒರೆಸಿ. ಆವರಿಗೆ ಮರದ ಎಣ್ಣೆ ಮೊಡವೆಗಳನ್ನು ಗುಣಪಡಿಸುವುದಲ್ಲದೆ ಮತ್ತೊಮ್ಮೆ ಮರುಕಳಿಸದಂತೆ ತಡೆಯುತ್ತದೆ.

ಮೊಡವೆ ನಿವಾರಣೆಗೆ ನಿಂಬೆ ಹಣ್ಣು (Lemon to treat pimple spots)

ನಿಂಬೆ ಹಣ್ಣೀನಲ್ಲಿರುವ, ಚರ್ಮದ ಕಣಗಳನ್ನು ಸಂಕುಚಿತಗೊಳಿಸುವ, ಒಂದು ವಿಶಿಷ್ಟ ಗುಣ ಮೊಡವೆಗಳನ್ನು ಗುಣಪಡಿಸುವುದರಲ್ಲಿ ಬಹಳ ಸಹಾಯಕಾರಿ. ಅಷ್ಟೇ ಅಲ್ಲದೆ ನಿಂಬೆ ಹಣ್ಣಿನಲ್ಲಿ ವಿಟಮಿನ್ “ಸಿ” ಯಥೇಚ್ಛವಾಗಿ ಲಭ್ಯವಿರುವುದರಿಂದ ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅರ್ಧ ನಿಂಬೆ ಹಣ್ಣನ್ನು ಎರಡರಷ್ಟು ಗ್ಲಿಸೇರಿನ್(glyserin)ನೊಂದಿಗೆ ಬೆರೆಸಿ, ಚರ್ಮದ ಮೇಲೆ ಹರಡಿರಿ. ಹತ್ತು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಕೆಲವು ದಿನಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.

ಕಲೆರಹಿತ ತ್ವಚ್ಚೆಗಾಗಿ ಶ್ರೀಗಂಧದ ಲೇಪನ (Sandal wood face pack for scar free skin)

ಮಾನವ ದೇಹ ಹಾಗೂ ಚರ್ಮದ್ ಆರೋಗ್ಯ ಕಾಪಾಡುವಲ್ಲಿ ಸಹಾಯಮಾಡುವ ಶ್ರೀಗಂಧ ಒಂದು ಚಮತ್ಕಾರೀ ಮೂಲಿಕೆ. ಇತ್ತೀಚಿನ ಹಲವು ಸಮ್ಶೊಧನೆಗಳು ಶ್ರೀಗಂಧದಿಂದ ದೇಹ ಹಾಗೂ ಚರ್ಮಕ್ಕೆ ಆಗುವ ಲಾಭಗಳನ್ನು ಸಾರುತ್ತವೆ. ಶ್ರ್ರಿಗಂಧವನ್ನು ಪನ್ನೀರಿನಲ್ಲಿ (rose water) ತೇದು ತೆಳನೆಯ ಲೇಪನವನ್ನು ಮಾಡಬೇಕು. ಈ ಲೇಪನವನ್ನು ಮೊಡವೆ ಹಾಗೂ ಕಲೆಗಳಿರುವ ಜಾಗಗಳಿಗೆ ಹಚ್ಚಿ, ಒಣಗುವ ವರೆಗೂ ಹಾಗೆಯೇ ಬಿಟ್ಟು, ನಂತರ ನೀರಿನಿಂದ ತೊಳೆಯಬೇಕು. ದಿನಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಒಂದು ವಾರದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು.

