Blouse designs – Latest blouse designs for party wear, wedding saree designer blouses in Kannada language – ರವಿಕೆ ವಿನ್ಯಾಸಗಳು – ಪಾರ್ಟಿ ಹಾಗೂ ಇತರೆ ಸಮಾರಂಭಗಳಿಗೆ ನವೀನ ರವಿಕೆ ವಿನ್ಯಾಸಗಳು, ಮದುವೆ ಸೀರೆಯ ಜೊತೆಗೆ ಹೊಂದುವ ರವಿಕೆಗಳು

ಮದುವೆ ಹಾಗೂ ಸಮಾರಂಭಗಳೆಂದರೆ ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು-ಬಳಗಕ್ಕೆ ನಿಮ್ಮ ಹೊಸ ಸೀರೆ ಹಾಗೂ ಡಿಜೈನರ್ ರವಿಕೆಗಳನ್ನು ತೋರ್ಪಡಿಸುವ ಒಂದು ಸುವರ್ಣ ಅವಕಾಶ. ವಿನ್ಯಾಸಗಳ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರ ಆಯ್ಕೆಯೂ ಬೇರೆಯಾಗಿರುತ್ತದೆ. ಆದ್ದರಿಂದ ಈ ಕೆಳಗಿನ ವಿವಿಧ ವಿನ್ಯಾಸಗಳಿಂದ ನಿಮ್ಮಗೆ ಇಷ್ಟವಾದ, ನಿಮ್ಮ ಮನಸ್ಸಿಗೆ ಒಪ್ಪುವ ಸೊಗಸಾದ ರವಿಕೆ ಹಾಗೂ ಸೀರೆಯ ವಿನ್ಯಾಸವನ್ನು ಆಯ್ದುಕೊಳ್ಳಿ ಹಾಗೂ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.
ಸಾಮಾನ್ಯವಾಗಿ ಸಮಾರಂಭಗಳಿಗೆ ಬಹಳಷ್ಟು ಜನರು ಬರುವುದರಿಂದ ವಸ್ತ್ರವಿನ್ಯಾಸದಲ್ಲಿ ಒಬ್ಬೊಬ್ಬರ ರುಚಿಯೂ ಬೇರೆಯಾಗಿರುತ್ತದೆ. ಆದ್ದರಿಂದ ಈ ಕೆಳಗಿನ ನವೀನ ಸಮಾರಂಭಗಳಿಗಾಗಿಯೇ ವಿನ್ಯಾಸ ಮಾಡಿದ ರವಿಕೆಗಳನ್ನು ಆಯ್ದುಕೊಳ್ಳಿ. ರೇಷ್ಮೆ ಸೀರೆಯಾಗಿರಲ್ಲಿ ಅಥವಾ ಶಿಫಾನ್ ಸೀರೆಯಾಗಿರಲ್ಲಿ ಅದರೊಂದಿಗೆ ಹೊಂದುವ ರವಿಕೆಯನ್ನು ಆಯ್ದುಕೊಳ್ಳುವುದು ಬಹಳ ಮುಖ್ಯ. ಹಲವು ವಿರುದ್ಧ ಬಣ್ಣಗಳನ್ನು ಬೆರೆಸಿರುವ ಅಥವಾ ಒಂದೇ ಬಣ್ಣದ ಹೋಲುವ ರವಿಕೆಯಾಗಿರಲ್ಲಿ ಅದು ನಿಮ್ಮ ಸೀರೆಗೆ ಹೊಂದುವಂತಿರಲಿ.

ಪಾರ್ಟೀ ರವಿಕೆಗಳ ಕುತ್ತಿಗೆ ವಿನ್ಯಾಸಗಳು (Neck blouse design for party wear)

