How to delay your period naturally / kannada home remedies to postpone menstruation – ನೈಸರ್ಗಿಕವಾಗಿ ಮುಟ್ಟನ್ನು ಮುಂದೂಡುವುದು ಹೇಗೆ ಹಾಗೂ ಮುಟ್ಟು ಮುಂದೂಡುವುದಕ್ಕೆ ಮನೆ ಮದ್ದುಗಳು

ಮುಟ್ಟು ಎಂಬುದು ಸಾಮಾನ್ಯವಾಗಿ ಹನ್ನೆರಡರಿಂದ ಐವತ್ತರ ನಡುವಿನ ಹೆಂಗಸರಲ್ಲಿ ಕಂಡುಬರುವ ಒಂದು ನೈಸರ್ಗಿಕ ಪ್ರಕ್ರಿಯೆ. ಈ ನೈಸರ್ಗಿಕ ಕ್ರಿಯೆ ಮಹಿಳೆಯರಲ್ಲಿ ಸ್ತ್ರೀತನವನ್ನು ಹೊರತಂದು ಪುರುಷರಿಂದ ಬೇರ್ಪಡಿಸುತ್ತದೆ. ಆದರೆ ಮುಟ್ಟಿನ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೇ ಹಲವು ರೀತಿಯ ಸಂವೇದನೆ, ನೋವು ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಟ್ಟಾದ ಹೆಂಗಸರಿಗೆ ಹಲವು ಧಾರ್ಮಿಕ ಸ್ಠಳಗಳಿಗೂ ಸಹ ಪ್ರವೇಶವಿರುವುದಿಲ್ಲ. ಹೀಗಾಗಿ ಕೆಲವೊಮ್ಮೆ ಮುಟ್ಟನ್ನು ಮುಂದೂಡುವ ಪರಿಸ್ಥಿತಿಗಳು ಎದುರಾಗಬಹುದು. ಇದಕ್ಕಾಗಿ ಹಲವು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಹಲವು ನೈಸರ್ಗಿಕವಾದ ವಿಧಾನಗಳಿಂದಲೂ ಸಹ ಮುಟ್ಟನ್ನು ತಡೆಯಬಹುದು.
ಮುಟ್ಟನ್ನು ಮುಂದೂಡಲು ಅಥವಾ ಹಿಂದೂಡಲು ಮಹಿಳೆಯರಿಗೆ ಹಲವು ಕಾರಣಗಳಿರಬಹುದು. ಕೆಲವು ಧಾರ್ಮಿಕ ಹಬ್ಬಗಳು ಹಾಗು ಆಚರಣೆಯ ಸಮಯಗಳಲ್ಲಿ ಮುಟ್ಟಾಗಿರುವ ಹೆಂಗಸರಿಗೆ ಪ್ರವೇಶವಿರುವುದಿಲ್ಲ. ಅಷ್ಟೇ ಅಲ್ಲದೆ ನಿಮ್ಮ ಮದುವೆ ದಿನವೇ ನಿಮಗೆ ಅತಿಯಾದ ಋತುಸ್ರಾವವಾಗುವುದರಿಂದ ಹಲವು ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಕೆಲವು ಕೃತಕ ಹಾಗೂ ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಿ ಋತುಸ್ರಾವವನ್ನು ಹಿಂದೂಡಬಹುದು ಅಥವಾ ಮುಂದೂಡಬಹುದು. ಆದರೆ ಕೃತಕ ವಿಧಾನಗಳನ್ನು ಬಳಸಿ ಮುಟ್ಟನ್ನು ತಡೆಯುವುದರಿಂದ ಕೆಲವು ತೊಂದರೆಗಳನ್ನು ಎದುರುಗೊಳ್ಳಬಹುದು ಆದರೆ ನೈಸರ್ಗಿಕವಾದ ಮನೆ ಮದ್ದುಗಳನ್ನು ಬಳಸಿ ಮುಟ್ಟನ್ನು ಮುಂದೂಡುವುದು ಪರಿಣಾಮಕಾರಿ ಮಾತ್ರವಲ್ಲದೆ ಸುರಕ್ಷಿತವೂ ಹೌದು.

ನೈಸರ್ಗಿಕವಾಗಿ ಮುಟ್ಟನ್ನು ತಡೆಯಲು ವಿಧಾನಗಳು (Steps to delay periods naturally)

ದಿನನಿತ್ಯದ ಆಹಾರದಲ್ಲಿ ಖಾರವನ್ನು ಕಡಿಮೆ ಮಾಡುವುದು (Remove spicy food from diet)

ಖಾರದ ಆಹಾರ ನಿಮ್ಮ ರಕ್ತ ಪರಿಚಲನೆಯನ್ನು ಹೆಚ್ಚಿಸಿ ಋತುಸ್ರಾವಕ್ಕೆ ಈಡುಮಾಡುತ್ತದೆ. ಆದ್ದರಿಂದ ಮುಟ್ಟನ್ನು ಮುಂದೂಡಬೇಕೆಂದುಕೊಂಡಾಗ ಎಲ್ಲಾ ರೀತಿಯ ಖಾರದ ಪದಾರ್ಥಗಳನ್ನು ತಿನ್ನುವುದನ್ನು ತ್ಯಜಿಸಬೇಕು. ಖಾರದ ಆಹಾರಗಳೆಂದರೆ ಬೆಳ್ಳುಳ್ಳಿ, ಮೆಣಸಿನ ಕಾಯಿ, ಕರಿ ಮೆಣಸು, ಹಾಗೂ ಬೆಳ್ಳುಳ್ಳಿ.ಈ ರೀತಿಯ ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಮೂಲಿಕೆಗಳು (Herbs)

ಕಾಚು ಹಾಗೂ ಕಲ್ಲು ಸೂಸಿವೆ ಗಿಡಗಳನ್ನು ಒಣಗಿಸಿ ಪುಡಿಮಾಡಿಕೊಳ್ಳಬೇಕು. ಅದನ್ನು ನೀರಲ್ಲಿ ಬೆರೆಸಿ ಕುಡಿದರೆ ಮುಟ್ಟನ್ನು ಮುಂದೂಡಬಹುದು. ಕಲ್ಲು ಸೂಸಿವೆ ಗಿಡ ಎಂದು ಕರೆಯಲ್ಪಡುವ ಮೂಲಿಕೆಯಿಂದ ಹೆಚ್ಚು ರಕ್ತಸ್ರಾವವನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ಇದನ್ನು ಬಳಸಿ ಮುಟ್ಟೀನ ಸ್ರಾವವನ್ನು ಸಹ ಮುಂದೂಡಬಹುದು. ಪೈಲ್ಸ್ನಿಂದ ನರಳುವವರಿಗೆ ಕಾಚು ಗಿಡದ ಔಷಧಿಯನ್ನು ಮಾಡಿಕೊಡಬಹುದು. ಜ್ವರ ಹಾಗೂ ನೆಗಡಿಯಾದಾಗಲೂ ಕಾಚು ಮೂಲಿಕೆಯ ಔಷಧಿ ಬಹಳ ಪ್ರಭಾವಿಯಾಗಿರುತ್ತದೇ. ಇದೆ ಮೂಲಿಕೆಯನ್ನು ಮುಟ್ಟನ್ನು ಮುಂದೆಹಾಕುವುದರಲ್ಲಿ ಬಳಸಬಹುದು.

ವ್ಯಾಯಾಮ (Exercise)

ನಿಯಮಿತ ಸಮಯಕ್ಕೆ ಮುನ್ನವೇ ಮುಟ್ಟಾಗುವುದಕ್ಕೆ ಭಾವಾನಾತ್ಮಕ ಒತ್ತಡ ಒಂದು ಮುಖ್ಯವಾದ ಕಾರಣ. ಒತ್ತಡವನ್ನು ನಿವಾರಿಸಲು ವ್ಯಾಯಾಮ ಒಂದು ಉತ್ತಮವಾದ ಸಾಧನ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಒತ್ತಡವನ್ನು ಹಿಡಿತದಲ್ಲಿ ಇಡಬಹುದು. ಹಾಗೂ ವ್ಯಾಯಾಮ ನಿಮ್ಮ ಆರೋಗ್ಯವನ್ನು ಸುಸ್ತಿತಿಯಲ್ಲಿಡಲು ಸಹಾಯಮಾಡುತ್ತದೆ. ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಹೆಚ್ಚಾಗಿ ಇಲ್ಲದವರಿಗೆ ಬಹಳಷ್ಟು ಸಂಕೀರ್ಣ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲಿ ಲಯತಪ್ಪುವ ಮುಟ್ಟು ಅಂದರೆ ತಿಂಗಳಿಗೆ ಎರಡು ಬಾರಿ ಆಗುವುದು ಅಥವಾ ಎರಡು ತಿಂಗಳಿಗೆ ಒಂದು ಬಾರಿ ಆಗುವುದು ಸಹ ಒಂದು ಸಮಸ್ಯೆ.
ನಿಯಮಿತ ವ್ಯಾಯಾಮ ಮಾಡುವುದರಿಂದ ಇದನ್ನು ತಪ್ಪಿಸಬಹುದು. ವ್ಯಾಯಾಮವೆಂದರೆ ಜಿಮ್ ಗೆ ಹೋಗಬೇಕಾಗಿ ಇಲ್ಲ, ವೇಗದ ನಡಿಗೆ, ಓಡುವುದು, ನಡೆಯುವುದು, ಈಜುವುದು ಇತ್ಯಾದಿ ವ್ಯಾಯಾಮಗಳಿಂದಲೂ ನಮ್ಮ ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಬಹುದು ಹಾಗೂ ಅನಿಯಮಿತವಾಗಿ ಮುಟ್ಟಾಗುವುದನ್ನು ತಡೆಯಬಹುದು.

ಹೆಸರು ಬೆಳೆ (Gram lentils)

ಕೆಲವು ನಿರ್ಧಿಷ್ಟ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮುಟ್ಟನ್ನು ಹಿಂದು ಅಥವಾ ಮುಂದು ಮಾಡಬಹುದು. ಸ್ವಲ್ಪ ಹೆಸರು ಬೇಳೆಯನ್ನು ಬೇಯಿಸಿ ಸೂಪ್ ಅನ್ನು ತಯಾರಿಸಿಕೊಳ್ಳಿ ಇದನ್ನು ದಿನವೂ ನಿಯಮಿತವಾಗಿ ಸೇವಿಸುವುದರಿಂದ ಮುಟ್ಟನ್ನು ಮುಂದೆ ಹಾಕಬಹುದು. ಆದರೆ ಈ ಸೂಪನ್ನು ತಯಾರಿಸಲು ನಿರ್ಧಿಷ್ಟವಾದ ವಿಧಾನವನ್ನು ಅನುಸರಿಸಬೇಕು. ಹೆಸರು ಬೇಳೆಯನ್ನು ಮೆತ್ತಗಾಗುವ ವರೆಗೂ ಹುರಿದು ನಂತರ ಅದನ್ನು ಪುಡಿ ಮಾಡಿಕೊಂಡು, ಅದರಿಂದ ಗಟ್ಟಿಯಾದ ಸೂಪನ್ನು ತಯಾರಿಸಿ ಮುತ್ತನ್ನು ಮುಂದೂಡುವುದಕ್ಕಾಗಿ ಸೇವಿಸಬಹುದು.

ಕುಡಿಯುವ ನೀರು (Drinking water)

ಎಲ್ಲರ ಮನೆಯಲ್ಲೂ ಸಾಕಷ್ಟು ಕುಡಿಯುವ ನೀರು ಇರುತ್ತದೆ ಆದರೆ ನೀವು ಸಾಕಷ್ಟು ನೀರನ್ನು ಕುಡಿಯುತ್ತಿರುವಿರೆ? ಕೆಲವು ಮಂದಿ, ಮುಖ್ಯವಾಗಿ ಹೆಂಗಸರು ನೀರನ್ನು ಕುಡಿಯುವುದನ್ನು ತಡೆಯುತ್ತ ಹೋಗುತ್ತಾರೆ. ಆದರೆ ಇದರಿಂದ ಬಹಳಷ್ಟು ತೊಂದರೆಗಳಿವೆ. ಈ ರೀತಿಯಾಗಿ ಕಡಿಮೆ ನೀರು ಕುಡಿಯುವುದರಿಂದ ಬೇರೆ ಆನಾರೋಗ್ಯಗಳಿಗೆ ದಾರಿಯಾಗುವುದಲ್ಲದೆ ಮುಟ್ಟಿನ ಚಕ್ರದಲ್ಲಿ ಸಹ ಏರುಪೇರಾಗುತ್ತದೆ. ನಿಮ್ಮ ಮುಟ್ಟು ನಿಯಮಿತವಾಗಿ ಆಗಲು ಹಾಗೂ ಸುಲಭವಾಗಿರಲು ಸಾಕಷ್ಟು ನೀರು ಸೇವಿಸುವುದು ಅತ್ಯವಶ್ಯಕ.

ಅಧಿಕ ಒತ್ತಡವನ್ನು ತಡೆಯುವುದು (Control over stress)

ಮನುಷ್ಯರ ಅನೇಕ ಅನಾರೊಗ್ಯಗಳಿಗೆ ಹಾಗೂ ಇತರೆ ತೊನ್ದರೆಗಳಿಗೆ ಒತ್ತಡವೇ ಪ್ರಮುಖ ಕಾರಣ. ನಿಮ್ಮ ನಿರೀಕ್ಷಿತ ಕಾಲಕಿಂತ ಮುಂಚಿತವಾಗಿ ಬರುವ ಅಸಹಜ ಮುಟ್ಟಿನ ಚಕ್ರಕ್ಕೂ ಸಹ ಈ ಒತ್ತಡವೇ ಕಾರಣವಾಗಿರಬಹುದು. ಪ್ರಾಣಾಯಾಮ ಮಾಡುವುದರಿಂದ ಒತ್ತಡವನ್ನು ಹಿಡಿತದಲ್ಲಿರಿಸಿಕೊಳ್ಳಬಹುದು. ಉಸಿರನ್ನು ದೀರ್ಘವಾಗಿ ತೆಗೆದುಕೊಂಡು, ಕಣ್ಣು ಮುಚ್ಚಿ ನಿಧಾನವಾಗಿ ಹೊರಬಿಡುವುದರಿಂದ ನಿಮ್ಮ ಒತ್ತಡವನ್ನು ತಕ್ಷಣ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಋತುಚಕ್ರವನ್ನು ಸಹ ಸಹಜವಾಗಿಸಬಹುದು.

ವಿನಿಗರ್ (Vinegar)

ಮುಟ್ಟನ್ನು ಮುಂದೂಡುವುದಕ್ಕೆ ನೈಸರ್ಗಿಕವಾದ ಪರಿಣಾಮಕಾರಿ ವಿಧಾನವೆಂದರೆ ವಿನಿಗರ್. ಒಂದು ಲೋಟ ಶುದ್ಧೀಕರಿಸಿದ ಕುಡಿಯುವ ನೀರಿಗೆ ಮೂರರಿಂದ ನಾಲ್ಕು ಚಮಚೆ ವಿನಿಗರ್ ಬೆರೆಸಿ ಕುಡಿಯುವುದರಿಂದ ನಿಮ್ಮ ಮುಟ್ಟನ್ನು ಮೂರು ನಾಲ್ಕು ದಿನಗಳವರೆಗೆ ಮುಂದೂಡಬಹುದು. ಇದಕ್ಕಿಂತ ಹೆಚ್ಚು ದಿನಗಳು ಮುಂದೂಡಬೇಕಾದರೆ ನಿಯಮಿತವಾಗಿ ವಿನಿಗರ್ ನೀರನ್ನು ಸೇವಿಸುತ್ತೀರಿ. ಆದರೆ ವಿನಿಗರ್ ನೀರನ್ನು ದಿನಕ್ಕೆ ಮೂರು ನಾಲ್ಕು ಬಾರಿ ಕುಡಿಯಬೇಕು.

ಕೊತ್ತಂಬರಿ ಎಲೆಗಳಿಂದ ಮುತ್ತಿನ ಮುಂದೂಡುವಿಕೆ (Parsley leaves to delay menstruation)

ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮುಟ್ಟನ್ನು ಮುಂದೂಡಲು ಕೊತ್ತಂಬರಿ ಬಹಳ ಸಹಾಯಾಕಾರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಕೊತ್ತಂಬರಿಯನ್ನು ತಂದು ಒಂದು ಬಟ್ಟಲು ನೀರಿನಲ್ಲಿ ಕುದಿಸಿರಿ. ಸಣ್ಣ ಉರಿಯಲ್ಲಿ ಇಪತ್ತು ನಿಮಿಷ ಕುದಿದ ನಂತರ ನೀರಿಗೆ ಕೊತ್ತಂಬರಿಯ ಸ್ವಾದ ಬರುತ್ತದೆ. ನಂತರ ಆ ನೀರನ್ನು ಸೋಸಿ ಅದಕ್ಕೆ ಒಂದು ಚಮಚೆ ಜೇನು ತುಪ್ಪವನ್ನು ಬೆರೆಸಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ನಿಮ್ಮಗೆ ಬೇಕಾದಷ್ಟು ಕಾಲ ಮುಟ್ಟನ್ನು ಮುಂದೂಡಬಹುದು.

ಸಾಕಷ್ಟು ನೀರನ್ನು ಕುಡಿಯಿರಿ (Drink good quantity of water)

ಮುಟ್ಟನ್ನು ತಡೆಯಲು ದಿನವೂ ಸಾಕಷ್ಟು ನೀರನ್ನು ಸೇವಿಸಬೇಕಾಗುತ್ತದೆ. ಕೆಲವು ಮಹಿಳೆಯರು ದಿನಕ್ಕೆ ಅವಶ್ಯಕ್ಕಿಂತ ಕಡಿಮೆ ನೀರನ್ನು ಕುಡಿಯುತ್ತಾರೆ. ಇದು ಬಹಳ ಕೆಟ್ಟ ಅಭ್ಯಾಸವಾಗಿದ್ದು ಇದರಿಂದ ಬಹಳಷ್ಟು ತೊಡಕುಗಳು ಎದುರಾಗುತ್ತವೆ. ಬಹಳಷ್ಟು ಮಹಿಳೆಯರು ಹೆಚ್ಚು ನೀರು ಕುಡಿಯುವುದರಿಂದ ತಮ್ಮ ಮುಟ್ಟಿನ ದಿನಗಳು ಮುಂದೆ ಹೋದಂತೆ ಹೇಳಿರುತ್ತಾರೆ. ಅಷ್ಟೇ ಅಲ್ಲದೆ ಸಾಕಷ್ಟು ನೀರು ಸೇವಿಸುವುದರಿಂದ ಮುಟ್ಟಿನಲ್ಲಿ ಸಹ ಹೆಚ್ಚು ನೋವಿರದೆ ಆರಾಮವಾಗಿ ಇರಬಹುದು.

.ಜೆಲೆಟಿನ್ (Gelatin)

ನಿಮ್ಮ ಮುಟ್ಟನ್ನು ನೈಸರ್ಗಿಕವಾಗಿ ಮುಂದೂಡಲು ಜೆಲೆಟಿನ್ ನ ಸಹಾಯ ಪಡೆಯಬಹುದು. ನಿಮ್ಮ ಮನೆಯಲ್ಲಿರುವ ಜೆಲೇಟಿನ್ ಅನ್ನು ಬಳಸಬಹುದು ಅಥವಾ ಅಂಗಡಿಯಿಂದ ಕೊಂಡು ತರಬಹುದು. ಒಂದು ಇಡೀ ಜೆಲೆಟಿನ್ ಪೊಟ್ಟಣವನ್ನು ಬಿಸಿನೀರಿನಲ್ಲಿ ಹಾಕಿ ನಂತರ ಅದನ್ನು ಸೇವಿಸಬಹುದು. ಇದರಿಂದ ಮುಟ್ಟು ನಿಲ್ಲುತ್ತದೆ. ಈ ವಿಧಾನವನ್ನು ಬಳಸಿರುವ ಹೆಂಗಸರು ಹೇಳುವ ಪ್ರಕಾರ ಜೆಲೆಟಿನ್ ಅನ್ನು ಒಂದು ಬಾರಿ ಸೇವಿಸಿದರೆ ಮುಟ್ಟನ್ನು ಕನಿಷ್ಟ ನಾಲ್ಕು ಗಂಟೆಗಳವರೆಗೂ ತಡೆಯಬಹುದು. ಹೀಗಾಗಿ ನೀವು ಇದನ್ನು ದಿನಕ್ಕೆ ಮುರರಿಂದ ನಾಲ್ಕು ಬಾರಿ ಸೇವಿಸುವುದರಿಂದ ನಿಮ್ಮ ಮುಟ್ಟನ್ನು ನಿಮ್ಮಗೆ ಬೇಕಾದಷ್ಟು ಕಾಲ ಮುಂದೂಡಬಹುದು.

ತಂಪುದಾಯಕ ಆಹಾರ (Food with low temperature)

ಮುಟ್ಟನ್ನು ಮುಂದೂಡಬೇಕಾಗಿರುವ ಮಹಿಳೆಯರು ತಮ್ಮ ಆಹಾರದ ಬಗ್ಗೆಗೆ ಜಾಗ್ರತೆ ವಹಿಸಬೇಕು. ಖಾರ ಹೆಚ್ಚಾಗಿರುವ ಅಥವಾ ಬಿಸಿ ಪದಾರ್ಥಗಳನ್ನು ಸ್ವೀಕರಿಸಬಾರದು. ಖಾರ ಅಥವಾ ಬಿಸಿಯಾದ ಪದಾರ್ಥಗಳು ನಿಮ್ಮ ದೇಹದ ಶಾಖವನ್ನು ಹೆಚ್ಚಿಸಿ ನಿಮ್ಮ ಮುಟ್ಟನ್ನು ಹಿಂದೂಡಬಹುದು. ಹೀಗಾಗಿ ತಣ್ಣನೆಯ ಅಥವಾ ತಂಪುದಾಯಕ ಪದರ್ಥಗಳನ್ನು ಮಾತ್ರ ಸೇವಿಸುವುದರಿಂದ ಹಾಗೂ ಬಿಸಿಯಾದ ಅನ್ನ ಹಾಗೂ ಸಾರು ಸೇವಿಸುವುದರ ಬದಲು ತಣ್ಣನೆಯ ಪದಾರ್ಥಗಳನ್ನು ಸೇವಿಸುವುದರಿಂದ ಮುಟ್ಟನ್ನು ಮುಂದೂಡಬಹುದು.

ನಿಂಬೆಯಿಂದ ಮುಟ್ಟಿನ ಮುಂದೂಡುವಿಕೆ (Lemon to postpone periods)

ಋತುಚಕ್ರವನ್ನು ಮುಂದೂಡಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಹಣ್ಣು ಅಥವಾ ತರಕಾರಿಯೆಂದರೆ ನಿಂಬೆಹಣ್ಣು. ಅದರಲ್ಲಿ ನೈಸರ್ಗಿಕವಾಗಿ ಇರುವ ಆಮ್ಲದ ಗುಣ ಹಾಗೂ ಸಿಟ್ರಿಕ್ ಆಮ್ಲ ಮುಟ್ಟಿನ ಸ್ರಾವವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ನಿಂಬೆ ಹಣ್ಣು ಮುಟ್ಟನ್ನು ತಡೆಯುವುದು ಮಾತ್ರವಲ್ಲದೆ ಮುಟ್ಟಿನ ಕಾಲದಲ್ಲಿ ಉಂಟಾಗುವ ನೋವು, ಉರಿ ಅಥವಾ ಹಸಿಯಾಗುವಿಕೆ ಇತ್ಯಾದಿ ತೊಂದರೆಗಳಿಂದಲು ಸಹ ನಿಮ್ಮನು ಕಾಪಾಡುತ್ತದೆ. ನಿಂಬೆಹಣ್ಣನ್ನು ಜಗಿದು ಅದರ ರಸವನ್ನು ಹೀರುವುದರಿಂದ ಋತುಸ್ರಾವವನ್ನು ಮುಂದೂಡಬಹುದು ಅಥವಾ ಒಂದು ಲೋಟ ನೀರಿಗೆ ಅರ್ಧ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಸಹ ಮುಟ್ಟನ್ನು ಮುಂದೂಡಬಹುದು. ಆದರೆ ಋತುಸ್ರಾವದ ಕಾಲದಲ್ಲಿ ನಿಂಬೆಹಣ್ಣನ್ನು ಸೇವಿಸಬೇಡಿ. ಇದರಿಂದ ನೋವು ಹೆಚ್ಚಾಗುತ್ತದೆ. ಮುಟ್ಟಿನ ದಿನಗಳ ಮುಂಚೆ ಮಾತ್ರ ಈ ವಿಧಾನವನ್ನು ಪಾಲಿಸಬಹುದು.

ಕಂಬ್ಳಿ ಗಿಡದ (Raspberry) ಎಲೆ (Raspberry leaves)

ಕಂಬ್ಳಿ ಹಣ್ಣಿನ ಗಿಡದ ಎಲೆಗಳಿಂದ ಸಹ ಮುಟ್ಟನ್ನು ಮುಂದೂಡಬಹುದು. ಬೇಸಿಗೆಯಲ್ಲಿ ಸಹಜವಾಗಿ ಸೇವಿಸುವ ಕಂಬ್ಳಿ ಹಣ್ಣಿನ ರಸ ನಿಮಗೂ ಇಷ್ಟವಾಗಿರಬಹುದು ಆದರೆ ಅದೇ ಗಿಡದ ರಸದಿಂದ ನಿಮ್ಮ ಮುಟ್ಟನ್ನು ಸಹ ಮುಂದೂಡಬಹುದು. ಇದು ಮುಟ್ಟನ್ನು ಯಾವುದೇ ಅಡ್ಡ ಪರಿನಾಮಗಳ್ಳಿಲ್ಲದೆ ಮುಂದೂಡಲು ನಮ್ಮಗೆ ತಿಳಿದಿರುವ ಒಂದು ಸುರಕ್ಷಿತ ಮಾರ್ಗ. ಕಂಬ್ಳಿ ಗಿಡದ ಎಲೆಗಳನ್ನು ಒಣಗಿಸಿ ಅದರಿಂದ ಚಹಾ ತಯಾರಿಸಿಕೊಂಡು ಕುಡಿಯಬಹುದು. ಈ ಚಹಾ ರುಚಿಕರವಾಗಿರುವುದಲ್ಲದೆ ನಿಮ್ಮ ಮುಟ್ಟನ್ನು ಸಹ ಮುಂದೂಡುತ್ತದೆ.

loading...