ಮೊಡವೆ ನಿರ್ಮೂಲನೆಗೆ ಜೇನು, ಅರಿಶಿನ ಹಾಗೂ ಹಾಲಿನ ಮುಖಲೇಪನ (face pack) (Honey, turmeric and milk face pack to clear bumps on face)

ಒಂದು ಬಟ್ಟಲಲ್ಲಿ ಎರಡು ಚಮಚೆ ಜೇನುತುಪ್ಪ , ಅರ್ಧ ಚಮಚ ಅರಿಶಿನ ಪುಡಿ, ಎರಡು ಚಮಚ ಹಾಲುಹಾಗೂ ಕೆಲವು ಹನಿ ಪನ್ನೀರು(rose water) ಹಾಕಿ ಕಲಸಿ ಮೊಡವೆಗಳ ಮೇಲೆ ಹಚ್ಚಿ, ಇಪ್ಪತ್ತು ನಿಮಿಷಗಳ ನಂತರ ನೀರಿನಲ್ಲಿ ತೊಳೆಯೀರಿ. ಈ ಲೇಪನವನ್ನು ಒಂದು ವಾರ ಬಳಸುವುದರಿಂದ ಮೊದವೆಗಳು ಕಡಿಮೆಯಾಗುವುದನ್ನು ನೋಡಬಹುದು. ಈ ಲೇಪನವನ್ನು ಇಡೀ ಮುಖಕ್ಕೂ ಸಹ ಹಚ್ಚಿಕೊಳ್ಳಬಹುದು.

ಮೊಡವೆ ನಿರ್ಮೂಲನೆಗೆ ಸಿಟ್ರಸ್ ಮುಖಲೇಪನ (Citrus face pack to get rid of pimple marks)

ನಿಂಬೆ ಜಾತಿಯ ಹಣ್ಣುಗಳು, ಅಂದರೆ, ನಿಂಬೆ ಹಣ್ಣು, ಕಿತ್ತಳೆ ಹಣ್ಣು ಹಾಗೂ ಟ್ಯಾಂಜರಿನ್ ಹಣ್ಣುಗಳು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಎರಡು ಚಮಚೆ ಮುಲ್ತಾನಿ ಮಿಟ್ಟಿಯೊಂದಿಗೆ ಒಂದು ಚಮಚೆ ಮೇಲಿನ ಹಣ್ಣುಗಳಲ್ಲಿ ಒಂದರ ರಸ ಹಾಗೂ ಸ್ವಲ್ಪ ನೀರನ್ನು ಬೆರಸಿ ಮೊಡವೆ ಅಥವಾ ಕಲೆಯ ಮೇಲೆ ಹಚ್ಚಿ, ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ.

ಜಾಯಿಕಾಯಿಂದ ತಿಳಿ ಹಾಗೂ ಸ್ವಚ್ಛ ತ್ವಚೆ (Nutmeg for clear skin)

ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಕೆಳಗಿನ ಲೇಪನವನ್ನು ಮಾಡಿಕೊಳ್ಳಬಹುದು. ಎರಡು ಮೂರು ಎಸಳು ಕೇಸರಿಯನ್ನು ಇಡೀ ರಾತ್ರಿ ಹಸಿ ಹಾಲಿನಲ್ಲಿ ನೆನಸಿಡಿ. ಬೆಳ್ಳಿಗ್ಗೆ ಅದೇ ಹಾಲಿಗೆ ಒಂದು ಚಮಚೆ ಜಾಯಿಕಾಯಿ ಪುಡಿಯನ್ನು ಬೆರೆಸಿ ತೆಳುವಾದ ಲೇಪನವನ್ನು ತಯಾರಿಸಿ ಮೊಡವೆಗಳ ಮೇಲೆ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಹಾಗೂ 20 ನಿಮಿಷಗಳ ನಂತರ ತೊಳೆಯಿರಿ. ಈ ರೀತಿ ಮಾಡುವುದರಿಂದ ಕಲೆರಹಿತ ತ್ವಚ್ಛೆ ನಿಮ್ಮದಾಗುತ್ತದೆ.

ಮೊಡವೆ ನಿವಾರಣೆಗೆ ಕಿತ್ತಳೆ ಹೊಟ್ಟಿನ ಫೇಸ್ ಪ್ಯಾಕ್ (Orange peel pack to get rid of pimple marks)

ಕಿತ್ತಳೆ ಹೊಟ್ಟಿನ ಸಹಾಯದಿಂದ ಮೊಡವೆ ಹಾಗೂ ಕಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ತಾಜಾ ಕಿತ್ತಳೆ ಹೊಟ್ಟನ್ನು ರಾತ್ರಿಯಿಡೀ ಹಸಿ ಹಾಲಿನಲ್ಲಿ ನೆನೆಸಿಟ್ಟು, ಬೆಳ್ಳಿಗ್ಗೆ ಹಾಲು ಹಾಗೂ ಹೊಟ್ಟನ್ನು ರುಬ್ಬಿ ಮೊಡವೆಗಳ ಮೇಲೆ ಹಚ್ಚಬಹುದು. ಮೊಡವೆಗಳು ಮುಖದ ಮೇಲೆ ಇದ್ದರೆ ಇಡೀ ಮುಖಕ್ಕೆ ಸಹ ಹಚ್ಚಬಹುದು. 30 ನಿಮಿಷಗಳ ನಂತರ ಬರಿಯ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಇದನ್ನು ದಿನ ನಿತ್ಯವೂ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಮೊಡವೆ ನಿವಾರಣೆಗೆ ಅಲೂಗಡ್ಡೇಯ ರಸ (Potato juice for pimple marks)

ಮುಖ ಬಣ್ಣಗೆಡುವುದನ್ನು ತಡೆಯಲು ಅಲೂಗಡ್ಡೆಯ ರಸ ಬಲು ಪರಿಣಾಮಕಾರಿಯಾದದ್ದು. ಅಷ್ಟೇ ಅಲ್ಲದೆ ಮೊಡವೆಗಳನ್ನು ನಿವಾರಿಸುವಲ್ಲಿ ಸಹ ಸಹಾಯಮಾಡುತ್ತದೇಲೂಗಡ್ಡೆಯನ್ನು ಜಜ್ಜಿ, ಅದರ ರಸವನ್ನು ತೆಗೆದು ಮೊಡವೆ ಅಥವಾ ಕಲೆಗಳಿರುವೆಡೆ ಹಚ್ಚಬೇಕು. ಅಥವಾ ಈಡೀಇ ಆಲೂಗಡ್ಡೆಯನ್ನು ಲೇಪನದಂತೆ ಮಾಡಿ ಬಳಸಬಹುದು. ಈ ರೀತಿಯಾಗಿ ಹಚ್ಚಿದ ರಸ ಅಥವಾ ಲೇಪನ ಸಂಪೂರ್ಣ ಕಪ್ಪಾಗುವವರೆಗೂ ಇರಿಸಿ, ನಂತರ ಒದ್ದೆ ಕೈಗಳಿಂದ ರಸವನ್ನು ತೆಗೆದು ನಂತರ ನೀರಿನೊಂದಿಗೆ ಮುಖವನ್ನು ತೊಳೆಯಬೇಕು.

ಮೊಡವೆಗಳ ಶೀಘ್ರ ನಿವಾರಣೆಗೆ ಕೋಕಾ ಬೆಣ್ಣೆ (Cocoa butter for healing the pimple marks quickly)

ಈ ಕೆಳ್ಗಿನ್ ಆ ಮದ್ದು ಬರೆ ಸಧಾರಣ ಅಥವಾ ಒಣ ಚರ್ಮವುಳ್ಲವರಿಗೆ ಮಾತ್ರ. ಕೋಕಾ ಬೆಣ್ಣೆ ತ್ವಚೆಯ ತೇವಾಂಶ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆಶ್ ಅಲ್ಲದೆ ಚರ್ಮದ ನೈಸರ್ಗಿಕವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಮೊಡವೆಗಳ ಸುತ್ತಣ ಚರ್ಮವನ್ನು ಟೋನರ್(toner) ಬಳಸಿ ಸ್ವಚ್ಛಗೊಳಿಸಿಕೊಂಡು ಕೋಕಾ ಬೆಣ್ಣೆಯನ್ನು ಹಚ್ಚಿ. ಮರುದಿನ ಬೆಳ್ಳಿಗೆ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿರಿ. ಈ ರೀತಿಯಾಗಿ 15 ದಿನಗಳು ಮಾಡುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.

ಮೊಡವೆ ಹಾಗೂ ಕಲೆ ಗಳನ್ನು ತೆಗೆಯಲು ಮೆಂತ್ಯೆ ಹಾಗೂ ಹಾಲಿನ ಮುಖಲೇಪನ (Fenugreek seed with milk for removing pimple scars)

ಚರ್ಮವನ್ನು ಪುನರುಜ್ಜಿವನಗೊಳಿಸಲು ಬೇಕಾದಂತಹ ಕಿನ್ವಗಳು ಮೆಂತ್ಯೆಯಲ್ಲಿ ಇರುತ್ತವೆ. ಒಂದು ಚಮಚೆ ಮೆಂತ್ಯೆಯನ್ನು ರಾತ್ರಿ ಹಾಲಿನಲ್ಲಿ ನೆನೆಸಿಟ್ಟು, ಬೆಳ್ಳಿಗ್ಗೆ ಅದನ್ನು ರುಬ್ಬಿ, ಲೇಪನವನ್ನು ತಯಾರಿಸಿ ಮೊಡವೆ ಇರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಾಗೂ ಕತ್ತಿಗೆ, ಅವಶ್ಯಕತೆಗೆ ತಕ್ಕಂತೆ ಲೇಪಿಸಿಕೊಳ್ಳಬಹುದು. ಲೇಪಿಸಿದ ನಂತರ 20-30 ನಿಮಿಷಗಳು ಅದನ್ನು ಒಣಗಲು ಬಿಟ್ಟು, ನಂತರ ಬರಿಗೈಯಿಂದ ನೀರಿನಲ್ಲಿ ತೊಳೆಯಬೆಕು.

ಕಲೆಗಳಿಗೆ ಮೊಸರು ಹಾಗೂ ಸೌತೆಕಾಯಿಯ ಲೇಪನ (Yogurt and cucumber pack for pimple marks)

ತ್ವಚ್ಚೆಯನ್ನು ಸವರ್ಣಗೊಳಿಸುವಲ್ಲಿ ಅವಶ್ಯವಾದ ಕಿಣ್ವಗಳು ಮೊಸರಿನಲ್ಲಿ ಇಟ್ತವೆ ಹಾಗೂ ಚರ್ಮವನ್ನು ಸುಕೋಮಲವಾಗಿಸಲು ಸೌತೆಕಾಯಿ ಬಹಳ ಪರಿಣಾಮಕಾರಿಯಾದ ತರಕಾರಿ. ಬೇಕಾದಷ್ಟು ಸೌತೆಕಾಯಿಯನ್ನು ಜಜ್ಜಿ ಅದರಲ್ಲಿ ಒಂದು ಚಮಚೆಯಷ್ಟು ಮೊಸರನ್ನು ಬೆರೆಸಿ ಕಲೆ ಅಥವಾ ಮೊಡವೆ ಸುತ್ತಲಿನ ಪ್ರದೇಶಕ್ಕೆ ಹಚ್ಚಿರಿ. 20 ನಿಮಿಷಗಳ ನಂತರ ನೀರಿನೊಂದಿಗೆ ತೊಳೆಯಿರಿ. ಈ ಈತಿಯಾಗಿ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಹದಿನೈದು ದಿನಗಳ ಒಳಗೆ ಫಲಿತಾಂಶವನ್ನು ಕಾಣಬಹುದು.

ಕಲೆ ರಹಿತ ತ್ವಚ್ಚೆಗೆ ಕೊಬ್ಬರಿ ಎಣ್ಣೆ (Coconut oil for erasing pimple spots)

ಚರ್ಮದ ತೇವಾಂಶವನ್ನು ಕಾಪಾಡಲು ಹಾಗೂ ಚರ್ಮವನ್ನು ಒಳಗಿನಿಂದ ಆರೋಗ್ಯಕರವಾಗಿಸಲು ಕೊಬ್ಬರಿ ಎಣ್ಣೆ ಒಂದು ಅತ್ಯಂತ ಪರಿಣಾಮಕಾರಿಯಾದ ನೈಸರ್ಗಿಕ ಔಷಧಿ. ರಾತ್ರಿ ಮಲಗುವ ಮುನ್ನ ಶುದ್ದವಾದ ಕೊಬ್ಬರಿ ಎಣ್ಣೆ ಒಂದು ಚಮಚೆಯಷ್ಟು ತೆಗೆದುಕೊಂಡು ಅದನ್ನು ಕಲೆಗಳ ಮೇಲೆ ಆಳವಾಗಿ ಹಚ್ಚಬೇಕು. ಮರುದಿನ ಬೆಳ್ಳಿಗೆ ಒದ್ದೆ ಹತ್ತಿಯಿಂದ ಎಣ್ಣೆಯನ್ನು ಒರೆಸಿ ತೆಗೆದು ನಂತರ ಮುಖವನ್ನು ತೊಳೆಯಬೇಕು.

ಕಲೆ ತೊಲಗಿಸಲು ಗುಲಾಬಿ ಬೀಜದ ಎಣ್ಣೆ (Rose-hip oil for removing scars)

ಚರ್ಮದ ಮೇಲಿರುವ ಬೆಡದ ಕಲೆಗಳನ್ನು ತೊಲಗಿಸಲು ಗುಲಾಬಿ ಬೀಜದ ಎಣ್ಣೆಯಲ್ಲಿರುವ ಟ್ರಾನ್ಸ್ರೆಟಿನೊಯೀಕ್ ಆಮ್ಲ(Trans-retinoic acid) ಬಹಳ ಪರಿಣಾಮಕಾರಿಯಾದದ್ದು. ಜಿಡ್ಡು ಕಡಿಮೆಯಿರುವ ಗುಲಾಬಿ ಬೀಜದ ಎಣ್ಣೆಯನ್ನು ಎಣ್ಣೆಯುಕ್ತ ಚರ್ಮದವರು ಸಹ ನಿಶ್ಚಿಂತೆಯಿಂದ ಬಳಸಬಹುದು. ಕಲೆಯ ಮೇಲೆ ಒಂದು ಹಾನಿಯಷ್ಟು ಗುಲಾಬಿ ಬೀಜದ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಅದನ್ನು ರಾತ್ರಿಯಿಡೀ ಇರಿಸಿ ಬೆಳಿಗ್ಗೆ ಧರಾಳವಾಗಿ ನೀರನ್ನು ಬಳಸಿ ತೊಳೆಯಬೇಕು

ಪಪಾಯಯಿಂದ ಕಲೆ ನಿವಾರಣೆ (Papaya for lightening pimple marks)

ಪಪಾಯದಲ್ಲಿ ಚರ್ಮವನ್ನು ಬಿಳಿಯಾಗಿಸುವ ಕಿಣ್ವ(bleach) ಗಳಿರುವುದರಿಂದ ಕಲೆಗಳನ್ನು ಕಡಿಮೆ ಮಾಡುವುದರಲ್ಲಿ ಅದು ಸಹಾಯಕಾರಿ. ಪಪ್ಪಾಯ ಹಣ್ಣಿನ ಒಂದು ಹೊಳು ತೆಗೆದುಕೊಂಡು ಮೊಡವೆಯ ಮೇಲೆ ಹಿತವಾಗಿ ಉಜ್ಜಿರಿ. 5-6 ನಿಮಿಷಗಳು ಉಜ್ಜಿದ ನಂತರ 15-20 ನಿಮಿಷಗಳು ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಫಲಿತಾಂಶ ಉತ್ತಮವಾಗಿರುತ್ತದೆ.

ಕಲೆ ತೆಗೆಯುವ ಮಾಯಜಲ ಏಳನೀರು (Green coconut water for erasing pimple spots)

ಮೊಡವೆಗಳನ್ನು ಹಾಗೂ ಕಲೆಗಳನ್ನು ತೆಗೆಯಲು ಇದು ಅತ್ಯಂತ ಸುಲಭ ವಿಧಾನ. ದಿನದಲ್ಲಿ ನಿಮಗೆ ಸಾಧ್ಯವಾದಸ್ಟು ಬಾರಿ ಎಳನೀರಿನಿಂದ ಮೊಡವೆ ಅಥವಾ ಕಲೆ ಇರುವ ಭಾಗವನ್ನು ತೊಳೆಯಿರಿ. ಆದರೆ ನಂತರ ನೀರಿನಲ್ಲಿ ಮುಖವನ್ನು ತೊಳೆಯದೇ ಎಳನೀರನ್ನು ಅಲ್ಲಿಯೇ ಒಣಗಲು ಬಿಡಿ. ಎಳನೀರು ಪೂರ್ತಿ ಒಣಗಿದ ನಂತರ ನೀರಿನಲ್ಲಿ ಮುಖ ತೊಳೆದು ತೇವಾಂಶ ನೀಡುವ ಮಾಯಿಸ್ಟುರೈಸಿಂಗ್(moisturizing) ಕ್ರಿಮ್ ಹಚ್ಚಿಕೊಳ್ಳೀ.

ಕಲೆಗಳನ್ನು ತೊಲಗಿಸಲು ಮತ್ತಷ್ಟು ಸಲಹೆಗಳು (Tips to take care of pimple scars)

  • ಮುಖದ ಮೇಲೆ ಹೊಸ ಮೊಡವೆಗಳು ಬರುತ್ತಿದ್ದರೆ ಯಾವುದೇ ಸ್ಕ್ರಬ್ಗಳನ್ನು (scrub)ಬಳಸಬೇಡಿ. ಇದರಿಂದ ಕಲೆಅಗಳು ಹೆಚ್ಚಾಗಬಹುದು.
  • ಮೊದವೆಗಳು ಕಡಿಮೆಯಾದಾಗ ನಿರ್ಜೀವ ಚರ್ಮದ ಕಣಗಳನ್ನು ತೆಗೆದು ಹೊಸ ಚರ್ಮ ಬೆಳೆಯಲು ಅವಕಾಶ ಮಾಡಿಕೊಡಿ.
  • ಸಾಕಷ್ಟು ನೀರು ಕುಡಿಯಿರಿ ಹಾಗೂ ತಾಜಾ ಹಣ್ಣುಗಳನ್ನು ಸೇವಿಸಿರಿ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ.
  • ಮೊದವೆಗಳನ್ನು ಮುಟ್ಟುವುದಾಗಲಿ ಆಥವಾ ಹೀಚುಕುವುದಾಗಲಿ ಮಾದದಿರಿೀದರಿಂದಾ ಚರ್ಮಕೆ ಗಾಯವಾಗಿ ಕಲೆಗಳಾಗುತ್ತವೆ. ಮೇಲಿನ ಯಾವುದೇ ನೈಸರ್ಗಿಕ ವಿಧಾನದಿಂದ ಮೊಡವೆಗಳನ್ನು ಹಾಗೂ ಕಲೆಗಳನ್ನು ವೇಗವಾಗಿ ಹೋಗಲಾಡಿಸಿ ಸುಂದರ, ನಿಷ್ಕಲ್ಮಶ ಚರ್ಮವನ್ನು ಪಡೆಯಿರಿ.
loading...