Home remedies to treat black spots, dark spots, acne marks, pimple scars on the face in Kannada language – ಕಪ್ಪು ಕಲೆ, ಮೊಡವೆಯ ಕಲೆ, ಕಚ್ಚು ಹಾಗೂ ಬೊಕ್ಕೆಯ ಕಲೆಗಳನ್ನು ನಿವಾರಿಸಲು ಮನೆ ಮದ್ದುಗಳು

ಕಪ್ಪು ಕಲೆ, ಗಾಯದ ಕಚ್ಚುಗಳು ಮೊಡವೆಯ ಕಲೆಗಳು ಹಾಗೂ ಅಸಮಾನವಾದ ಚರ್ಮದ ಬಣ್ಣ ನಿಮ್ಮನ್ನು ಮುಜುಗರಕ್ಕೆ ಈಡು ಮಾಡುತ್ತಿದೆಯೇ? ಮಾರುಕಟ್ಟೆಯಲ್ಲಿ ಸಿಗುವ ಅನೇಕ ಕಪ್ಪು ಕಲೆಗಳನ್ನು ಮುಚ್ಚುವ ಕ್ರೀಮ್ ಗಳನ್ನು ಬಳಸಿ ಸಾಕಾಗಿದೆಯೇ? ಯೋಚನೆ ಮಾಡಬೇಡಿ. ಕಪ್ಪು ಕಲೆಗಳನ್ನು ಬೇಗನೆ ತೊಲಗಿಸಿ ನಿಮ್ಮ ಚರ್ಮವನ್ನು ಮತ್ತೆ ಆರೋಗ್ಯಕರವಾಗಿಸಲು ಇಂದು ಕೆಲವು ಮನೆ ಮದ್ದುಗಳನ್ನು ನೋಡೋಣ.

ಗುಳ್ಳೆಗಳು, ಮೊಡವೆ, ಬೊಕ್ಕೆ, ಕಚ್ಚುಗಳಿಂದ ಕಪ್ಪು ಕಲೆಗಳು ಉಂಟಾಗುತ್ತವೆ. ಸೂರ್ಯನ ಶಾಕಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದಲೂ ಕಪ್ಪು ಕಲೆಗಳು ಹೆಚ್ಚಾಗುತ್ತವೆ. ಇದನ್ನು ತಡೆಗಟ್ಟಲು ಆಚೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ಬಳಸಿ ಹಾಗೂ ಈ ಕೆಳಗಿನ ಮನೆ ಮದ್ದುಗಳ ಸಹಾಯದಿಂದ ಕಪ್ಪು ಕಲೆಗಳನ್ನು ಇಲ್ಲವಾಗಿಸಿ.

ರಾಸಾಯನಿಕಗಳನ್ನು ಬಳಸಿ ಚರ್ಮವನ್ನು ಸುಂದರವಾಗಿಸಲು ಪ್ರಯತ್ನಿಸುವುದಕ್ಕಿಂತ ಹಲವು ಮನೆ ಮದ್ದುಗಳನ್ನು ಬಳಸಿದರೆ ಹಣ ಪೋಲಾಗದಂತೆ ಮಾಡಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದಲೂ ಸಹ ನಮ್ಮನು ನಾವು ಕಾಪಾಡಿಕೊಳ್ಳಬಹುದು. ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಈ ಕೆಳಗೆ ನೀಡಿರುವ ಕೆಲವು ಮನೆ ಮದ್ದುಗಳಿಂದ ನಿಮ್ಮ ಚರ್ಮವನ್ನು ಕಪ್ಪು ಕಲೆ, ಮೊಡವೆ, ಕಚ್ಚು ಹಾಗೂ ಬೊಕ್ಕೆಗಳಿಂದ ಮುಕ್ತವಾಗಿಸಬಹುದು.

ಟೊಮ್ಯಾಟೋ ಬಳಸಿ, ಕಪ್ಪು ಕಲೆ ಅಳಿಸಿ (Tomato for erasing dark spots)

ಒಂದು ಮಧ್ಯಮ ಗಾತ್ರದ ಟೊಮ್ಯಾತೋವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳೀ. ನಂತರ ಆರಸಕ್ಕೆ ಒಂದು ಚಮಚೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

ಲೋಳೆಸರದಿಂದ ಕಪ್ಪು ಕಲೆಗಳ ಚಿಕಿತ್ಸೆ (Aloe vera to treat black spots)

ಲೊಳೆಸರದ ತಿರುಳನ್ನು ತೆಗೆದು ಬಿಸಿಲಿನಲ್ಲಿ ಐದು ನಿಮಿಷ ಒಣಗಿಸಿ ಇಡೀ. ನಂತರ ಒಣಗಿದ ತಿರುಳಿಗೆ ಹಲವು ಹನಿ ನಿಂಬೆ ರಸವನ್ನು ಬೆರೆಸಿ ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಹದಿನೈದು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಈರುಳ್ಳಿ ಇಂದ ಕಲೆ ನಿವಾರಣೆ (Onions to lighten acne marks)

ಈರುಳ್ಳಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಯಥೇಚ್ಚವಾಗಿರುವುದರಿಂದ ಕಲೆಗಳನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಪರಿಣಾಮಕಾರಿ. ಒಂದು ಈರುಳ್ಳೀಯನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿ, ನಂತರ ಆ ಹೊಳುಗಳನ್ನು ರುಬ್ಬಿ ಅದರಿಂದ ರಸವನ್ನು ಹಿಂಡಿ ತೆಗೆದುಕೊಳ್ಳಿ. ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ಶ್ರೀಗಂಧ ಬಳಸಿ ಮೊಡವೆ ಕಲೆ ಹಾಗೂ ಕಪ್ಪು ಕಲೆಗಳನ್ನು ತೊಲಗಿಸುವುದು (Sandalwood for erasing pimple scars and dark spots)

ಎರಡು ಚಮಚೆ ಶ್ರೀಗಂಧದ ಪುಡಿಗೆ ಸ್ವಲ್ಪ ಪನ್ನೀರನ್ನು(Rose Water) ಬೆರೆಸಿ ಕಲೆಗಳಿರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ತಿಳಿಯಾಗಿ ಮಾಡಿಕೊಳ್ಳುವುದರಿಂದ ಅದು ಒಣಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ಹೆಚ್ಚು ಲಾಭವನ್ನು ಪಡೆಯಬಹುದು. ಮುಖಕ್ಕೆ ಹಚ್ಚಿದ ಮಿಶ್ರಣ ಒಣಗಿದ ನಂತರ ನೀರಿನಿಂದ ತೊಳೆಯಿರಿ.

ಅರಿಶಿನ ಹಾಗೂ ನಿಂಬೆಹಣ್ಣಿನಿಂದ ಮೊಡವೆ ಕಲೆಯ ನಿವಾರಣೆ (Turmeric and lemon juice for acne marks)

ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನಂತರ ಈ ಮಿಶ್ರಣವನ್ನು ಕಲೆಗಳಿರುವ ಕಡೆಗೆ ಹಚ್ಚಿರಿ. ಈ ಮಿಶ್ರಣ ನಿಮ್ಮ ಕಲೆಗಳನ್ನು ಬಹಳ ಸಮರ್ಥವಾಗಿ ನಿವಾರಿಸುತ್ತದೆ. ಈ ಮಿಶ್ರಣವನ್ನು ದಿನವೂ ಬಳಸುವುದರಿಂದ ಒಂದು ವಾರದಲ್ಲೇ ಫಲಿತಾಂಶವನ್ನು ಕಾಣಬಹುದು.

ಆಲೂಗಡ್ಡೆ ರಸ ಹಾಗೂ ಜೇನು ತುಪ್ಪದಿಂದ ಕಪ್ಪು ಕಲೆ ನಿವಾರಣೆ (Potato juice and honey for dark spots)

ಒಂದು ಸಣ್ಣ ಆಲೂಗಡ್ಡೆಯನ್ನು ರುಬ್ಬಿಕೊಳ್ಳೀ ಹಾಗೂ ರುಬ್ಬಿಕೊಂಡ ಆಲೂಗಡ್ದೆಗೆ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೂ ಹಚ್ಚಿಕೊಳ್ಳಬಹುದು. ಹದಿನೈದು ನಿಮಿಷಗಳ ನಾನಾತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು. ಹಾಗಲ್ಲದೆ ಬಾರಿ ಅಲೂವಿನ ಹೊಳನ್ನು ತೆಗೆದುಕೊಂಡು ನಿಮ್ಮ ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಂಡು ಹದಿನೈದು ನಿಮಿಷಗಳಲ್ಲಿ ತೊಳೆಯಬಹುದು. ಆಲೂಗಡ್ಡೆಯನ್ನು ಬಳಸುವ ಮತ್ತೊಂದು ವಿಧಾನವೆಂದರೆ ಅಲೂಗದ್ದೆಯ ರಸವನ್ನು ತೆಗೆದು ಅದನ್ನು ನೇರವಾಗಿ ಕಲೆಗಳ ಮೇಲೆ ನೇರವಾಗಿ ಬಳಸಿ ಫಲಿತಾಂಶವನ್ನು ಕಾಣಬಹುದು.

ಕಚ್ಚು ಹಾಗೂ ಮೊಡವೆ ಕಲೆಗಳನ್ನು ತೆಗೆಯಲು ಮನೆಯಲ್ಲಿರುವ ವಸ್ತುಗಳಿಂದ ಒಂದು ಪ್ರಭಾವಿ ಕಷಾಯ (A handy homemade concoction to remove scars & dark spots from the skin)

ಮನೆಯಲ್ಲಿ ಸಾಮಾನ್ಯವಾಗಿ ಇರುವಂತಹ ವಸ್ತುಗಳನ್ನು ಬಳಸಿ ಕಲೆಗಳನ್ನು ನಿಯಂತ್ರಿಸಲು ಒಂದು ಕಷಾಯವನ್ನು ಹೇಗೆ ಮಾಡುವುದೆಂದು ಈಗ ನೋಡೋಣ. ಒಂದು ಚಮಚೆ ಈರುಳ್ಳಿ ರಸ, ಒಂದು ಚಮಚೆ ಬೆಳ್ಳುಳಿ ರಸ ಹಾಗೂ ಅರ್ಧ ಚಮಚೆ ವಿನಿಗರ್ ಅನ್ನು ಬೆರೆಸಿ ಕಲೆಗಳು ಇರುವೆಡೆ ಹಚ್ಚಿಕೊಳ್ಳಿ ಹಾಗೂ ಸ್ವಲ್ಪ ಕಾಲ ಅದನ್ನು ಕಲೆಗಳಿಗೆ ಉಜ್ಜಿರಿ. ಇಪತ್ತು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಈ ಮಿಶ್ರಣವನ್ನು ಸತತವಾಗಿ ಬಳಸುವುದರಿಂದ ಕಲೆಗಳು ಕಡಿಮೆಯಾಗುತ್ತವೆ. ಈರುಳ್ಳೀಯಲ್ಲಿರುವ ಗಂಧಕ ಹಾಗೂ ಬೆಳುಳ್ಳಿಯಲ್ಲಿರುವ ಅಲ್ಲಿಸಿನ್(allicin) ಶಿಲೀಂಧ್ರ ವಿರೋಧಿ ಹಾಗೂ ಮುಪ್ಪು ವಿರೋಧಿ ಆಗಿರುವುದರಿಂದ ಚರ್ಮವನ್ನು ಕಾಪಾಡುತ್ತದೆ.

ನಿಂಬೆ ಹಣ್ಣಿನ ರಸದಿಂದ ಕಲೆ ನಿವಾರಣೆ (Lemon juice for erasing dark spots)

ನಿಂಬೆಯಲ್ಲಿರುವ ಒಗರು ಹಾಗೂ ಸಿ ಜೀವಸತ್ವಗಳು ಅದನ್ನು ಬಿಸಿನೀರಿನೊಂದಿಗೆ ಸೇವಿಸಿದಾಗ ದೇಹದಲ್ಲಿರುವ ನಂಜನ್ನು ತೆಗೆದುಹಾಕುತ್ತದೆ. ಹಾಗಾಗಿ ನಿಂಬೆಯನ್ನು ಬಳಾಸಿ ಕಪ್ಪು ಕಲೆಗಳನ್ನು ನಿವಾರಿಸಿಕೊಳ್ಳಿ. ನಿಂಬೆ ಹಣ್ಣನು ಹಿಂಡಿ ಅದರ ರಸವನ್ನು ಹತ್ತಿಯ ಸಹಾಯದಿಂದ ಕಲೆಗಳಿಗೆ ಲೇಪಿಸಿ. ಈ ವಿಧಾನವನ್ನು ಎರಡು ದಿನಗಳಿಗೊಮ್ಮೆ ಬಳಸುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಸೌತೆಕಾಯಿ ಹಾಗೂ ಹಾಲಿನಿಂದ ಕಪ್ಪು ಕಲೆಗಳ ನಿವಾರಣೆ (Cucumber & milk for treating dark marks)

ಸೌತೆಕಾಯಿಯನ್ನು ರುಬ್ಬಿ ಅದಕ್ಕೆ ಹಾಲನ್ನು ಹಾಗೂ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣ ಚೇತೋಹಾರಿಯಾಗಿದ್ದು ಇಡೀ ಮುಖಕ್ಕೂ ಬಳಸಬಹುದಾಗಿದೆ. ಇದನ್ನು ಹಚ್ಚಿದ ಹತ್ತು ನಿಮಿಷಗಳ ನಂತರ ನೀರಿನಿಡ ತೊಳೆದುಕೊಳ್ಳಬೇಕು.

ಪಪಾಯದಿಂದ ಕಲೆಗಳಿಗೆ ಖಚಿತ ಔಷಧ (Papaya a sure shot remedy for dark spots)

ಪಪಾಯದಲ್ಲಿರುವ ಹಲವು ಕಿಣ್ವಗಳು ಕಪ್ಪು ಕಲೆಗಳನ್ನು ಆಳಿಸುವಲ್ಲಿ ಬಹಳ ಉಪಯೋಗಿ. ಹಣ್ಣಾಗಿರುವ ಪಾಯದ ಇರುಳನ್ನು ನೇರವಾಗಿ ಮುಖಕ್ಕೆ ಹಚ್ಚಿ ಕಲೆಗಳಿರುವೆಡೆ ಮೆದುವಾಗಿ ಉಜ್ಜಿರಿ. ನಂತರ ಹದಿನೈದು ನಿಮಿಷಗಳು ಆ ಮಿಶ್ರಣವನ್ನು ಅಲ್ಲಿಯೇ ಬಿಟ್ಟು ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

ಮಜ್ಜಿಗೆಯಿಂದ ಕಲೆಗಳ ನಿವಾರಣೆ (Buttermilk for fading marks and spots)

ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲದಲ್ಲಿ ಆಲ್ಫ ಹೈಡ್ರೋಕ್ಸೈಲ್ ಆಮ್ಲವಿರುತ್ತದೆ. ಅದು ನೈಸರ್ಗಿಕ ಆಮ್ಲವಾಗಿರುವುದರಿಂದ ಚರ್ಮಕ್ಕೆ ಬಹಳ ಉಪಯೋಗಕಾರಿ. ಮಜ್ಜಿಗೆ ನಮ್ಮ ಚರ್ಮದಲ್ಲಿರುವ ಎಣ್ಣೆ, ಧೂಳು ಹಾಗೂ ನಿರ್ಜೀವ ಕಣಗಳನ್ನು ತೆಗೆದು ಚರ್ಮವನ್ನು ತಿಳಿಯಾಗಿಸುತ್ತದೆ. ಒಂದು ಬಟ್ಟಲಲ್ಲಿ ಮಾಜಿಗೆ ತೆಗೆದುಕೊಂಡು ಹಟ್ತಿಯಿಂಡ್ ಅದನ್ನು ಅದ್ದಿ ಕಪ್ಪು ಕಲೆಗಳಿರುವೆಡೆಗೆ ಹಚ್ಚಿ. ಸಾಧ್ಯವಾದರೆ ನಿಂಬೆ ರಸ ಹಾಗೂ ಮಜ್ಜಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಫೇಸ್ ಮಾಸ್ಕ್ ನಂತೆ ಬಳಸಬಹುದು.

ಈ ಜೀವಸತ್ವದ ಎಣ್ಣೆಯಿಂದ ಕಲೆ ಹಾಗೂ ಕಚ್ಚುಗಳ ನಿವಾರಣೆ (Vitamin E oil for skin marks and spots)

ಈ ಜೀವಸತ್ವದ ಎಣ್ಣೆ ಒಂದು ನೈಸರ್ಗಿಕ ಉತ್ಕರ್ಷಣ ವಿರೋಧಿಯಾಗುವುದರಿಂದ ಗಾಯಗಳನ್ನು ಗುಣಪದಿಸುವುದರಲ್ಲಿ ಬಹಳ ಸಹಾಯಕಾರಿ. ಆದ್ದರಿಂದ ಈ ಜೀವಸ್ತ್ವದ ಎಣ್ಣೆಯನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಕಲೆಗಳಿರುವೆಡೆಗೆ ಹಚ್ಚಿ ಸ್ವಲ್ಪ ಕಾಲ ಬಿಟ್ಟುಬಿಡಿ. ಇಪತ್ತು ನಿಮಿಷಗಳ ನಂತರ ಹತ್ತಿಯ ಸಹಾಯದಿಂದ ಎಣ್ಣೆಯನ್ನು ತೆಗೆದು ನಂತರ ನೀರಿನಿಂದ ತೊಳೆಯಿರಿ.

ಓಟ್ಸ್ ಬಳಸಿ ಕಲೆಗಳ ನಿವಾರಣೆ (Oats for treating those black spots)

ಓಟ್ಸ್ ಕೇವಲ ಆರೋಗ್ಯವಾದ ಆಹಾರ ಮಾತ್ರವಲ್ಲ, ಮೊಡವೆ ಹಾಗೂ ಕಲೆಗಳನ್ನು ನಿವಾರಿಸಲು ಒಂದು ಪ್ರಭಾವಿ ಔಷಧಿ ಸಹ. ಓಟ್ಸ್ ಫೇಸ್ ಪ್ಯಾಕನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪು ಕಲೆಗಳಿಂದ ಮುಕ್ತಿ ಹೊಂದಬಹುದು. ಓಟ್ಸ್ ಹಾಗೂ ನಿಂಬೆ ರಸವನ್ನು ಬಳಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿಗೆ ಹಚ್ಚಿ ಹಿತವಾಗಿ ಉಜ್ಜಿರಿ ಅದಾದ ನಂತರ್ ಬೆಚ್ಚಗಿನ ನೀರಿನಿಡ ಮುಖವನ್ನು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಕಲೆಗಳನ್ನು ನಿವಾರಿಸಲು ನೀರು ಸೇವಿಸಿ (Drink lots of water to fade the spots quickly)

ಸಾಕಷ್ಟು ನೀರನ್ನು ಕುಡಿಯುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಬಹುದು. ದಿನಕ್ಕೆ ಕಡಿಮೆ ಎಂದರೆ ಆರರಿಂದ ಎಂಟು ಲೋಟ ನೀರನ್ನು ಕುಡಿಯಿರಿ. ಇದು ದೇಹದಲ್ಲಿನ ಕಲ್ಮಶಗಳನ್ನು ತೊಲಗಿಸುವುದಲ್ಲದೆ ಚರ್ಮವು ನೈಸರ್ಗಿಕವಾಗಿ ಪುನರುಜ್ಜೀವನಗೊಳ್ಳಲು ಸಹಾಯ ಮಾಡುತ್ತದೆ ಹಾಗೂ ಕಪ್ಪು ಕಲೆಗಳು ಶೀಘ್ರವಾಗಿ ವಾಸಿಯಾಗಲು ಸಹಾಯಮಾಡುತ್ತದೆ.

ಹಸಿ ಹಾಲಿನಿಂದ ಕಲೆಗಳ ನಿವಾರಣೆ (Raw milk to lighten spots)

ಹಾಲು ಮುಖದ ಕಲೆಗಳನ್ನು ತಿಳಿಯಾಗಿಸುವಲ್ಲಿ ಬಹಳ ಸಹಾಯಕಾರಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ಗುಣಮುಖವಾಗಿಸಿ ತಿಳಿಯಾಗಿರುಸುತ್ತದೆ. ತಣ್ಣನೆಯ ಹಾಲನ್ನು ಹಟ್ಟಿಯಲ್ಲಿ ಅಡ್ಡಿ ಮುಖಕ್ಕೆ ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳು ಅದನ್ನು ಅಲ್ಲಿಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದನ್ನು ಪ್ರತಿದಿನ ಬೆಳ್ಳಿಗೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಹಾಲು ಹಾಗೂ ಕೇಸರಿಯಿಂದ ಕಲೆಗಳ ನಿವಾರಣೆ (Milk and kesar for spot lightening)

ಕೇಸರಿಯ ಕೆಲವು ಎಸಳುಗಳನ್ನು ಎರಡು ಚಮಚೆ ಹಸಿ ಹಾಲಿನಲ್ಲಿ ನೆನೆಸಿಡಿ. ಹಾಲು ಹಾಳಾಗದೆ ಇರುವುದಕ್ಕಾಗಿ ಫ್ರಿಡ್ಜ್ ನಲ್ಲಿರಿಸಿ. ಬೆಳ್ಳಿಗೆ ಕೇಸರಿಯನ್ನು ಹಾಲಿನಲಿ ನುರಿದು ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, ಕಲೆ ಹಾಗೂ ಮೊಡವೆಗಳಿರುವಲ್ಲಿ ಸ್ವಲ್ಪ ಹೆಚ್ಚಾಗಿಯೇ ಹಚ್ಚಿ. ಅದು ಪೂರ್ತಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಇದನ್ನು ನಿತ್ಯ ಮಾಡುವುದರಿಂದ ಒಂದು ವಾರದಲ್ಲಿ ಫಲಿತಾಂಶವನ್ನು ಕಾಣಬಹುದು.

ಕೆಂಪು ತೊಗರಿ ಹಾಗೂ ಹಾಲಿನಿಂದ ಮೊಡವೆ ಕಲೆಗಳ ನಿರ್ಮೂಲನೆ (Red lentils and milk for acne mark removal)

ಮತ್ತೊಂದು ಕಲೆ ನಿವಾರಕ ಮನೆಮದ್ದನ್ನು ಕೆಂಪು ತೊಗರಿ ಬೆಳೆ ಹಾಗೂ ಹಾಲು ಬಳಸಿ ಮಾಡಬಹುದು. ತೊಳೆದು ಸ್ವಚ್ಛಗೊಳಿಸಿದ ತೊಗರಿ ಬೆಳೆಯನ್ನು ರಾತ್ರಿಯಿಡೀ ಹಸಿ ಹಾಲಿನಲ್ಲಿ ನೆನೆಸಿಡಿ. ಬೆಳ್ಳಿಗೆ ಆ ಮಿಶ್ರಣವನ್ನು ತರಗು ತರಗಾಗಿ ರುಬ್ಬಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಮತ್ತು ಮೆದುವಾಗಿ ಅದನ್ನು ಮುಖಕ್ಕೆ ಉಜ್ಜಿರಿ. ಇಪ್ಪತ್ತು ನಿಮಿಷಗಳ ನಂತರ ಕೈ ಒದ್ದೆ ಮಾಡಿಕೊಂಡು ಮತ್ತೊಮ್ಮೆ ಉಜ್ಜಿಕೊಂಡು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿರಿ. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಹದಿನೈದು ದಿನಗಳಲ್ಲಿ ಫಲಿತಾಂಶವನ್ನು ಕಾಣಬಹುದು.

ಮೊಸರು ಹಾಗೂ ಜೇನು ತುಪ್ಪದಿಂದ ಕಪ್ಪು ಕಲೆಗಳ ನಿವಾರಣೆ (Yogurt with honey for erasing dark spots)

ಮೊಸರಿನಲ್ಲಿರುವ ಕಿಣ್ವಗಳು ಎಂತಹ ಕಲೆಯನ್ನಾದರೂ ನಿವಾರಿಸುವ ಶಕ್ತಿಯನ್ನು ಹೊಂದಿವೆ ಹಾಗೂ ಜೇನುತುಪ್ಪ ಒಂದು ನೈಸರ್ಗಿಕ ಬಿಳುಪುಕಾರಕ. ಒಂದು ಚಮಚೆ ಮೊಸರಿಗೆ ಎರಡು ಚಮಚೆ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕಲೆಗಳಿರುವೆಡೆ ಸ್ವಲ್ಪ ಹೆಚ್ಚಾಗಿಯೇ ಹಚ್ಚಿರಿ. ಇಪತ್ತು ನಿಮಿಷಗಳು ಆ ಮಿಶ್ರಣವನ್ನು ಮುಖದ ಮೇಲೆ ಬಿಟ್ಟು ನಂತರ ಕೈಯಿಂದ ಮುಖವನ್ನು ಉಜ್ಜುತ್ತಾ ನೀರಿನಲ್ಲಿ ತೊಳೆಯಿರಿ. ಇದನ್ನು ಪ್ರತಿನಿತ್ಯ ಮಾಡುವುದರಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದು.

ಹರಳೆಣ್ಣೆಯಿಂದ ಕಲೆಗಳ ತಿಳಿಯಾಗಿಸುವ ವಿಧಾನ (Castor oil for lightening marks on the face)

ಹರಳೆಣ್ಣೇಯಾಯೀ ಬಹಳಷ್ಟು ಶಮನಕಾರಿ ಗುಣಗಳಿರುವುದರಿಂದ ಕಲೆಗಳನ್ನು ತೊಲಗಿಸುವಲ್ಲಿ ಅದು ಬಹಳ ಸಹಾಯಕಾರಿ. ಕಲೆಗಳಿರುವ ಚರ್ಮದ ಭಾಗವನ್ನು ಸ್ವಚ್ಛಗೊಳಿಸಿ ಆ ಭಾಗಕ್ಕೆ ಹರಳೆಣ್ಣೆ ಹಚ್ಚಿ ಐದು ನಿಮಿಷ ನಿಧಾನವಾಗಿ ಮಾಲಿಶು ಮಾಡಿಕೊಳ್ಳಿರಿ. ನಂತರ ಇಪತ್ತು ನಿಮಿಶಗಳು ಎಣ್ಣೆಯಣ್ನಿ ಇಂಗಲು ಬಿಡಿ. ನಂತರ ಹತ್ತಿಯಿಂದ ಎಣ್ಣೆಯನ್ನು ತೆಗೆಯಿರಿ. ಮತೂಮ್ಮೆ ಎಣ್ಣೆಯನ್ನು ಹಚ್ಚಿ ಐದು ನಿಮಿಷ ಮಾಲಿಶು ಮಾಡಿ ಕೊನೆಯದಾಗಿ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಒಂದು ತಿಂಗಳಲ್ಲೇ ಫಲಿತಾಂಶವನ್ನು ಕಾಣಬಹುದು.

ಮೂಲಂಗಿಯಿಂದ ಕಲೆ ನಿವಾರಣೆ (Horseradish for removing those dark spots)

ಕಲೆ ಹಾಗೂ ಮಚ್ಚೆಗಳನ್ನು ನಿವಾರಿಸುವಲ್ಲಿ ಮೂಲಂಗಿ ಬಹಳ ಪ್ರಭಾವಿ ಔಷಧಿ. ಮೂಲಂಗಿಯನ್ನು ರುಬ್ಬಿಕೊಂಡು ಕಲೆ ಹಾಗೂ ಮಚ್ಚೆ ಇರುವ ಜಾಗಕ್ಕೆ ಹಚ್ಚಿರಿ. ಹದಿನೈದು ನಿಮಿಷಗಳು ಅದನ್ನು ಅಲ್ಲಿಯೇ ಬಿಟ್ಟು ನನತ್ರ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಕಲೆಗಳು ಕಡಿಮೆ ಯಾಗುವುದನ್ನು ನೋಡಬಹುದು.

ಕೆಂಪು ದ್ರಾಕ್ಷಿ ಹಾಗೂ ಜೇನು ತುಪ್ಪದಿಂದ ಕಪ್ಪು ಕಲೆಗಳ ನಿವಾರಣೆ (Redcurrant and honey for erasing black spots)

ಕೆಂಪು ದ್ರಾಕ್ಷಿಹಣ್ಣು ನೆಲ್ಲಿಯ ಜಾತಿಗೆ ಸೇರಿದ ಹಣ್ಣಾಗಿರುವುದರಿಂದ, ಚರ್ಮವನ್ನು ಬಣ್ಣವನ್ನು ತಿಳಿಯಾಗಿಸುವಲ್ಲಿ ಬಹಳ ಸಹಾಯಕಾರಿ. ಕೆಲವು ಕೆಂಪು ದ್ರಕ್ಶಿಗಳನ್ನು ತೆಗೆದುಕೊಂಡು ಹಿಚುಕಿ ಅದಕ್ಕೆ ಒಂದು ಚಮಚೆ ನೈಸರ್ಗಿಕ ಬಿಳಿಪುಕಾರಕವಾದ ಜೇನು ತುಪ್ಪ ಬೆರೆಸಿ, ಈ ಮಿಶ್ರಣವನ್ನು ಮುಖಕ್ಕೆ, ಮುಖ್ಯವಾಗಿ ಮೊಡವೆ ಹಾಗೂ ಕಲೆಗಳಿರುವೆಡೆಗೆ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ತೊಳೆದುಬಿಡಿ. ಇದನ್ನು ದಿನವೂ ಮಾಡುವುದರಿಂದ ಫಲಿತಾಂಶ ಉತ್ತಮವಾಗುತ್ತದೆ.

ಮುಲ್ತಾನಿ ಮಿಟ್ಟಿ ಹಾಗೂ ನಿಂಬೆ ಬಳಸಿ ಕಲೆ ನಿವಾರಣೆ (Fuller’s earth with lemon juice for lightening skin spots)

ಮುಲ್ತಾನಿ ಮಿಟ್ಟಿಯಲ್ಲಿ ಅನೇಕ ನೈಸರ್ಗಿಕ ಖನಿಜಗಳಿರುವುದರಿಂದ ಅದು ಚರ್ಮವನ್ನು ಗೌರವರ್ಣಕ್ಕೆ ತರುವಲ್ಲಿ ಸಹಾಯಮಾಡುತ್ತದೆ. ಮುಲ್ತಾನಿ ಮಿಟ್ಟಿ ಹಾಗೂ ನೀರನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ, ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಅದನ್ನು ಕಲೆಗಳಿರುವೆಡೆ ಹಚ್ಚಿಕೊಳ್ಳಿ ಹಾಗೂ ಒಣಗುವವರೆಗೂ ಬಿಡಿ. ಇಡೀ ಮುಖಕ್ಕೆ ಹಚ್ಚುವಿರಾದರೆ ಅದನ್ನು ಇಡಿಯಾಗಿ ಒಣಗಲು ಬಿಡಬೇಡಿ. ನಂತರ ನೀರು ಬಳಸಿ, ಕೈಯಿಂದ ಉಜ್ಜಿ ಮುಖವನ್ನು ತೊಳೆಯಿರಿ.

ದ್ರಾಕ್ಷಿ ಹಾಗೂ ಸೇಬಿನಿಂದ ಮುಖದ ಕಲೆಗಳ ನಿವಾರಣೆ (Grapes and apple for facial spot reduction)

ದ್ರಾಕ್ಷಿ ಹಾಗೂ ಸೇಬು ಎರಡರಲ್ಲಿಯೂ ನೈಸರ್ಗಿಕವಾದ ಜೀವಸತ್ವ ಹಾಗೂ ಅಮ್ಲಗಳು ಹೇರಳವಾಗಿ ಇರುವುದರಿಂದ ನಿರ್ಜೀವ ಚರ್ಮದ ಕಣಗಳನ್ನು ತೆಗೆಯುವಲ್ಲಿ ಬಹಳ ಸಹಾಯಕಾರಿ ಹಾಗೂ ಚರ್ಮದಲ್ಲಿನ ಮೆಲನಿನ್ ಅಂಶವನ್ನು ಸಹ ಕಡಿಮೆ ಮಾಡುತ್ತದೆ. ಒಂದು ಸಣ್ಣ ಹೊಳು ಸೇಬನ್ನು ಚರ್ಮದ ಸಮೇತ ತೆಗೆದುಕೊಂಡು ಎರಡು ದ್ರಾಕ್ಷಿಗಳ ಜೊತೆ ಹಿಚುಕಿ ಮಿಶ್ರಣವನ್ನು ತಾಯರುಮಾಡಿಕೊಳ್ಳಿ. ಇದನ್ನು ನಿಮ್ಮ ಮುಖ, ಮುಖ್ಯವಾಗಿ ಕಲೆಗಳ ಮೇಲೆ ಹಚ್ಚಿರಿ. ಮಿಶ್ರಣವನ್ನು ಹಿತವಾಗಿ ಮುಖಕ್ಕೆ ಉಜ್ಜಬಾಹುದು. ಹತ್ತು ನಿಮಿಷಗಳು ಅದನ್ನು ಅಲ್ಲೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಇದನ್ನು ನಿತ್ಯ ಮಾಡುವುದರಿಂದ ಒಂದು ತಿಂಗಳಿನಲ್ಲಿಯೇ ಫಲಿತಾಂಶವನ್ನು ಕಾಣಬಹುದು.

ಜ್ಯೇಷ್ಟಮಧುವಿನಿಂದ ಕಲೆಗಳ ನಿವಾರಣೆ (Liquorice for erasing dark spot on the skin)

ಜ್ಯೇಷ್ಟಮಧು ತನ್ನ ಮೆಲನಿನ್ ಅಂಶ ಕಡಿಮೆ ಮಾಡುವ ಗುಣಕ್ಕೆ ಬಹಳ ಪ್ರಸಿದ್ಧವಾಗಿದೆ. ಕಾಪು ಕಲೆಗಳನ್ನು ಕಡಿಮೆ ಮಾಡುವಲ್ಲಿ ಸಹ ಜ್ಯೇಷ್ಟಮಧುವೀಣಾ ಉಪಯೋಗ ಬಹಳ. ಜ್ಯೇಷ್ಟಮಧುವಿನ ಬೇರನ್ನು ಪುಡಿ ಮಾಡಿಕೊಂಡು ಅದಕ್ಕೆ ಕೆಲವು ಹನಿ ಜೇನು ತುಪ್ಪವನ್ನು ಬೆರಸಿ ಕಲೆಗಳ ಮೇಲೆ ಹಚ್ಚಿಕೊಳ್ಳಬೇಕು. ಹದಿನೈದು ನಿಮಿಷಗಳು ಅದನ್ನು ಬಿಟ್ಟು ನಂತರ ನೀರಿನಿಂದ ತೊಳೆಯಬೇಕು. ಇದನ್ನು ಪ್ರತಿನಿತ್ಯ ಮಾಡುವುದರಿಂದ ಒಂದು ಅಥವಾ ಎರಡು ವಾರಗಳಲ್ಲಿ ವ್ಯತ್ಯಾಸ ಕಾಣಬಹುದು. ಇದನ್ನು ಇಡೀ ಮುಖಕ್ಕೆ ಹಚ್ಚುವ ಮುನ್ನ ಸ್ವಲ್ಪ ಭಾಗಕ್ಕೆ ಮಾತ್ರ ಹಚ್ಚಿ ಏನಾದರೂ ತೊಂದರೆಯಾಗುವುದೇ ಎಂದು ಪರೀಕ್ಷಿಸುವುದು ಒಳ್ಳೆಯದು.

ನೀವು ಮಾರುಕಟ್ಟೆಯಲ್ಲಿ ಕೊಂಡುತರುವ ಯಾವ ಔಷಧಿಯು ಮನೆಮದ್ದಿನ ಸಮಾನ ಬರಲಾರದು. ಮುಖ್ಯವಾಗಿ ಕಪ್ಪು ಕಲೆ, ಕಚ್ಚು ಇತ್ಯಾದಿ ಚರ್ಮದ ಕಾಯಿಲೆಗಳಿಗೆ ಮನೆ ಮದ್ದಿಗೆ ಮೀರಿದ ಔಷಧಿ ಇರಲಾರದು. ಮಚ್ಚೆ ಹಾಗೂ ಕಪ್ಪು ಕಲೆಗಳನ್ನು ತೆಗೆಯಲು ಕೆಲವು ಮನೆ ಮದ್ದುಗಳನ್ನು ಈಗ ನಾವು ತಿಳಿದುಕೊಳ್ಳೋಣ.

ಮಚ್ಚೆ ಹಾಗೂ ಕಪ್ಪು ಕಲೆಗಳನ್ನು ತೆಗೆಯಲು ಕೆಲವು ಮನೆ ಮದ್ದುಗಳು (Some tips for using home remedies to treat marks and spots on the skin)

  • ಯಾವುದೇ ಮಚ್ಚೆ, ಕಲೆ ಅಥವಾ ಕcಚುಗಳನ್ನು ಮನೆ ಮದ್ದಿನಿಂದ ವಾಸಿ ಮಾಡಬಹುದು ಆದರೆ ಚಿಕಿತ್ಸೆಯನ್ನು ಬೇಗನೆ ಶುರು ಮಾಡಬೇಕಾಗುತ್ತದೆ. ಹಾಗಾಗಿ ನಿಮ್ಮಗೆ ಇತ್ತೀಚೆಗೆ ಮೊಡವೆ ಕಲೆಗಳು ಬಂದಿದ್ದಾರೆ ಈ ಕೂಡಲೇ ಮೇಲಿನ ಯಾವುದಾದರೂ ಒಂದು ಮನೆ ಮದ್ದನ್ನು ಬಳಸಲು ಮೊದಲು ಮಾಡಿ. ಮೊದವೆಗಳು ಒಣಗಿದ ಕೂದಲೆ ಯಾವುದಾದರೂ ಒಂದು ಮನೆ ಮದ್ದನ್ನು ಬಳಸಲು ಪ್ರಾರಂಭಿಸಿ. ಇದರಿಂದ ಕಲೆಗಳು ನೆಲೆಯಾಗದಂತೆ ತಡೆಯಬಹುದು.
  • ಅರಿಶಿನ, ಜ್ಯೇಷ್ಟಮಧು ಹಾಗೂ ಶ್ರೀಗಂಧದ ಔಶಧಿಗಳು ಹಳೆಯ ಕಲೆಗಳನ್ನು ಸಹ ವಾಸಿಮಾಡಲು ಬಹಳ ಪ್ರಭಾವಿಗಳು. ಆದರೆ ಸಂಪೂರ್ಣವಾಗಿ ಕಲೆಗಳು ಮಾಯವಾಗಲು ತಿಂಗಳಿಗಿಂತ ಹೆಚ್ಚು ಸಮಯವಾಗಬಹುದು. ಇದಕ್ಕಾಗಿ ನೀವು ಇದನ್ನು ಚಾಚು ತಪ್ಪದೆ ಚಿಕಿತ್ಸೆಯನ್ನು ಪಾಲಿಸಬೇಕಾಗಿಬರುತ್ತದೆ.
  • ಮನೆ ಮದ್ದಿನ ಪ್ರಭಾವ ನಿಮ್ಮ ಚರ್ಮದ ಬಗೆ ಹಾಗು ವಯಸ್ಸಿನ ಮೇಲೆ ಆಧಾರವಾಗಿರುತ್ತದೆ. ಹೆಚ್ಚಾಗುವ ವಯ್ಯಸ್ಸಿನೊಂದಿಗೆ ಚರ್ಮದ ಪುನ್ನರುಜ್ಜೀವನಗೊಳ್ಳುವ ಶಕ್ತಿಯು ಕಡಿಮೆಯಾಗುತ್ತಾ ಬರುತ್ತದೆ. ಆದ್ದರಿಂದ ಕಲೆಗಳು ಹಾಗೂ ಕಚ್ಚುಗಳು ಕಡಿಮೆಯಾಗುವುದಕ್ಕೆ ಸ್ವಲ್ಪ ಹೆಚ್ಚು ಸಮಯ ಹಿಡಿಯಬಹುದು.
  • ಮನೆ ಮದ್ದಿನಿಂದ ಸಂಪೂರ್ಣವಾಗಿ ಮಚ್ಚೆ ಹಾಗೂ ಕಲೆಗಳು ಮಾಯವಾಗಲು ಅದನ್ನು ಚಾಚು ತಪ್ಪದೆ ನಿರಂತರವಾಗಿ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿಬರುತ್ತದೆ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
  • ಮನೆ ಮದ್ದಿನ ಅತಿ ಮುಖ್ಯವಾದ ಗುಣವೇನೆಂದರೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಹಾಗೂ ಹೆಚ್ಚು ಹಣವು ಪೋಲಾಗುವುದಿಲ್ಲ.
  • ಮೇಲೆ ಹೇಳಿರುವ ಮನೆ ಮದ್ದುಗಳನ್ನು ಬಳಸುವ ಕಾಲಕ್ಕೆ ಹೊಸದಾಗಿ ತಯಾರಿಸಿಕೊಳ್ಳುವುದು ಓಲ್ಲೆಯಾದುೀದರಿಂದಾ ಔಷಧಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
  • ಜ್ಯೇಷ್ಟಮಧು ಹಾಗೂ ಮತ್ತು ಕೆಲವು ಮನೆ ಮದ್ದುಗಳು ನಿಮ್ಮ ಚರ್ಮವನ್ನು ಸೂಕ್ಷ್ಮಸಂವೇದಿಯಾಗಿಸಬಹುದು ಹಾಗಾಗಿ ಇದನ್ನು ಬಳಸುವಾಗ, ಆಚೆ ಹೋಗುವ ಮುನ್ನ ಒಳ್ಳೆಯ ಸನ್ ಸ್ಕ್ರೀನ್ ಬಳಸಿ.
loading...