Neck blouse design for party wear

ಮಂದ ಕಿತ್ತಳೆ ಬಣ್ಣದ ಶಿಫಾನ್ ರವಿಕೆಗೆ ಕೆಳಗಿನ ಅಂಚು ಕಪ್ಪು ಬಣ್ಣದಲ್ಲಿ ಇಡಿಸುವುದರಿಂದ ಬಹಳ ಆಕರ್ಷಕವಾಗಿ ಕಾಣುತ್ತದೆ. ಇದರ ಜೊತೆಗೆ ಕಿತ್ತಳೆ ಬಣ್ಣದ ಹೋಲುವ ಸೀರೆಯನ್ನು ಧರಿಸಬಹುದು ಅಥವಾ ಕಪ್ಪು ಸೀರೆಯನ್ನು ಧರಿಸಬಹುದು. ಹೊಳೆಯುವ ಪಾರ್ಟಿ ಜನರ ನಡುವೆ ನೀವು ಬಹಳ ಸರಳವಾಗಿ ಕಾಣಿಸಬೇಕೆಂದು ನೀವು ಆಸೆಪಟ್ಟರೆ ಕಪ್ಪು ಬಣ್ಣದ “ಬ್ರಾಸೋ” ರವಿಕೆಯನ್ನು ಆಯ್ದುಕೊಳ್ಳಬಹುದು. ಯಾವುದೇ ತಿಳಿ ಬಣ್ಣದ, ಹಳದಿ ಅಂಚಿರುವ ಸೀರೆಯನ್ನು ಧರಿಸಬಹುದು.

ಪಾರ್ಟೀ ರವಿಕೆಗಳ ಕುತ್ತಿಗೆ ವಿನ್ಯಾಸಗಳು (Latest blouse design for party wear)

Latest blouse design for party wear

ಪ್ರತ್ಯೇಅಕವಾದ ವಿನ್ಯಾಸ ಹೊಂದಿರುವ ಪಾರದರ್ಶಕ ಹಾಗೂ ಬಿಳಿ ಕಸೂತಿ ಕೆಲಸವಿರುವ ಈ ರವಿಕೆ ಎಲ್ಲಾ ವಯೋಮಾನದ ಹೆಂಗಸರಿಗೂ ಒಪ್ಪುತ್ತದೆ. ಪಾರ್ಟೀ ಎಂದರೆ ಬಹಳಷ್ಟು ಮಂದಿಗೆ ಜಗಮಗಿಸುವ ಹಾಗೂ ತಮ್ಮ ಸೌಂದರ್ಯವನ್ನು ತೋರ್ಪಡಿಸುವ ಬಟ್ಟೆಗಳನ್ನು ತೊಡಲು ಒಂದು ಅವಕಾಶ. ನಿಮ್ಮ ಅನಿಸಿಕೆಯು ಇದೆ ಆದರೆ ಈ ರವಿಕೆ ವಿನ್ಯಾಸ ನಿಮ್ಮಗೆ ಚೆಂದವಾಗಿ ಒಪ್ಪುತ್ತದೆ. ಈ ರೀತಿಯ ರವಿಕೆಗೆ ಚಿನ್ನದ ಬಣ್ಣದ ಕಸೂತಿ ಕೆಲಸ ಒಡಮಾಡಿದರೆ ಇದು ಎಲ್ಲರ ಕಣ್ಣು ಕೋರೈಸುವ ಉಡುಗೆಯಾಗುತ್ತದೆ.

ದೋಣಿ ಕತ್ತಿನ ರವಿಕೆ ವಿನ್ಯಾಸ (Boat neck blouse design for party wear)

Boat neck blouse design for party wear
ಕಿತ್ತಳೆ ಬಣ್ಣದ ಸಣ್ಣ ಹೂವಿನ ವಿನ್ಯಾಸವಿರುವ ಈ ಪಾರದರ್ಶಕ ರವಿಕೆ ಹಿಂದಿನ ಬೆನ್ನು ತೋರಿಸುವ ವಿನ್ಯಾಸದಿಂದ ಮನಸೆಳೆಯುತ್ತದೆ. ಪಾರ್ಟಿಗಳಿಗಾಗಿ ಸಣ್ಣ ತ್ರಿಕೋಣಾಕಾರದ ತಿಳಿ ಗುಲಾಬಿ ಬಣ್ಣದ ಅಥವಾ ತೆಳು ಹಳದಿ ಬಣ್ಣದ ವಿನ್ಯಸಗಳಿರುವ ರವಿಕೆಗೆ ಕಂಕುಳುವರೆಗೆ ಮಾತ್ರ ಮುಚ್ಚುವ ಸಣ್ಣ ತೊಳುಗಳನ್ನು ಇಡಿಸಬಹುದು. ರವಿಕೆಯ ತೋಳ ವಿನ್ಯಾಸ ಅದರ ದೇಹ ವಿನ್ಯಾಸಕ್ಕಿಂತ ವಿಭಿನ್ನವಾಗಿರುತ್ತದೆ.

ಪಾರ್ಟಿಗಳಿಗಾಗಿ ಕುತ್ತಿಗೆ ಪಟ್ಟಿಯಿರುವ ವಿನೂತನ ರವಿಕೆ ವಿನ್ಯಾಸ (Collar neck latest blouse design for party wear)

Collar neck latest blouse design for party wear

ಮಾಮೂಲಿ ವಿನ್ಯಾಸಗಳಿಂದ ಬೇಸೆತ್ತಿದ್ದರೆ ಈ ಕಪ್ಪು ಬಣ್ಣದ ತೋಳು ರಹಿತ ಕಪ್ಪು ರವಿಕೆಯನ್ನು ಧರಿಸಬಹುದು. ಕುತ್ತಿಗೆ ಪಟ್ಟಿ ಇದ್ದು ಆಳವಾಗಿ ಕತ್ತರಿಸಿದ ಈ ತೋಳು ರಹಿತ ರವಿಕೆಯ ಮೇಲೆ ಬೆಳ್ಳಿಯ ಬಣ್ಣದ ತಣುಕುಗಳು ರವಿಕೆಗೆ ಹೊಸ ಕಳೆಯನ್ನು ತಂದು, ಅದ್ವಿತೀಯ ವಿನ್ಯಾಸವನ್ನಾಗಿ ಮಾಡುತ್ತದೆ.

ವಿನೂತನ ವಿನ್ಯಾಸದ ರವಿಕೆ (Latest blouse design)

Latest blouse design

ನಿಮ್ಮ ಸಮಾರಂಭಕ್ಕೆ ಒಪ್ಪುವಂತಹ ಸಾಂಪ್ರದಾಯಿಕ ರವಿಕೆ ವಿನ್ಯಾಸವಿದು. ಹಸಿರು ಬಣ್ಣದ ಸಾಂಪ್ರದಾಯಿಕ ರವಿಕೆಗೆ ಗುಲಾಬಿ ಬಣ್ಣದ ಅಂಚು ಹಾಗೂ ಜರಿ ಕೆಲಸ ಮಾಡಿಸುವುದರಿಂದ ಹಾಗು ಉದ್ದವಾದ, ಮೊಣಕೈ ದಾಟುವ ತೊಳುಗಳನ್ನು ಇಡಿಸುವುದರಿಂದ ಬಹಳ ಆಕರ್ಷಕವಾಗಿ ಕಾಣುತ್ತದೆ.

ಆಳವಾದ ಕುತ್ತಿಗೆ ವಿನ್ಯಾಸದ ಪಾರ್ಟಿ ರವಿಕೆ (Low neck modern blouse design for party wear)

Low neck modern blouse design for party wear

ಕೆಂಪು ಅಥವಾ ಚಿನ್ನದ ಅಂಚಿರುವ ಕಪ್ಪು ಸೀರೆಯನ್ನು ಉಟ್ಟಿಕೊಂಡ ಮಹಿಳೆ ಕೆಂಪು ಅಥವಾ ಚಿನ್ನದ ಬಣ್ಣದ ಹಾಗೂ ಸೀರೆಗೆ ಹೊಂದುವ ರವಿಕೆಯನ್ನು ಧರಿಸಿದರೆ ಬಹಳ ಸುಂದರವಾಗಿ ಕಾಣಬಹುದು.

ಪಾರ್ಟಿಗಳಿಗಾಗಿ ನವೀನ ರವಿಕೆ ವಿನ್ಯಾಸ (Trendy blouse design for party wear)

Trendy blouse design for party wear

ಹಿಂದಿನ ದೋಣಿ ವಿನ್ಯಾಸ ಹಾಗೂ ಬೇರೆಯದೇ ಬಣ್ಣದ ಬಟ್ಟೆಯ ಸಂಯೋಜನೆಯಿಂದ ಈ ರವಿಕೆ ಬೇರೆಲ್ಲ ರವಿಕೆಗಳಿಗಿಂತ ವಿಶಿಷ್ಟವಾಗಿ ಕಾಣುತ್ತದೆ. ಇದನ್ನು ಗುಲಾಬಿ ಬಣ್ಣದ ಸೀರೆ ಅಥವಾ ದಿಜೈನರ್ ಸೀರೆಯೊಂದಿಗೆ ಧರಿಸಿದರೆ ಬಹಳ ಆಕರ್ಷಕವಾಗಿ ಕಾಣುತ್ತದೆ.

ಹೆಚ್ಚು ಕಸೂತಿ ಇರುವ ಡಿಜೈನರ್ ಪಾರ್ಟಿ ರವಿಕೆಯ ವಿನ್ಯಾಸ (Heavy work stylish designer blouse for party wear)

Heavy work stylish designer blouse for party wear

ಉದ್ದದ ತೋಳುಗಳು ಹಾಗೂ ವಿಸ್ತಾರವಾದ ಚಿನ್ನದ ಕಸೂತಿ ಇರುವ ಈ ರವಿಕೆ ಬಹಳ ಅಧ್ಬುತವಾಗಿ ಕಾಣುತ್ತದೆ. ಮೇಲಿನ ರೂಪದರ್ಶಿ ಬಹು ಸುಂದರವಾದ ಚಿನ್ನದ ಕಸೂತಿ ಇರುವ ಕಪ್ಪು ರವಿಕೆಯೊಂದಿಗೆ ಧರಿಸಿರುವ ಲೆಹೇಂಗ ಬಹಳ ಅಚ್ಚುಕಟ್ಟಾಗಿ ಒಪ್ಪುತ್ತದೆ. ನೀವು ಈ ರವಿಕೆಯನ್ನು ಬೇರೆ ಸೀರೆಗಳ ಜೊತೆಯಲ್ಲಿ ಸಹ ಬಳಸಬಹುದು.

ಮಕಮಲ್ಲು ವಿನ್ಯಾಸದ ನವೀನ ಪಾರ್ಟಿ ರವಿಕೆ (Velvet designer blouse modern design for party wear)

Velvet designer blouse modern design for party wear

ಈಪಾರ್ಟಿ ವಿನ್ಯಾಸದ ರವಿಕೆ ಮುದ್ದಾಗಿರುವುದಲ್ಲದೆ, ಆಕರ್ಷಣಿಯವಾಗಿ ಸಹ ಇದೆ. ಮುಂದಿನ ಭಾಗಕ್ಕೆ ಹೆಚ್ಚು ಮೆರೆಯುವ ವಿನ್ಯಾಸ ಹಾಗೂ ಮಿಕ್ಕ ಭಾಗಕ್ಕೆ ಮಕಮಲ್ಲಿನ ಬಟ್ಟೆ ಇರುತ್ತದೆ ಹಾಗೂ ಹಿಂದುಗಡೆ ಎರಡು ಗಂಟುಗಳು ಬಂದರೆ ಸೆಂಡವಾಗಿ ಕಾಣುತ್ತದೆ.

ನೂತನ ಕಸೂತಿಯ ಪಾರ್ಟಿ ರವಿಕೆ (Work blouse modern designer blouse for party wear)

Work blouse modern designer blouse for party wear
ಈ ರೂಪದರ್ಶಿಯು ತನ್ನ ನೆರಿಗೆ ಇರುವ ಸ್ಕರ್ಟ್ ಶೈಲಿಯ ಸೀರೆಯ ಮೇಲೆ ಧರಿಸಿರುವ ರವಿಕೆಯನ್ನು ನೋಡಿ. ಪೀಚ್ ಬಣ್ಣದ ವಿನ್ಯಾಸಕಾರಿ ರವಿಕೆಗೆ ಸೀರೆಗೆ ಹೊಂದುವ ಅಂಚು ಇರುವುದರಿಂದ ಅದು ಪ್ರಮುಖ ಆಕರ್ಷಣೆಯಾಗಿ ಕಾಣುತ್ತದೆ. ಇದನ್ನು ಧರಿಸುವುದರಿಂದ ನೀವು ನಿಮ್ಮ ಸ್ನೇಹಿತೆ ಹಾಗೂ ಬಂಧುಗಳನ್ನು ಆಶ್ಚರ್ಯಗೊಳಿಸಬಹುದು.

ಪಾರ್ಟಿಗಳಿಗಾಗಿ ತೋಳಿನ ನೂತನ ವಿನ್ಯಾಸದ ರವಿಕೆ (Sleeve latest blouse design for party wear)

Sleeve latest blouse design for party wear

ಕಪ್ಪು ಬಿಳುಪು ಬಣ್ಣದ ಮೇಲೆ ಟೆಂಪಲ್ ವಿನ್ಯಾಸ ಹೊಂದಿರುವ ಈ ರವಿಕೆ ವಿನೂತನವಾಗಿ ಕಾಣಿಸುತ್ತದೆ. ಈ ರವಿಕೆಗೆ ಎರಡು ಪದರಗಳಿವೆ. ಕೆಳಗಿನ ಪದರ ಪೂರ್ತಿ ಕೆಂಪು ಬಣ್ಣದ್ದಾಗಿದ್ದು ಅದರ ಮೇಲಿರುವ ಪದರ ಮಕಮಲ್ಲು ಬಟ್ಟೆಯಿಂದ ಮಾಡಿದ್ದು ಕತ್ತಿನ ಹಾಗೂ ತೋಳುಗಳ ಸುತ್ತ ಅಂದವಾದ ಅಂಚನ್ನು ಹೊಂದಿದೆ.

ಜಾಳಿಗೆ ಕೈಗಳ ನೂತನ ರವಿಕೆ ವಿನ್ಯಾಸ (Net hands latest blouse design)

Net hands latest blouse design

ಈ ವಿನೂತನ ವಿನ್ಯಾಸದ ರವಿಕೆ ಶಿಫಾನ್ ಸೀರೆಯೊಂದಿಗೆ ಸಂಪ್ರದಾಯವನ್ನು ಚೆಂದವಾಗಿ ವಿಲೀನಗೊಳಿಸುತ್ತದೆ. ಮೇಲಿನ ರೂಪದರ್ಶಿಯು ತಿಳಿ ಕಿತ್ತಳೆ ಬಣ್ಣದ ಸೀರೆಗೆ ಹೊಂದುವ ಆಕರ್ಷಣೀಯ ಜಾಳಿಗೆ ವಿನ್ಯಾಸದ, ಗಿಡ್ಡ ತೊಳಿನ ಹಾಗೂ ಚಿಕ್ಕ ಅಂಚಿನ ರವಿಕೆಯನ್ನು ಧರಿಸಿರುತ್ತಾಳೆ. ಯಾವುದೇ ಸಾಂಪ್ರದಾಯಿಕ ಸಮಾರಂಭಗಳಿಗೆ ಹಾಗೂ ಮದುವೆಗಳಿಗೆ ಈ ರೀತಿಯ ರವಿಕೆ ಸರಿಯಾಗಿ ಹೊಂದುತ್ತದೆ.

ಕಸೂತಿ ದಾರದ ವಿನ್ಯಾಸದ ರವಿಕೆ (Lace blouse design for party wear)

Lace blouse design for party wear

ಸೊಗಸಾದ ಹಾಗೂ ಕೋಮಲವಾದ ವಿನ್ಯಾಸಗಳು ಪಾರ್ಟಿಗಳಲ್ಲಿ ಅತಿಥಿಗಳನ್ನು ಆಶ್ಚರ್ಯಗೊಳಿಸುತ್ತದೆ. ಗುಲಾಬಿ ಬಣ್ಣದ ಈ ರವಿಕೆಗೆ ಹಿಂದೆ ಜಾಳು ಜಾಳಿನ ವಿನ್ಯಾಸ ಹಾಗೂ ಮಿಕ್ಕೆಲ್ಲಾ ಕಡೆ ಸಾಮಾನ್ಯ ಬಟ್ಟೆ ಇರುತ್ತದ್ದೆ. ರವಿಕೆ ತೋಳು ಸಹ ಬಹಳ ನವೀನವಾಗಿದೆ.

ನವೀನ ವಿನ್ಯಾಸದ ಪಾರ್ಟಿ ರವಿಕೆಗಳು (Latest blouse design for party wear)Latest blouse design for party wear

ಈ ಉತ್ಕೃಷ್ಟವಾದ ಹಾಗೂ ನೂತನವಾದ ರವಿಕೆ ವಿನ್ಯಾಸದಲ್ಲಿ ಗುಲಾಬಿ ಬಣ್ಣದ ಮೇಲೆ ಚಿನ್ನದ ಅಧ್ಬುತವಾದ ಕಸೂತಿ ಬಹಳ ಚೆಂದವಾಗಿ ಕಾಣಿಸುತ್ತದೆ. ಸೀರೆಯ ವಿನ್ಯಾಸವನ್ನ್ನು ಹೋಲುವಂತಹ ವಿನ್ಯಾಸಗಳು ಈ ರವಿಕೆಯ ತೊಳುಗಳಿಗೆ ಇರುವುದರಿಂದ ಬಹಳ ಚೊಕ್ಕವಾಗಿ ಕಾಣುತ್ತದೆ.

ಆಳವಾದ ಕುತ್ತಿಗೆ ವಿನ್ಯಾಸದ ಪಾರ್ಟಿ ರವಿಕೆಗಳು (Deep neck blouse design for party wear)

Deep neck blouse design for party wear
ಇದೊಂದು ಅತ್ಯಾಕರ್ಷಕವಾದ ರವಿಕೆ ವಿನ್ಯಾಸ. ಇದರಲ್ಲಿ ಸಾಕಷ್ಟು ಬೆನ್ನು ಹಾಗೂ ಮುಂಭಾಗಗಳು ಆಕರ್ಷಕವಾಗಿ ಕಾಣಿಸುತ್ತವೆ. ಅಷ್ಟೇ ಅಲ್ಲದೆ ಗಿಡ್ಡ ತೊಳುಗಳು ಇರುವುದರಿಂದ ಮತ್ತಷ್ಟು ಅಂದವನ್ನು ಹೆಚ್ಚಿಸುತ್ತವೆ. ಇದು ಹಸಿರು ಬಣ್ಣದ ರವಿಕೆಯಾಗಿರುವುದರಿಂದ ಇದನ್ನು ಹಸಿರು ಅಥವಾ ನೀಲಿ ಬಣ್ಣದ ಸೀರೆಗಳ ಜೊತೆ ಧರಿಸಬಹುದು. ನಿಮ್ಮ ಪತಿಯ ಆಸಕ್ತಿಯನ್ನು ಕೆರಳಿಸಬೇಕಾಗಿದ್ದಾರೆ ಈ ರವಿಕೆಯನ್ನು ಧರಿಸಿರಿ.

ಅರ್ಧ ತೊಳಿನ ಪಾರ್ಟಿ ರವಿಕೆ (Half sleeves blouse design for party wear)

Half sleeves blouse design for party wear

ಈ ರವಿಕೆಯನ್ನು ಸೀರೆ ಅಥವಾ ಲೆಹೇಂಗದೊಂದಿಗೆ ಧರಿಸುವ ಹೆಣ್ಣಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುವುದು ಸಾಧ್ಯವೆಯಿಲ್ಲ. ಇದು ಬಹಳ ಸರಳ ಆದರೆ ನೂತನ ವಿನ್ಯಾಸದೊಂದಿಗೆ ಅಂಧವಾದ ಬಣ್ಣ ಸಹ ಸೇರುವುದರಿಂದ ಹೊಸದಾಗಿ ಮದುವೆಯಾದ ವಧುವಿಗೆ ಬಹಳ ಚೆಂದವಾಗಿ ಕಾಣುತ್ತದೆ. ಕನ್ನಡಿ-ಕಸೂತಿ ಇರುವ ಸೀರೆಯೊಂದಿಗೆ ಈ ಹೂವಿನ ಕಸೂತಿ ಇರುವ ರವಿಕೆ ಚೆಂದವಾಗಿ ಹೋಗುತ್ತದೆ.

ಮಣಿಗಳ ವಿನ್ಯಾಸದ ಪಾರ್ಟಿ ರವಿಕೆ (Beads blouse design for party wear)

Beads blouse design for party wear
ನೇರಳೆ ಹಾಗೂ ಚಿನ್ನದ ಬಣ್ಣದ ಈ ನವೀನ ರವಿಕೆ ತನ್ನ ಕರ್ಣ ಪಟ್ಟಿಗಳೊಂದಿಗೆ ಮಣಿಗಳನ್ನು ಹೊಂದಿರುತ್ತದೆ. ಅಷ್ಟೆಅಲ್ಲದೆ ಕರ್ಣ ಪಟ್ಟಿಗಳ ಅಂಚಿನೊಂದಿಗೆ ಕೊನೆಯಾಗುವ ಪಾರದರ್ಶಕವಾದ ಉದ್ದದ ತೊಳುಗಳು ಹಾಗೂ ಆ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ರವಿಕೆಯ ಹಿಂದೆಗೆ ದಾರಗಳಿದ್ದು ಅದರ ಕೊನೆಗೆ ಮಣಿಗಳನ್ನು ಪೊಣಿಸಲಾಗಿದೆ.

ಹೂ ಕಸೂತಿಯ ಪಾರ್ಟಿ ರವಿಕೆ (Flower work blouse design for party wear)

Flower work blouse design for party wear

ಕಪ್ಪು ಹಾಗೂ ಕಿತ್ತಳೆ ಬಣ್ಣದ ಸಮಾಗಮದ ಈ ಸೊಗಸಾದ ರವಿಕೆ ಪಾರ್ಟಿಯಲ್ಲಿ ನಿಮ್ಮನು ಮುಖ್ಯ ಆಕರ್ಷಣೆಯನ್ನಾಗಿ ಮಾಡುತ್ತದೆ. “”V” ಆಕಾರದ ಕತ್ತಿನ ವಿನ್ಯಾಸ ಹಾಗೂ ತೋಳಿಳ್ಳದ ಈ ರವಿಕೆಗೆ ಇಡಿಯಾಗಿ ಹೊಳೆಯುವ ಬೆಳ್ಳಿ ತಣುಕುಗಳ ಕಸೂತಿ ಇರುತ್ತದೆ ಹಾಗೂ ಭುಜದ ಭಾಗದಲ್ಲಿ ಇರುವ ಚೆಂದಾವಾದ ಹೂವಿನ ವಿನ್ಯಾಸ ಸೀರೆಯ ಸೆರಗಿನೊಂದಿಗೆ ಹೊಂದಿಕೊಂಡು ಬಹಳ ಅಂದವಾಗಿ ಕಾಣುತ್ತದೆ.

ಪಾರ್ಟಿ ರವಿಕೆಗೆ ಒಂದು ಸರಳ ವಿನ್ಯಾಸ (Simple blouse design for party wear)

Simple blouse design for party wear

ಭವ್ಯವಾದ ಈ ಕಪ್ಪು ಹಾಗೂ ಬಿಳಿ ಮಿಶ್ರಣದ ನವೀನ ರವಿಕೆ ಬಿಳಿ ಬಣ್ಣದ ರವಿಕೆಯ ಮೇಲಿನ ಕಪ್ಪು ಕಸೂತಿಯಿಂದ ಸುಂದರವಾಗಿ ಕಂಗೊಳಿಸುತ್ತದೆ. ಈ ರವಿಕೆಯನ್ನು ಕಪ್ಪು ಅಥವಾ ಇನ್ಯಾವುದಾದರೂ ತಿಳಿ ಬಣ್ಣದ ಸೀರೆಗಳೊಂದಿಂಗೆ ಹೊಂದಿಸಿ ಧರಿಸಬಹುದು.

ವಿನ್ಯಾಸಕಾರಿ ಪಾರ್ಟಿ ರವಿಕೆ (Designer blouse for party wear)

Designer blouse for party wear

ಯಾವುದೇ ಕೃತಕ ತೋರ್ಪಡಿಕೆ ಇಲ್ಲದ ಈ ರವಿಕೆ ಯಾವುದೇ ಪಾರ್ಟಿಯಲ್ಲಿ ನಿಮ್ಮನ್ನು ಮತ್ತಷ್ಟು ಅಂದವಾಗಿ ತೋರ್ಪಡಿಸುತ್ತದೆ. ಈ ಮುದ್ದಾದ ಕೆಂಪು ಬಣ್ಣದ ರವಿಕೆಯನ್ನು ಇದೇ ಬಣ್ಣದ ಸೀರೆಯೊಂದಿಗೆ ಅಥವಾ ಪಾರ್ಟಿಯ ಮೂಡ್ಗೆ ಹೊಂದುವ ಬಣ್ಣದ ಸೀರೆಯೊಂದಿಗೆ ಧರಿಸಬಹುದು. ಈ ರವಿಕೆಗೆ ಹೊಂದುವ ಸೀರೆಯನ್ನು ಧರಿಸಿದ ಹೆಣ್ಣು ಬಹಳ ಆಕರ್ಷಕವಾಗಿ ಕಾಣುತ್ತಾಳೆ.

ಕಸೂತಿ ಕೆಲಸದ ಪಾರ್ಟಿ ರವಿಕೆ (Work blouse design for party)

Work blouse design for party

ಕತ್ತು ಹಾಗೂ ತೊಳಿನ ಬಳಿ ನೀಲಿ ಮಖಮಲ್ಲಿನ ಅಂಚಿರುವ ಬಿಳಿ ಶಿಫಾನ್ ರವಿಕೆ ಧರಿಸಿರುವ ಹೆಣ್ಣು ಬಹಳ ಆಕರ್ಷಕವಾಗಿ ಕಾಣುತ್ತಾಳೆ. ಮೇಲಿನ ರೂಪದರ್ಶಿ ತನ್ನ ಕೂದಲನ್ನು ಬಾಲ ಭುಜದ ಮೇಲಿಂದ ಇಳಿಬಿಟ್ಟಿದ್ದಾಳೇ ಆದರೆ ನೀವು ಬೇಕಾದರೆ ಕೂದಲನ್ನು ಹಿಂದಕ್ಕೆ ಬಿಟ್ಟು ರವಿಕೆಯ ಅಸಲು ಅಂದವನ್ನು ತೋರ್ಪಡಿಸಬಹುದು.

ಪಾರ್ಟಿಗಳಿಗಾಗಿ ಸರಳ ರವಿಕೆ ವಿನ್ಯಾಸ (Simple blouse design for party)

Simple blouse design for party

ಪಾರ್ಟಿಗಳಿಗಾಗಿ ರವಿಕೆಗಳನ್ನು ಆರಿಸುವಾಗ ಕಪ್ಪು ಬಣ್ಣ ಬಹಳ ಆಕರ್ಷಕವಾಗಿ ಕಾಣುತ್ತದೆ. ಮೇಲಿನ ರೂಪದರ್ಶಿಯು ತಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ಅಂಚು ಬಂದಿರುವ ಕಪ್ಪು ಸೀರೆಯನ್ನು ಧರಿಸಿದ್ದಾಳೆ. ರವಿಕೆ ಕಪ್ಪು ಬಣ್ಣದ್ದಾಗಿದ್ದು ಮೇಲಿರುವ ಉಕ್ಕಿನ ಬಣ್ಣದ ವಿನ್ಯಾಸ ಆಕರ್ಷಕವಾಗಿ ಕಾಣುತ್ತದೆ. ಇದಕ್ಕೆ ಗುಂಡು ಕತ್ತು ಹಾಗೂ ಗಿಡ್ಡ ತೋಳುಗಳಿರುವುದರಿಂದ ಈ ರವಿಕೆ ಎಲ್ಲಾ ಕಾಲಗಳಲ್ಲಿಯೂ ಬಳಸಬಹುದಾಗಿದೆ.

ಪಾರ್ಟಿಗಳಿಗಾಗಿ ರವಿಕೆ ವಿನ್ಯಾಸ (Blouse model for party)

Blouse model for party

ಮೇಲಿನ ರೂಪದರ್ಶಿಯು ವಿರುದ್ದ ವಿನ್ಯಾಸಗಳಿರುವ ರವಿಕೆಯನ್ನು ಶುದ್ದ ಬಿಳಿ ಬಣ್ಣದ ಸೀರೆಯೊಂದಿಗೆ ಧರಿಸಿರುತ್ತಾಳೆ. ಈ ಕಪ್ಪು ರವಿಕೆ ಸಾಮಾನ್ಯ ಕಪ್ಪು ಬಣ್ಣದ್ದಾಗಿರದೆ ಎದೆಯ ಮೇಲೆ ಗಂಟಿನ ವಿನ್ಯಾಸವಿರುತ್ತದೆ. ತೊಳುಗಳಿಲ್ಲದ ಹಾಗೂ ