How to remove sun tan? Tan removal home remedies from hands, neck and forehead in Kannada language – ಕಂದು ನಿವಾರಣೆ ಹೇಗೆ? ಕೈ, ಮುಖ ಹಾಗೂ ಹಣೆಯ ಮೇಲಿನ ಕಂದನ್ನು ನಿವಾರಿಸಲು ಮನೆ ಮದ್ದುಗಳು

ಬೇಸಿಗೆಯೆಂದರೆ ಸಮುದ್ರ ತೀರ ಹಾಗೂ ಉದ್ಯಾನವನಗಳಲ್ಲಿ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಬೆರೆತು ಮಜಾ ಮಾಡುವ ಸಮಯ. ಆದ್ರೆ ದಿನಪೂರ್ತಿ ಮಾಜದ ನಂತರ ಬಹಳಷ್ಟು ಜನರ ಚರ್ಮ ಕಂದಿಹೋಗಿ ವಿರೂಪವಾಗಿ ಕಾಣತೊಡಗುತ್ತದೆ. ಚರ್ಮವನ್ನು ಅತಿಯಾಗಿ ಸೂರ್ಯನ ಶಾಖಕ್ಕೆ ಒಡ್ಡುವುದರಿಂದ ಚರ್ಮದ ಬಣ್ಣ ಗಾಢವಾಗುತ್ತದೆ ಹಾಗೂ ತೇಪೆ ತೇಪೆಯಾಗಿ ಕಾಣುವ ಈ ಚರ್ಮ ಬಹಳ ಮುಜುಗರ ಉಂಟುಮಾಡಬಹುದು. ಆದರೆ ಚರ್ಮವನ್ನು ಮತ್ತೆ ಮಾಮೂಲು ಬಣ್ಣಕ್ಕೆ ತರುವುದು ಬಹಳ ಕಷ್ಟ. ಇದೇ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ಲಭ್ಯವಿದೆಯಾದರೂ ಅವುಗಳಲ್ಲಿ ಬಹಳಷ್ಟು ಬ್ಲೀಚ್ ನಂತಹ ಹಾನಿಕಾರಕ ವಸ್ತುಗಳಿಂದ ತಯಾರಿಸಲ್ಪಡುವುದರಿಂದ ಸತತ ಬಳಕೆಯಿಂದ ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಆದರೆ ನೈಸರ್ಗಿಕವಾದ ರೀತಿಗಳಲ್ಲಿ ಸಹ ಚರ್ಮವನ್ನು ಸೂರ್ಯನಿಂದ ರಕ್ಶಿಸಿಕೊಳ್ಳಬಹುದು. ಆದ್ದರಿಂದ ಮನೆಮದ್ದಿನಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ ಈ ಕೆಳಗೆ ತಿಳಿಯೋಣ.

ಚರ್ಮ ಕಂದುವುದಕ್ಕೆ ಅನೇಕ ಕಾರಣಗಳು? (Reasons behind getting sun tan)

ನಿತ್ಯ ಹಾನಿಕಾರಕ ರಾಸಾಯನಿಕಗಳೊಂದಿಗೆ ಕೆಲಸ ಮಾಡುವುದು, ಹೆಚ್ಚಾಗಿ ಅತಿನೆರಳೆ ಕಿರಣಗಳಿಗೆ ಒಡ್ಡಿಕೊಳ್ಳುವುದು, ಧೂಳು ಹಾಗೂ ಮಲಿನ ಪ್ರದೇಶಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ವಾಯುಮಾಲಿನ್ಯ ಹಾಗೂ ಮಾಲಿನ್ಯ ಯುಕ್ತ ಪರಿಸರಗಳ್ಳಲಿ ಹೆಚ್ಚಾಗಿ ಅಡ್ಡಾಡುವುದು ಹಾಗೂ ನಿಯಮಿತವಾಗಿ ಕೈಗಳನ್ನು ಶುಭ್ರಗೊಳಿಸಿಕೊಳ್ಳದೇ ಇರುವುದು ಹೀಗೆ ನಿಮ್ಮ ಕೈಗಳು ಅನೇಕ ಕಾರಣಗಳಿಂದ ಕಂದಬಹುದು ಹಾಗೂ ತಮ್ಮ ಸಹಜ ಬಣ್ಣ ಹಾಗೂ ಕೋಮಲತೆಯನ್ನು ಕಳೆದುಕೊಳ್ಳಬಹುದು.

ಆದರೆ ಇಂತಹ ಕಂದನ್ನು ಸಂಪೂರ್ಣವಾಗಿ ತೊಲಗಿಸುವುದು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯ. ಕಂದು ಬಂದಷ್ಟೆ ಸುಲಭವಾಗಿ ಅದನ್ನು ಕೆಲವು ಮನೆ ಮದ್ದುಗಳ ಸಹಾಯದಿಂದ ಕಡಿಮೇ ಮಾಡಿಕೊಳ್ಳಬಹುದು. ಅಂತಹ ಕೆಲವು ಮನೆಮದ್ದುಗಳನ್ನು ನೀವು ಈ ಕೆಳಗೆ ನೋಡುತ್ತೀರಿ.

ಚರ್ಮದ ಕಂದು ನಿವಾರಣೆಗೆ ಮನೆ ಮದ್ದುಗಳು (Home remedies to remove sun tan)

ಅಡುಗೆ ಸೋಡಾ ಸ್ಕ್ರಬ್ (Baking soda scrub)

ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ನಂತೆ ಮಾಡಿಕೊಂಡು ಕಂದು ಇರುವ ಜಾಗಗಳಿಗೆ ಹಚ್ಚಿಕೊಳ್ಳಬೇಕು. ಇದರಿಂದ ಕಂಡು ಕಡಿಮೆಯಾಗುತ್ತದೆ. ತ್ವರಿತ ಫಲಿತಾಂಶಗಳಿಗಾಗಿ ಈ ಪದ್ದತಿಯನ್ನು ಎರಡು ದಿನಕ್ಕೊಮ್ಮೆ ಬಳಸಬಹುದು.

ವಿನಿಗರ್ ನೊಂದಿಗೆ ಕಂದು ನಿವಾರಣೆ (Vinegar as a tan remedy)

ಕಂದನ್ನು ನಿವಾರಿಸಲು ಅತ್ಯುತ್ತಮವಾದ ವಿಧಾನವೆಂದರೆ ವಿನಿಗರ್. ವಿನಿಗರ್ ಹಾಗೂ ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಒಂದು ಅಗಲವಾದ ಬಟ್ಟಲಿನಲ್ಲಿ ಬೆರೆಸಿ. ಬೆರೆಸಿದ ದ್ರವಣದಲ್ಲಿ ನಿಮ್ಮ ಕಂಡಿರುವ ಕೈಗಳನ್ನು ಐದರಿಂದ ಹತ್ತು ನಿಮಿಷಗಳು ನೆನೆಸಿಡಿ ಹಾಗೂ ನಂತರ ತಣ್ಣನೆಯ ನೀರಿನಲ್ಲಿ ಕೈಗಳನ್ನು ತೊಳೆದುಕೊಳ್ಳೀರಿ. ಕಂಡು ನಿವಾರಣೆಯಾಗುವವರೆಗೂ ಈ ಪದ್ದತಿಯನ್ನು ದಿನ ನಿತ್ಯವೂ ಬಳಸಬಹುದು.

ಜೇನುತುಪ್ಪ ಹಾಗೂ ನಿಂಬೆಯಿಂದ ಕಂದು ನಿವಾರಣೆ (Honey & lime juice as anti tan)

ಜೇನುತುಪ್ಪ ಹಾಗೂ ನಿಂಬೆ ಹಣ್ಣಿನ ರಸವನ್ನು ಬೆರಸಿ ಕಂಡು ಬಂದಿರುವ ಜಾಗಗಳಿಗೆ ಹಚ್ಚಿರಿ. ದ್ರಾವಣವನ್ನು ಹತ್ತರಿಂದ ಹದಿನೈದು ನಿಮಿಷಗಳು ಒಣಗಲು ಬಿಟ್ಟು ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ತೋಲೆದ ನಂತರ ಮೆದುವಾದ ಹತ್ತಿ ಚೌಕದಿಂದ ಒದ್ದೆಯನ್ನು ಮೆದುವಾಗಿ ಒಣಗಿಸಿ. ಹೀಗೆ ಮಾಡುವುದರಿಂದ ಸೂರ್ಯನಿಂದ ಉಂಟಾದ ಕಂದನ್ನು ಬೇಗ ಪರಿಹರಿಸಿಕೊಳ್ಳಬಹುದು.

ನಿಂಬೆ ಹಾಗೂ ಸೌತೆಕಾಯಿಯ ರಸದಿಂದ ಕಂದು ನಿವಾರಣೆ (Lime and cucumber juice to get rid of tan)

ಕಂದನ್ನು ನಿವಾರಿಸಲು ಇದು ಬಹಳ ಸುಲಭವಾದ ವಿಧಾನ. ನಿಂಬೆರಸ ಹಾಗೂ ಸೌತೆಕಾಯಿ ರಸವನ್ನು ಹೀರಿ ಪನ್ನೀರಿನೊಂದಿಗೆ(rosewater) ಬೆರೆಸಿ. ಈ ದ್ರಾವಣವನ್ನು ಕಂಡು ಬಂದಿರುವ ಜಾಗಕ್ಕೆ ಹಚ್ಚಿ ಹತ್ತು ಹದಿನೈದು ನಿಮಿಷಗಳು ಅಲ್ಲಿಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಅತಿಯಾಗಿ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಅತಿಯಾದ ಕಂದಿನಿಂದ ಮುಕ್ತಿಪಡೆಯಲು ಈ ವಿಧಾನ ಬಹಳ ಸಹಾಯಕಾರಿ. ನಿಂಬೆಯಲ್ಲಿರುವ ಸಿಟ್ರಿಕ್ ಅಂಶ ಹಾಗೂ ಪನ್ನೀರಿನಲ್ಲಿರುವ ಶಮನಕಾರಿ ಗುಣ ಒಂದು ಅಪೂರ್ವ ಕೂಟವಾಗಿ ಕಂದನ್ನು ಸುಲಭವಾಗಿ ತೆಗೆಯುವಲ್ಲಿ ಸಹಾಯಕವಾಗುತ್ತದೆ. ಈ ದ್ರಾವಣವನ್ನು ನೀವು ವಾರಕ್ಕೊಮ್ಮೆ ತಯಾರಿಸಿ ಫ್ರಿಡ್ಜ್ನಲ್ಲಿ ಇಟ್ಟು ನಿತ್ಯವೂ ಬಳಸಬಹುದು.

ಹತ್ತಿ ಅಥವಾ ಹತ್ತಿ ಬಟ್ಟೆಯನ್ನು ನಿಂಬೆ ಹಣ್ಣಿನ ರಸದಲ್ಲಿ ಅದ್ದಿ ಕಂಡು ಬಂದಿರುವ್ ಜಾಗಕ್ಕೆ ಮೆದುವಾಗಿ ಹಚ್ಚಿರಿ ಹಾಗೂ ಎರಡು ನಿಮಿಷಗಳು ಮಾಲಿಶು ಮಾಡಿ. ಹತ್ತು ಹದಿನೈದು ನಿಮಿಷಗಳು ಅದು ಒಣಗಿದ ನಂತರ ತಣ್ಣನೆಯ ನೀರಿನಿನ್ದ ತೊಳೆಯಿರಿ.

ಮಜ್ಜಿಗೆ ಹಾಗೂ ಕಡಲೆಹಿಟ್ಟಿನ ಕಂದು ಚಿಕಿತ್ಸೆ (Yogurt and gram flour for tanned skin)

ಕಡಲೆ ಹಿಟ್ಟಿಗೆ ಮೊಸರು ಹಾಗೂ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಲೇಪನವನ್ನು ತಯಾರಿಸಿಕೊಳ್ಳಿ. ಹಾಗೂ ಅದನ್ನು ಕಂಡು ಬಂದಿರುವ ಜಾಗಕ್ಕೆ ಹಚ್ಚಿರಿ. ಹತ್ತು ಹದಿನೈದು ನಿಮಿಷಗಳು ಅಥವಾ ಅದು ಸಂಪೂರ್ಣ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಅದನ್ನು ತೊಳೆಯಿರಿ. ಇದರಿಂದ ಕಂದು ನೈಸರ್ಗಿಕವಾಗಿ ನಿವಾರಣೆಯಾಗುವುದಲ್ಲದೆ ಚರ್ಮಕ್ಕೆ ಹೊಳಪು ಬರುತ್ತದೆ.

ಅರಿಶಿನ ಹಾಗೂ ಹಸಿ ಹಾಲು (Turmeric and raw milk)

ಒಂದು ಲೋಟ ಹಾಲಿಗೆ ಒಂದು ಚಮಚೆ ಅರಿಶಿನ ಹಾಗೂ ನಿಂಬೆ ರಸವನ್ನು ಬೆರೆಸಿ ಕಂಡು ಬಂದಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹತ್ತು ನಿಮಿಷಗಳು ಅದನ್ನು ಒಣಗಲು ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆಯಬೇಕು. ಇದರಿಂದ ಮುಖದ ಮೇಲಿನ ಕಂದನ್ನು ಸುಲಭವಾಗಿ ತೆಗೆಯಬಹುದು ಹಾಗೂ ಎಳನೀರನ್ನು ಸತತವಾಗಿ ನಿಮ್ಮ ಕೈಗಳಿಗೆ ಹಚ್ಚಿಕೊಳ್ಳುವುದರಿಂದಲೂ ಸಹ ಕಂದನ್ನು ಕಡಿಮೆ ಮಾಡಿಕೊಳ್ಳಬಹುದು. ಪರಿಣಾಮಕಾರಿ ಫಲಿತಾಂಶಗಳಿಗಾಗಿ ದಿನಕ್ಕೆ ಹಲವು ಬಾರಿ ಈ ಮೇಲಿನ ದ್ರಾವಣವನ್ನು ಹಚ್ಚಬಹುದು ಹಾಗೂ ಕ್Yಗಳಿನ್ದ ಕಂದನ್ನು ತೆಗೆಯುವುದಕ್ಕೂ ಸಹ ಇದು ಬಹಳ ಉಪಯೋಗಕಾರಿ.

ಪಪಾಯ ತಿರುಳಿನ ಮಾಲಿಶು (Papaya pulp massage on tanned area)

ಕಂದನ್ನು ತ್ವರಿತವಾಗಿ ಹೋಗಲಾಡಿಸಬೇಕೆ? ಇದಕ್ಕೆ ಪಪಾಯ ತಿರುಳು ಬಹಳ ಉಪಯೋಗಿ. ಪಪಾಯ ತಿರುಳನ್ನು ತೆಗೆದು ಕಂಡು ಬಂದಿರುವ ಜಾಗಕ್ಕೆ ಹಚ್ಚಿ ಹತ್ತು ನಿಮಿಷಗಳಷ್ಟು ಮಾಲಿಶು ಮಾಡಿಕೊಳ್ಳಿ, ನಂತರ ಹತ್ತು ಹದಿನೈದು ನಿಮಿಷಗಳು ಅದನ್ನು ಹಾಗೆಯೇ ಬಿಡಿ. ಅದು ಒಣಗಲು ಶುರುವಾಗುತ್ತಿದ್ದಂತೆ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿರಿ.

ಬೂದುಗುಂಬಳ ಕಾಯಿ ಹಾಗೂ ಮುಲ್ತಾನಿ ಮಿಟ್ಟಿಯೊಂದಿಗೆ ಕಂದು ನಿವಾರಣೆ (How to remove tan with multani mitti & white gourd)

ಬುಡುಕುಂಬಳ ಕಾಯಿ ಹಾಗೂ ಮುಲ್ತಾನಿ ಮಿಟ್ಟಿಯ ಲೇಪನವನ್ನು ತಯಾರಿಸಿ ಕಂಡು ಬಂದಿರುವ ಜಾಗಕ್ಕೆ ಹಚ್ಚಿಕೊಳ್ಳಬಹುದು ನಂತರ ನೀರಿನಿಂದ ತೊಳೆಯಬಹುದು. ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಬೂದುಗುಂಬಳ ಕಾಯನ್ನು ಅಂದು ಅದರ ಒಳಗಿನ ಭಾಗವನ್ನು ತೆಗೆದುಕೊಳ್ಳಬೇಕು. ಅದನ್ನು ಸಣ್ಣಗೆ ಹೆಚ್ಚಿಕೊಂಡು, ರುಬ್ಬಿಕೊಳ್ಳಬೇಕು. ರುಬ್ಬಿದ ಕಾಯಿಗೆ ಎರಡು ಚಮಚೆ ಮುಲ್ತಾನಿ ಮಿಟ್ಟಿಯನ್ನು ಬೆರೆಸಬೇಕು. ಅದನ್ನು ಚೆನ್ನಾಗಿ ಕಲಸಿ ಕಂಡು ಬಂದಿರುವ ಮುಖ, ಹಣೆ, ಕೈಗಳು ಹಾಗೂ ಕತ್ತಿಗೆ ಹಚ್ಚಿಕೊಳ್ಳಬೇಕು. ಅದು ಸಂಪೂರ್ಣ ಒಣಗುವ ತನಕ ಹಾಗೆಯೇ ಬಿಟ್ಟು ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು.

ಮದ್ದಿಗಿಂತ ಮುನ್ನೆಚರಿಕೆ ಮೇಲು ಎಂದು ಹೇಳುವಂತೆ ಕಂಡು ಬಾರದೆ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಒಳ್ಳೆಯದು. ಬಿಸಿಲು ಹೆಚ್ಚಿರುವ ಸಮಯ ಅಂದರೆ ಬೆಳ್ಳಿಗೆ ಹತ್ತರಿಂದ ಸಂಜೆ ನಾಲ್ಕರವರೆಗೆ ಆಚೆಗೆ ಹೊರಡುವುದನ್ನು ತಡೆಗಟ್ಟಿ. ಹೋಗಲೇಬೇಕಾದ ಪರಿಸ್ತಿತಿಯಲ್ಲಿ ಸನ್ ಸ್ಕ್ರೀನ್ ಗಳನ್ನು ಬಳಸಿ. ಹೆಚ್ಚು SPF ಇರುವ ಸನ್ ಸ್ಕ್ರೀನ್ ಗಳು ನಿಮ್ಮ ಚರ್ಮವನ್ನು ಸೂರ್ಯನ ಹೊಡೆತಕ್ಕೆ ಸಿಗದೆ ಪರಿಣಾಮಕಾರಿಯಾಗಿ ತಡೆಯುತ್ತದೆ. ಬಿಸಿಲಿನಲ್ಲಿ ಗಾಡಿ ಚಲಾಯಿಸುವಾಗ ಕೈಗಳಿಗೆ ಕೈಗವಚಗಳನ್ನು ಹಾಗೂ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳಿ. ಇದರಿಂದ ಮುಖ ಹಾಗೂ ಕೈಗಳು ಕಂದುವುದನ್ನು ತಪ್ಪಿಸಬಹುದು.

ಕತ್ತಿನ ಮೇಲೆ ಆಗಿರುವ ಕಂದನ್ನು ತೆಗೆಯುವ ವಿಧಾನಗಳು (Home remedies to remove sun tan on neck)

ಕಪ್ಪಗಿನ ಕತ್ತಿನಿಂದ ನಿಮ್ಮಗೆ ಮುಜುಗರವಾಗಿದೆಯೇ? ಇದಕ್ಕೆ ಕಾರಣ ಸೂರ್ಯನ ಕಿರಣಗಳ ಹೊಡೆತದಿಂದ ನಿಮ್ಮ ಕತ್ತು ಕಂದಿರುವುದು. ಕತ್ತು ಒಂದೇ ಅಲ್ಲದೆ ಕೈ,ಹಸ್ತ, ಮುಖ ಹಾಗೂ ಕಾಲುಗಳು ಸಹ ಕಂದಬಹುದು. ಕೆಳಗಿನ ವಿಧಾನಗಳಿಂದ ಕತ್ತಿನ ಮೇಲೆ ಆಗಿರುವ ಕಂದನ್ನು ತೆಗೆಯಬಹುದು.

ನಿಂಬೆ ಹಾಗೂ ಸೌತೆಕಾಯಿಯ ರಸದಿಂದ ಕಂದು ನಿವಾರಣೆ (Cucumber juice, turmeric powder and lemon juice)

ಕಂದನ್ನು ನಿವಾರಿಸಲು ಇದೊಂದು ಉತ್ಕೃಷ್ಟವಾದ ಮುಖಲೇಪನ ಸೌತೆಯಲ್ಲಿರುವ ಶುದ್ದಿಕಾರಕಗಳು ಹಾಗೂ ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲದಿಂದ ಇದು ಬಹಳ ಪರಿಣಾಮಕಾರಿ.. ನಿಂಬೆರಸ ಹಾಗೂ ಸೌತೆಕಾಯಿ ರಸವನ್ನು ಹೀರಿ ಬೆರೆಸಿ. ಈ ದ್ರಾವಣವನ್ನು ಕತ್ತಿಗೆ ಹಚ್ಚಿ ಇಪ್ಪತ್ತು ನಿಮಿಷಗಳು ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಈ ಲೇಪನವನ್ನು ನೀವು ನಿತ್ಯವೂ ಬಳಸಬಹುದು.

ನಿಂಬೆಯಿಂದ ಕಂದಿನ ನಿವಾರಣೆ (How to remove sun tan on neck with lemon)

ನಿಂಬೆ ಒಂದು ನೈಸರ್ಗಿಕ ಬಿಳುಪುಕಾರಕ(Bleach) ಮಾತ್ರವಲ್ಲದೆ ಉತ್ತಮ ಶುದ್ದಿಕಾರಕ ಸಹ. ಇದರಿಂದ ಒಣ ಚರ್ಮವೆಲ್ಲ ಹೊರಬಂದು ಚರ್ಮ ಕಾಂತಿಯುಕ್ತವಾಗುತ್ತದೆ. ನಿಂಬೆ ಹಣ್ಣನ್ನು ನೇರವಾಗಿ ಕತ್ತಿಗೆ ಉಜ್ಜಿರಿ ಅಥವಾ ಪನ್ನೀರಿನೊಂದಿಗೆ ನಿಂಬೆ ರಸ ಬೆರೆಸಿ ಹಚ್ಚಿ. ಇದರಿಂದ ಕಂಡು ನಿವಾರಣೆಯಾಗಿ ಗೌರವರ್ಣ ಲಭಿಸುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕತ್ತಿನ ಕಂದು ಮಾಯವಾಗುತ್ತದೆ.

ಕೊಬ್ಬರಿ ಎಣ್ಣೆಯಿಂದ ಕಂದು ನಿವಾರಣೆ (Coconut oil to remove tanning from neck)

ನಮ್ಮ ಹಿರಿಯರು ಹೇಳುವಂತೆ ನಾವು ಕೂದಲಿಗೆ ಹಾಗೂ ತಲೆಗೆ ಎಣ್ಣೆ ಹಚ್ಚಿಕೊಳ್ಳದೆ ಇರಬಹುದು ಆದರೆ ಹಾಗೆ ಮಾಡುವುದರಿಂದ ನಮ್ಮ ಚರ್ಮ ಕಂದುವುದನ್ನು ತಡೆಯಬಹುದು ಅಷ್ಟೇ ಅಲ್ಲದೆ ಚರ್ಮವನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದಕ್ಕೂ ಇದು ಸಹಾಯಕಾರಿ. ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ಕಟ್ಟಿಗೆ ಹಚ್ಚುವುದರಿಂದ ಕಂಡು ಕಡಿಮೆಯಾಗುತ್ತದೆ. ಅಷ್ಟೆಅಲ್ಲದೆ ನೈಸರ್ಗಿಕ ಕೊಬ್ಬರಿಎನನೆ ನಿಮ್ಮ ಚರ್ಮಕ್ಕೆ ಪೋಷಣೆ ಒದಗಿಸುವುದರಿಂದ ಚರ್ಮವು ಸಹ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಕರವಾಗುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಚರ್ಮ ಕಂದುವುದರಿಂದ ನಿಮ್ಮಗೆ ಮುಕ್ತಿಸಿಗುತ್ತದೆ.

ಸಕ್ಕರೆ ಹಾಗೂ ಎಣ್ಣೆಯ ಲೇಪನಗಳಿಂದ ಕಂದು ನಿವಾರಣೆ (How to get rid of tan with sugar & oil scrubs)

ಕಂಡು ತೆಗೆಯಲು ಬೇಕಾದ ಸ್ಕ್ರಬ್ ಗಳನ್ನು ಈಗ ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕೆ ಬೇಕಾಗಿರುವುದೆಲ್ಲ ಇಷ್ಟೇ; ಒಂದು ಚಮಚೆ ಸಕ್ಕರೆ ಹಾಗೂ ಮೂರು ಚಮಚೆ ಆಲಿವ್ ಎಣ್ಣೆ. ಬೇಕಾದರೆ ಕೆಲವು ಹನಿಗಳಷ್ಟು ನಿಂಬೆರಸವನ್ನು ಸಹ ಬೆರೆಸಬಹುದು. ಇವೆಲ್ಲವನ್ನು ಬೆರೆಸಿ ಮುಖಕ್ಕೆ ಹಾಗೂ ಕತ್ತಿಗೆ ಹಚ್ಚಿರಿ ಹಾಗೂ ನಿಮ್ಮ ಬೆರಳುಗಳಿಂದ ಮೃದುವಾಗಿ ಉಜ್ಜಿರಿ. ಇದನ್ನು ಎರಡರಿಂದ ಮೂರು ನಿಮಿಷಗಳು ಮಾಡಿ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದರಿಂದ ಕಂಡು ಮಾತ್ರವಲ್ಲದೆ ನಿರ್ಜೀವ ಚರ್ಮಕಣಗಳು ಸಹ ಇಲ್ಲವಾಗುತ್ತವೆ.

ಮುಖ ಹಾಗೂ ಹಣೆಯ ಮೇಲಿನ ಕಂದು ತೆಗೆಯುವ ವಿಧಾನಗಳು (Ways to remove tan on face & forehead naturally)

ಅನಾನಸ್ ಹಾಗೂ ಪಪ್ಪಾಯ ಹಣ್ಣಿನಿಂದ ಕಂದು ನಿವಾರಣೆ (Pineapple and papaya for treating forehead tan)

ಅನಾನಸ್ ಹಾಗೂ ಪಪಾಯಗಳ್ಲನ್ನು ಒಟ್ಟಿಗೆ ರುಬ್ಬಿಕೊಂಡು, ರುಬ್ಬಿದ ಹಣ್ಣನ್ನು ಕಂಡು ಬಂದಿರುವ ಜಾಗಕ್ಕೆ ಹಚ್ಚಿರಿ. ಹತ್ತು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಅನಾನಸ್ ಹಾಗೂ ಪಪಾಯಗಳಲ್ಲಿರುವ ನೈಸರ್ಗಿಕ ಕಂಡು ನಿವಾರಕ ಅಂಶಗಳು ಕಂಡು ತೆಗೆಯುವುದಲ್ಲದೆ ರಸಾಯನಯುಕ್ತ ಪ್ರಸಾಧನ ಉತ್ಪನ್ನಗಳಿಂದ ನಿಮ್ಮನ್ನು ದೂರವಿಡುತ್ತದೆ. ಮಾರುಕಟ್ಟೆಯಲ್ಲಿ ಬಹಳಷ್ಟು ಕಂಡು ನಿವಾರಕ ಔಷಧಿಗಳು ದೊರೆಯುತ್ತವೆ ಆದರೂ ಯಾವುದರಿಂದ ನಿಮ್ಮಗೆ ಅಡ್ಡ ಪರಿಣಾಮಗಳಾಗುತ್ತವೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಮನೆಮದ್ದು ಉತ್ತಮ.

ಆಲೂಗಡ್ದೆಯಿಂದ ಮುಖದ ಕಂದುವಿಕೆಯ ನಿವಾರಣೆ (Potato for removing tan on forehead and tan on face)

ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಒಂದು ಕಂಡು ನಿವಾರಕ ತರಕಾರಿಯೆಂದರೆ ಅಲೂಗಡ್ಡೆ.ಅಲೂಗದ್ದೆಯನ್ನು ಬಳಸಿ ಮುಖದ ಮೇಲಿನ ಕಂದನ್ನು ನಿವಾರಿಸಬಹುದು. ಹಸಿ ಆಲೂಗಡ್ಡೆಯನ್ನು ರುಬ್ಬಿ ಅದನ್ನು ಮುಖ ಹಾಗೂ ಹಣೆಗೆ ಹಚ್ಚಿಕೊಳ್ಳಬೇಕು. ಹದಿನೈದು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಹೊಂದಬಹುದು. ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ಅಲೂಗಡ್ದೆಯಾದ್ದರಿಂದ ಇದನ್ನು ಔಷಧಿಯಾಗಿ ಬಹಳ ಕಾಲ ಪರಿಗಣಿಸಿರಲಿಲ್ಲ ಆದ್ರೆ ಇದರ ಸಹಾಯದಿಂದ ನೀವು ಉತ್ತಮ ಚರ್ಮವನ್ನು ಹೊಂದಬಹುದು.

ನಿಂಬೆ ಹಣ್ಣು ಹಾಗೂ ಸಕ್ಕರೆಯಿಂದ ಕಂದಿರುವ ಚರ್ಮದ ಚಿಕಿತ್ಸೆ (Lemon juice and sugar for removing tan on face & forehead)

ನಿಂಬೆ ರಸವನ್ನು ಹಿಂಡಿ ಅದಕ್ಕೆ ಸಕ್ಕರೆಯನ್ನು ಬೆರೆಸಬೇಕು. ನಂತರ ಆ ದ್ರಾವಣವನ್ನು ಮುಖಕ್ಕೆ ಹಾಗೂ ಹಣೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟುಬಿಡಬೇಕು. ನೈಸರ್ಗಿಕ ಸ್ಕ್ರಬ್ ನ ರೀತಿ ಕೆಲಸ ಮಾಡುವ ಈ ದ್ರವಣದ ಸಹಾಯದಿಂದ ಒಂದೆರಡು ವಾರಗಳಲ್ಲಿ ಕಂದಿರುವ ಚರ್ಮದಿಂದ ವಿಮುಕ್ತಿ ಪಡೆಯುವುದಲ್ಲದೆ, ಕೋಮಲವಾದ ಚರ್ಮವನ್ನು ಸಹ ಹೊಂದಬಹುದು. ಅಷ್ಟೇ ಅಲ್ಲದೆ ಚರ್ಮದ ಮೇಲೆ ಇರುವಂತಹ ಕಪ್ಪು ಕಲೆಗಳನ್ನು ಹಾಗೂ ಲೋಪಗಳನ್ನು ಸಹ ಈ ದ್ರಾವಣ ಸಮರ್ಥವಾಗಿ ಗುಣಪಡಿಸುತ್ತದೆ. ಆದ್ದರಿಂದ ಸಕ್ಕರೆ ಹಾಗೂ ನಿಂಬೆ ಹಣ್ಣಿನ ರಸ ನಿಮ್ಮ ಮುಖ ಸೌಂದರ್ಯಕ್ಕೆ ಬಲು ಉಪಯೋಗಕಾರಿ.

ಮೋಸರು ಹಾಗೂ ಜೋಳದ ಹಿಟ್ಟಿನಿಂದ ಕಂದು ನಿವಾರಣೆ (Yogurt and gram flour for face tan & forehead tan)

ಅವಶ್ಯವಾದಷ್ಟು ಜೊಳದ ಹಿಟ್ಟನ್ನು ಮೊಸರು ಹಾಗೂ ನಿಂಬೆ ರಸದೊಂದಿಗೆ ಬೆರೆಸಿ ಕಂದಿರುವ ಮುಖಕ್ಕೆ ಹಾಗೂ ಹಣೆಯ ಭಾಗಕ್ಕೆ ಲೇಪಿಸಿಕೊಳ್ಳಿ. ಹದಿನ್Yದು ನಿಮಿಷಗಳ ನಂತರ ನೀರಿನೊಂದಿಗೆ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಕಂದಿನಿಂದ ರಕ್ಷಿಸಿಕೊಳ್ಳಲು ಒಂದು ಪರಿಣಾಮಕಾರಿ ಮನೆ ಮದ್ದು. ಇದನ್ನು ವಾರದಲ್ಲಿ ಮೂರು ಬಾರಿ ಬಳಸುವುದರಿಂದ ಉತ್ತಮ ಬದಲಾವಣೆಯನ್ನು ಕಾಣಬಹುದು.

ಲೊಳೆಸರ, ಟೊಮ್ಯಾಟೋ ಹಾಗೂ ಕೆಂಪು ತೊಗರಿಬೆಳೆಯ ಫೇಸ್ ಪ್ಯಾಕ್ (Aloe vera, tomato and red lentil (Masoor daal) face pack)

ಮುಖ ಹಾಗೂ ನೆತ್ತಿಯ ಕಂದನ್ನು ತೆಗೆಯಲು ಬಲು ಪರಿಣಾಮಕಾರಿ ಅಸ್ತ್ರ ಎಂದರೆ ಈ ಕೆಳಗಿನ ಫೇಸ್ ಪ್ಯಾಕ್. ಕೆಂಪು ತೊಗರಿ ಬೆಳೆ ಎಂತಹ ಕಂದನ್ನು ಸಹ ತೆಗೆಯುವ ಶಕ್ತಿ ಇರುವ ವಸ್ತು. ಆದ್ದರಿಂದ ಇದನ್ನು ಲೋಳೆಸರ ಹಾಗೂ ಟೊಮ್ಯಾಟೋ ಜೊತೆಗೆ ಬೆರೆಸುವುದರಿಂದ ಇದು ಚರ್ಮವನ್ನು ಪುನರ್ಯೌವನಗೊಳಿಸುವುದು. ತೊಗರಿಬೇಳೆಯನ್ನು ನೀರಿನಲ್ಲಿ ಹದಿನೈದು ನಿಮಿಷಗಳು ನೆನೆಸಿ ರುಬ್ಬಿಕೊಳ್ಳಬೇಕು. ಅದಕ್ಕೆ ಲೋಳೆಸರದ ತಿರುಳನ್ನು ಹಾಗೂ ಟೊಮ್ಯಾಟೋ ತಿರುಳನ್ನು ಬೆರೆಸಿ ಚೆನ್ನಾಗಿ ಕಲಸಬೇಕು. ನಂತರ ಆ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು ಹದಿನೈದು ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.

ಸೂರ್ಯ ಕಿರಣಗಳಿಂದ ಆಗುವ ಕಂದು ಹಾಗು ಹಾನಿಕಾರಕ ಪರಿಣಾಮಗಳು (Harmful effects of sun tan)

ಸೂರ್ಯನಿಂದ ಹೊಮ್ಮುವ ಅತಿನೆರಳೆ ಕಿರಣಗಳಿಗೆ ನಮ್ಮ ಚರ್ಮವನ್ನು ಹೆಚ್ಚು ಒಡ್ಡಿಕೊಳ್ಳುವುದರಿಂದ ಕಂದು ಉಂಟಾಗುತ್ತದೆ. ಮುಖ, ಕತ್ತು, ಕೈ ಹಾಗೂ ಕಾಲುಗಳ ಚರ್ಮ ಸಾಮಾನ್ಯವಾಗಿ ಕಂದುತ್ತದೆ. ಅಷ್ಟೇ ಅಲ್ಲದೆ, ಅತಿನೆರಳೆ ಕಿರಣಗಳ ಕಾರಣದಿಂದ ಮೊಡವೆ, ಕಲೆ, ಸುಕ್ಕು, ನೆರಿಗೆ, ಕಪ್ಪು ಕಲೆ, ಚರ್ಮ ಸುಡುವಿಕೆ ಹಾಗೂ ಚರ್ಮದ ಅಕಾಲಿಕ ವೃದ್ದಾಪ್ಯ ಉಂಟಾಗಬಹುದು. ಅತಿಹೆಚ್ಚು ಅತಿನೇರಳೆ ಕಿರಣಗಳ ಪ್ರಭಾವದಿಂದ ಚರ್ಮದ ಕ್ಯಾನ್ಸರ್ ಸಹ ಬರಬಹುದು.

ಚರ್ಮದ ಕಂದು ನಿವಾರಿಸಲು ಮನೆ ಮದ್ದು ಹಾಗೂ ಫೇಸ್ ಪ್ಯಾಕ್ ಗಳು (Home remedies & face packs for sun tanned skin)

ಮಾರುಕಟ್ಟೆಯಲ್ಲಿ ಲಭಿಸುವ ಅನೇಕ ಕಂದು ನಿವಾರಕ ಔಷಧಗಳಲ್ಲಿ ಹಾನಿಕಾರಕ ರಾಸಾಯನಿಕ ಹಾಗೂ ಬಿಳಿಪುಕಾರಕಗಳಿರುವುದು(ಬ್ಲೀಚ್) ಪತ್ತೆಯಾಗಿದೆ. ಆದರೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಈ ಕೆಳಗಿನ ನೈಸರ್ಗಿಕ ಹಾಗೂ ಆರೋಗ್ಯಕಾರಿ ಫೇಸ್ ಪ್ಯಾಕ್ ಗಳು ಸುಲಭ ಮಾತ್ರವಲ್ಲದೆ ಚರ್ಮವನ್ನು ಹಾನಿಗೆ ಒಳಮಾಡುವುದಿಲ್ಲ.

ಟೊಮ್ಯಾಟೋ, ಮೊಸರು ಹಾಗೂ ನಿಂಬೆಯೊಂದಿಗೆ ಕಂದು ನಿವಾರಿಸುವ ಫೇಸ್ ಪ್ಯಾಕ್ (Tomato, yogurt & lemon juice face pack to remove sun tan)

ಈ ಕೆಳಗಿನ ಫೆಸ್ಪ್ಯಾಕ್ನೊಂದಿಗೆ ಕಂಡು, ಕಲೆ ಹಾಗೂ ಚರ್ಮ ವಿವರ್ಣವಾಗುವುದನ್ನು ತಪ್ಪಿಸಬಹುದು. ಮೂರು ಪದಾರ್ಥಗಳಲ್ಲಿರುವ ಸಿಟ್ರಸ್ ಅಂಶ ನೈಸರ್ಗಿಕ ನಾದಕವಾಗಿ ಕೆಲಸಮಾಡಿ , ಮುಖ ಹಾಗೂ ಮೈಯಮೇಲಿನ ರೋಮಕೂಪಗಳನ್ನು(Pores) ಸಂಕುಚಿಸಿ ಚರ್ಮ ಎಣ್ಣೆಯುಕ್ತವಾಗುವುದನ್ನು ಕಡಿಮೆ ಮಾಡುತ್ತದೆ. ಈ ಪ್ಯಾಕನ್ನು ತಯಾರಿಸಲು ಎರಡು ಚಮಚ ಟೊಮ್ಯಾಟೋ ತಿರುಳು, ಒಂದು ಚಮಚ ನಿಂಬೆ ರಸ ಹಾಗೂ ಒಂದು ಚಮಚ ಮೊಸರನ್ನು ಒಂದು ಬಟ್ಟಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಮೂವತ್ತು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಲೊಳೆಸರ, ಟೊಮ್ಯಾಟೋ ಹಾಗೂ ಕೆಂಪು ತೊಗರಿಬೆಳೆಯ ಫೇಸ್ ಪ್ಯಾಕ್ ನಿಂದ ಕಂದು ನಿವಾರಣೆ (Aloe vera, masoor daal (Red lentil) & tomato face pack to get rid of tan)

ಕೆಂಪು ತೊಗರಿ ಬೆಳೆ ಎಂತಹ ಕಂದನ್ನು ಸಹ ತೆಗೆಯುವ ಶಕ್ತಿ ಇರುವ ವಸ್ತು. ಆದ್ದರಿಂದ ಇದನ್ನು ಲೋಳೆಸರ ಹಾಗೂ ಟೊಮ್ಯಾಟೋ ಜೊತೆಗೆ ಬೆರೆಸುವುದರಿಂದ ಇದು ಚರ್ಮವನ್ನು ಪುನರ್ಯೌವನಗೊಳಿಸುವುದು. ತೊಗರಿಬೇಳೆಯನ್ನು ನೀರಿನಲ್ಲಿ ಇಪತ್ತು ನಿಮಿಷಗಳು ನೆನೆಸಿ ತರಗು ತರಗಾಗಿ ರುಬ್ಬಿಕೊಳ್ಳಬೇಕು. ಅದಕ್ಕೆ ಲೋಳೆಸರದ ತಿರುಳನ್ನು ಹಾಗೂ ಟೊಮ್ಯಾಟೋ ತಿರುಳನ್ನು ಬೆರೆಸಿ ಚೆನ್ನಾಗಿ ಕಲಸಬೇಕು. ನಂತರ ಆ ಮಿಶ್ರಣವನ್ನು ಧಾರಾಳವಾಗಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ನೀರಿನಿಂದ ತೊಳೆಯಬೇಕು.

ಓಟ್ಸ್ ಹಾಗೂ ಮಜ್ಜಿಗೆ ಇಂದ .ತ್ವರಿತ ಕಂದು ನಿವಾರಕ ಮುಖಲೇಪನ (Oat meal & butter milk exfoliating pack to get rid of sun tan fast)

ಓಟ್ಸ್ ಅಥವಾ ತೋಕೆ ಗೋಧಿ ಒಂದು ನೈಸರ್ಗಿಕ ಸ್ಕ್ರಬ್ ಆಗಿರುತ್ತದೆ. ಇದನ್ನು ಬಳಸಿ ಬಹಳ ಸುಲಭವಾಗಿ ಕಪ್ಪು ಕಲೆ, ನಿರ್ಜೀವ ಚರ್ಮಕಣಗಳಿಂದ ಮುಕ್ತಿ ಪಡೆಯಬಹುದು. ಮಜ್ಜಿಗೆ ಚರ್ಮವನ್ನು ಕೋಮಲಗೊಳಿಸಿ ಗಾಯಗಳನ್ನು ವಾಸಿ ಮಾಡುಟ್ತಡೇೆರದೂ ಚಮಚ ಓಟ್ಸ್ ಹಾಗೂ ಮೂರು ಚಮಚ ಮಜ್ಜಿಗೆ ಬೆರೆಸಿ ಅದನ್ನು ಮುಖ ಹಾಗೂ ದೇಹಕ್ಕೆ ಹಚ್ಚಿಕೊಳ್ಳಿ. ನಂತರ ವೃತ್ತಾಕಾರವಾಗಿ ಮಾಲಿಶು ಮಾಡಿ. ಹದಿನೈದು ನಿಮಿಷಗಳ ನಂತರ ನೀರಿನಲ್ಲಿ ತೊಳೆಯಿರಿ.

ಕಿತ್ತಳೆ ರಸ ಹಾಗೂ ಮೊಸರಿನ ಫೇಸ್ ಪ್ಯಾಕ್ (Orange juice & yogurt face pack to remove tan quickly)

ಕಿತ್ತಳೆ ಹಣ್ಣಿನಲ್ಲಿ ಸೀ ಜೀವಸತ್ವಗಳು ಹೆಚ್ಚಾಗಿ ಇರುತ್ತವೆ. ಇದರಿಂದ ನಿಮ್ಮ ಚರ್ಮದ ಮೇಲೆ ಉಂಟಾಗುವ ದದ್ದು ಹಾಗೂ ಕಲೆಗಳನ್ನು ಇದು ಬಹು ಬೇಗ ನಿವಾರಿಸುತ್ತದೆ. ಹಾಗೂ ಕಿತ್ತಳೆಯಲ್ಲಿರುವ ಕೊಲಾಜೆನ್ ನಮ್ಮ ಚರ್ಮ ಮುದಿಯಾಗುವುದನ್ನು ನಿಧಾನ ಮಾಡಿ ಚರ್ಮ ಗಟ್ಟಿಯಾಗುವುದರಲ್ಲಿ ಸಹಾಯ ಮಾಡುತ್ತವೆ. ಹಾಗೆಯೇ ಮೊಸರು ಒಂದು ನೈಸರ್ಗಿಕ ಬಿಳುಪುಕಾರಕ ಹಾಗೂ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಒಂದು ಚಮಚ ಕಿತ್ತಳೆ ರಸಕ್ಕೆ ಒಂದು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಮೂವತ್ತು ನಿಮಿಶಗಳ ನಂತರ ತೋಳೆಯಿರಿ.

ಆಲೂಗಡ್ಡೆ ಹಾಗೂ ನಿಂಬೆಯ ಫೇಸ್ ಪ್ಯಾಕ್ನಿಂದ ಕಂದು ನಿವಾರಣೆ (Potato & lemon juice face pack to remove tan)

ಆಲೂಗಡ್ಡೆ ಆಹಾರ ಮಾತ್ರವಲ್ಲದೆ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಒಂದು ಸಾಧನವೂ ಆಗಿದೆ. ಅದರಲ್ಲಿ ಜೀವಸತ್ವಗಳು, ಖನಿಜಗಳು, ಸಸಾರಜನಕಗಳು ಹಾಗೂ ನಾರಿನಂಶ ಇತ್ಯಾದಿ ಆರೋಗ್ಯವರ್ಧಿ ಉತ್ಪನ್ನಗಳು ಹೆಚ್ಚಾಗಿ ಇರುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ಕಂದು ಹಾಗೂ ಕಲೆಗಳ ನಿರ್ಮೂಲನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕಿತ್ತಳೆ ರಸ ಹಾಗೂ ಮೊಸರನ್ನು ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ನಲವತ್ತು ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.

ಸ್ಟ್ರಾಬೆರ್ರಿ (ಕಾಡು ಹಣ್ಣು) ಹಾಗೂ ಕೆನೆಯ ಸಹಾಯದಿಂದ ಕಂದು ನಿವಾರಣೆ (Strawberry & milk cream pack for quick tan removal)

ಸ್ಟ್ರಾಬೆರ್ರಿ ಹಣ್ಣಿನಲ್ಲಿರುವ ಕೆಲವು ಅಮ್ಶಗಳು ಚರ್ಮವನ್ನು ಕಾಂತಿಯುಕ್ತವಾಗಿ ಮಾಡುತ್ತದೆ ಹಾಗೂ ಕಲೆ ಮತ್ತು ಮcಚೆಗಳನ್ನು ತೊಲಗಿಸುತ್ತದೆ. ನಾಲ್ಕು ಸ್ಟ್ರಾಬೆರ್ರಿ ಹನ್ನುಗಳು ಹಾಗೂ ಎರಡು ಚಮಚ ಹಾಳಿನ ಕೆನೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಮೂವತ್ತು ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.

ಹಾಲಿನ ಪುಡಿ, ಜೇನು ತುಪ್ಪ ಹಾಗೂ ಬಾದಾಮಿ ಎಣ್ಣೆಯ ಫೇಸ್ ಪ್ಯಾಕ್ (Milk powder, honey & almond oil face pack)

ಹಾಲಿನ ಪುಡಿ ಚರ್ಮವನ್ನು ಹುಡಿಯಾಗದಂತೆ ಕಾಪಾಡುತ್ತದೆ ಹಾಗೂ ಶಾಕಕ್ಕೆ ಚರ್ಮ ಕಂದುವುದನ್ನು ತಡೆಯುತ್ತದೆ. ಎರಡು ಚಮಚೆ ಹಾಲಿನ ಪುಡಿಗೆ ಒಂದು ಚಮಚೆ ಜೇನು ಹಾಗೂ ಹಲವು ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.

ಕೇಸರಿ ಹಾಗೂ ತಾಜಾ ಕೆನೆಯ ಫೇಸ್ ಪ್ಯಾಕ್ನಿಂದ ಕಂದು ನಿವಾರಣೆ (How to remove tan naturally with saffron & fresh cream face pack)

ಕೇಸರಿಯು ಪುರಾತನ ಕಾಲದಿಂದಲೂ ಚರ್ಮದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಕಂದನ್ನು ತೆಗೆಯುವುದಲ್ಲದೆ, ಚರ್ಮವನ್ನು ಕಾಂತಿಯುಕ್ತವಾಗಿರಿಸಲು ಹಾಗೂ ಮೊಡವೆ ಇತ್ಯಾದಿ ಸಮಸ್ಯೆಗಳಿಗೆ ಕೇಸರಿ ಒಂದು ಉತ್ತಮ ಪರಿಹಾರ. ಕೇಸರಿಯ ಕೆಲವು ಎಸಳುಗಳನ್ನು ಎರಡು ಚಮಚೆ ಹಾಲಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ, ಇಪ್ಪತ್ತು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.
ಕಂದಿನಿಂದ ರಕ್ಷಿಸಿಕೊಳ್ಳಲು ಮನೆಮದ್ದು:

ಕೆಂಪು ತೊಗರಿ ಬೇಳೆ ಹಾಗೂ ಟೊಮ್ಯಾಟೋ ಪ್ಯಾಕ್ (Red lentil and tomato pack)

ತೊಗರಿ ಬೇಳೆ ಅಥವಾ ಮಾಸುರ್ ದಾಲ್ ಎಂದು ಕರೆಯುವ ಈ ಬೇಳೆ ಪ್ರತಿಯೊಂದು ಭಾರತೀಯ ಅಡುಗೆಮನೆಯಲ್ಲಿಯೂ ಅವಶ್ಯವಾಗಿ ಇರುವ ಒಂದು ಧಾನ್ಯ. ನಿಮ್ಮಲ್ಲಿ ಬಹಳಷ್ಟು ಜನಕ್ಕೆ ಇದರಿಂದ ಕಂದನ್ನು ತೆಗೆಯಬಹುದು ಎಂದು ಹೇಳಿದರೆ ಆಶ್ಚರ್ಯವಾಗಬಹುದು. ಆದರೆ ತೊಗರಿ ಕಂಡು ತೆಗೆಯುವಲ್ಲಿ ಬಹಳ ಪರಿಣಾಮಕಾರಿ ಉತ್ಪನ್ನ. ಒಂದು ಹಿಡಿಯಷ್ಟು ತೊಗರಿ ಬೆಲೆಯನ್ನು ರಾತ್ರಿಯಿಡೀ ನೆನೆಸಿಡಿ ಹಾಗೂ ಬೆಳ್ಳಿಗ್ಗೆ ಅದನ್ನು ರುಬ್ಬಿಕೊಳ್ಳಿ. ನಂತರ ಒಂದು ಹಣ್ಣಾಗಿರುವ ಟೊಮ್ಯಾತೋವಾನು ಹಿಂಡಿ ಅದರ ರಸವನ್ನು ರುಬ್ಬಿಕೊಂಡ ತೊಗರಿ ಬೇಳೆಗೆ ಕಲೆಸಿಕೊಳ್ಳಿ. ಈಗ ಅದನ್ನು ತೆಗೆದುಕೊಂಡು ಕಂಡು ಆಗಿರುವ ನಿಮ್ಮ ಮುಖಕ್ಕೆ ಕಣ್ಣಿನ ಭಾಗವನ್ನು ಹಾಗೂ ತುಟಿಗಳನ್ನು ಹೊರತುಪಡಿಸಿ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಓಟ್ಸ್ ಹಾಗೂ ಲೋಳೆಸರದ ತಿರುಳು (Oatmeal and aloe vera gel)

ನಮ್ಮ ಅಡುಗೆ ಮನೆಯಲ್ಲಿರುವ ಒಂದು ಆರೋಗ್ಯಕಾರಿ ಪದಾರ್ಥವಾದ ಓಟ್ಸ್ ಅನ್ನು ಬಳಸಿ ಕಂದು ಕಡಿಮೆ ಮಾಡಬಹುದು. ಯಾವುದೇ ಸ್ವಾದ ಬೆರೆಸದ ಓಟ್ಸನ್ನು ಬಳಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಈ ಫೇಸ್ ಪ್ಯಾಕನ್ನು ಮಾಡಲು ಲೊಳೆಸರ ಬೇಕಾಗುತ್ತದೇನ್ದು ಬಟ್ಟಲಿಗೆ ಮೂರು ಚಮಚೆ ಲೋಳೆಸರದ ತಿರುಳನ್ನು ಹಾಗೂ ಎರಡು ಚಮಚೆ ಓಟ್ಸನ್ನು ಹಾಕಿ ಸ್ವಲ್ಪ ಕಾಲ ನೆನೆಸಿಡಬೇಕು. ನಂತರ ಆ ಮಿಶ್ರಣವನ್ನು ತೆಗೆದುಕೊಂಡು ವೃತ್ತಾಕಾರವಾಗಿ ಮುಖಕ್ಕೆ ಹಚಿಕೊಳ್ಳಬೇಕು. ಲೋಳೆಸರವು ನಿಮ್ಮ ಮುಖಕ್ಕೆ ಚೇತೋಹಾರಿ ಪರಿಣಾಮವನ್ನು ಬೀರಿದರೆ, ಓಟ್ಸ್ ನಿರ್ಜೀವ ಚರ್ಮದ ಕಣಗಳನ್ನು ತೆಗೆದು ಹಾಕುತ್ತದೆ.

ಎಲೆ ಕೋಸಿನ ಪರಿಹಾರ (Cabbage leaves remedy)

ಬಹಳಷ್ಟು ಜನಕ್ಕೆ ಎಲೆ ಕೋಸಿನ ಕಂದು ನಿವಾರಕ ಗುಣಗಳ ಅರಿವು ಇರದೆ ಹೋಗಬಹುದು. ಆದರೆ ಒಮ್ಮೆ ಬಳಸಿದರೆ ಇದರ ಮಹತ್ವ ನಿಮಗೆ ಅರಿವಿಗೆ ಬರುತ್ತದೆ. ಎರಡು ದೊಡ್ಡದಾದ ಎಲೆಗಳನ್ನು ತೆಗೆದು ಫ್ರಿಡ್ಜ್ನಲ್ಲಿರಿಸಿ. ಅದು ತಣ್ಣಗಾದ ನಂತರ ಎಲೆಗಳನ್ನು ತೆಗೆದು ನಿಮ್ಮ ಮುಖಮುಚ್ಚುವಂತೆ ಇರಿಸಿಕೊಳಿ ಅದು ಇಪತ್ತು ನಿಮಿಷಗಳು ಇರಿಸಿದ ನಂತರ ತೆಗೆದು ಎಣ್ಣೆರಡು ಎಲೆಗಳನ್ನು ಇರಿಸಿಕೊಳ್ಳಬಹುದು. ಇದನ್ನು ಮಾಡುವುದರಿಂದ ಕಂದು ಬರುವುದನ್ನು ತಡೆಗಟ್ಟಬಹುದು.

ಕೇಸರಿ ಹಾಗೂ ಕೆನೆ  (Saffron and fresh cream)

ಮನೆಯಲ್ಲಿ ಹಸಿಯ ಹಾಲಿದ್ದಾರೆ ಕೆನೆಯನ್ನು ನೀವೇ ತಯಾರಿಸಿಕೊಳ್ಳಬಹುದು ಅಥವಾ ಅಂಗಡಿಯಿಂದ ಕೊಂಡುತರಬಹುದು. ಈ ಕೆಳಗಿನ ಫೇಸ್ ಪ್ಯಾಕ್ ನಿಂದ ನಿಮ್ಮ ಮುಖದ ಮೇಲೆ ಒಂದೇ ಒಂದು ಮೊಡವೆಯು ಉಳಿಯುವುದಿಲ್ಲ ಹಾಗೂ ಕಂಡು ಸಹ ನಿರ್ನಾಮವಾಗುತ್ತದೆ. ಎರಡು ಮೂರು ಚಮಚೆ ಕೆಣೆಗೆ ಸ್ವಲ್ಪ ಕೇಸರಿಯನ್ನು ಬೆರೆಸಿ ಚೆನ್ನಾಗಿ ಕಲಸಬೇಕು. ನಂತರ ಆ ಮಿಶ್ರಣವನ್ನು ನಿಮ್ಮ ಇಡೀ ಮುಖಕ್ಕೆ ಹಚ್ಚಿ ಮುಖ್ಯವಾಗಿ ಕಂಡು ಉಂಟಾಗಿರುವ ಪ್ರದೇಶಕ್ಕೇ. ಮೂವತ್ತು ನಿಮಿಷಗಳ ನಂತರ ಮಿಶ್ರಣವನ್ನು ಮುಖದಿಂದ ತೆಗೆಯಿರಿ.

ಬಾದಾಮಿ ಹಾಗೂ ಹಾಲಿನ ಔಷಧ (Almond and milk remedy)

ಬಾದಾಮಿ ಒಂದು ವಿಶಿಷ್ಟವಾದ ಬೀಜವಾಗಿದ್ದು ಅದರ ಬಳಕೆಯಿಂದ ಅನೇಕ ಆರೋಗ್ಯ ಹಾಗೂ ಚರ್ಮ ಸಂಬಂಧಿ ಲಾಭಗಳನ್ನು ಪಡೆಯಬಹುದಾಗಿದೆ. ಈ ಲಾಭಗಳಲ್ಲಿ ಕಂಡು ನಿವಾರಣೆಯೂ ಒಂದು. ಬಾದಾಮಿ ಹಾಗೂ ಹಾಲಿನ ಮಿಶ್ರಣದಿಂದ ಸುಲಭವಾಗಿ ಕಂದನ್ನು ನಿವಾರಿಸಬಹುದು. ರಾತ್ರಿ ಮಲಗುವ ಮುನ್ನ ನಾಲ್ಕು ಅಥವಾ ಐದು ಬಾದಮಿಗಳನ್ನು ತಣ್ಣನೆಯ ನೀರಿನಲ್ಲಿ ನೆನೆಸಿಡಿ ಹಾಗೂ ಬೆಳ್ಳಿಗ್ಗೆ ಆ ಬಾದಮಿಗಳನ್ನು ನೀರಿನ ಸಮೇತ ರುಬ್ಬಿಕೊಳ್ಳಿ. ರುಬ್ಬುವಾಗ ಪೂರ್ತಿ ನುಣ್ಣಗೆ ಮಾಡದೆ ಸ್ವಲ್ಪ ತರುಗು ತರುಗಾಗಿರಲಿ. ರುಬ್ಬಿಕೊಂಡ ಬಾದಾಮಿಗೆ ಎರಡು ಚಮಚ ಹಾಲನ್ನು ಬೆರೆಸಿ ನಂತರ ಕೈ ಬೆರಳುಗಳ ಸಹಾಯದಿಂದ ವೃತ್ತಾಕಾರವಾಗಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇಪತ್ತು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಹಸಿ ಪಪಾಯದಿಂದ ಕಂಡು ಚಿಕಿತ್ಸೆ (Raw papaya tan pack)

ಕೆಲವು ಅದೃಷ್ಟವಂತರ ಮನೆಯಲ್ಲಿಯೇ ಪಪಾಯ ಹಣ್ಣಿನ ಮರವಿರುವುದರಿಂದ ಅವರು ಬೇಕೆಂದಾಗ ಪಪಾಯ ಹಣ್ಣನು ತಿನ್ನಲು ಅಥವಾ ಸೌಂದರ್ಯ ಪ್ರಸಾದನ ಮಾಡಿಕೊಳ್ಳಲು ಬಳಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಪಪಾಯ ಗಿಡ ಇಲ್ಲವಾದಲ್ಲಿ ನೀವು ಮಾರುಕಟ್ಟೆಯಿಂದ ತಾಜಾ ಪಪಾಯ ಹಣ್ಣುಗಳನ್ನು ತಂದು ಸ್ವಲ್ಪ ಆಹಾರಕ್ಕೆ ಹಾಗೂ ಮಿಕ್ಕಿದ್ದನ್ನು ಸೌಂದರ್ಯಕ್ಕೆ ಬಳಸಿಕೊಳ್ಳಬಹುದು. ಕಾಲು ಭಾಗ ಪಪಾಯವನ್ನು ಸಣ್ಣಗೆ ಹೆಚ್ಚಿಕೊಂಡು ನಂತರ ರುಬ್ಬಿಕೊಳ್ಳಿ. ನಂತರ ರುಬ್ಬಿದ ಪಪಾಯವನ್ನು ಮುಖದ ಪೂರ್ತಿ ಹಚ್ಚಿಕೊಳ್ಳಿ. ಅದು ಪೂರ್ತಿ ಒಣಗಿದ ನಂತರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಚರ್ಮ ಸುಂದರವಾಗಿ ಕಾಣುತ್ತದೆ.

ಜೇನು ಹಾಗೂ ಅನಾನಸ್ (Pineapple with honey)

ಬಹಳ ರುಚಿಯಾಗಿರುವ ಅನಾನಸ್ ಹಣ್ಣು ಹಲವರ ಅಚ್ಚುಮೆಚ್ಚಿನ ಹಣ್ಣು ಸಹ ಹೌದು. ಆದರೆ ಈ ಹಣ್ಣನು ಬಳಸಿ ನಿಮ್ಮ ಚರ್ಮವನ್ನು ಕಾಂತಿಯುಕ್ತ ಹಾಗೂ ಸುಂದರವಾಗಿ ಹೇಗೆ ಮಾಡಿಕೊಳ್ಳಬಹುದೆಂದು ಇಂದು ತಿಳಿದುಕೊಳ್ಳೋಣ. ಈ ಹಣ್ಣಿನಲ್ಲಿ ಹೆರಳವಾಾಗೀ ಇರುವ ಸಿ ಜೀವಸತ್ವ ಚರ್ಮ ಮುದಿಯಾಗುವುದನ್ನು ತಡೆಗಟ್ಟುತ್ತದೆ. ಈ ಹಣ್ಣಿನ ತಿರುಳನ್ನು ರುಬ್ಬಿಕೊಂಡು ಅದಕ್ಕೆ ಒಂದು ಚಮಚೆ ಜೇನು ತುಪ್ಪವನ್ನು ಬೆರೆಸಿ ಫೇಸ್ ಪ್ಯಾಕ್ ನಾ ರೀತಿ ಮುಖಮುಚ್ಚುವ ರೀತಿಯಲ್ಲಿ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ತೊಳೆದುಕೊಂಡು ಆಗುವ ಬದಲಾವಣೆಯನ್ನು ನೀವೇ ಗಮನಿಸಿ.

loading...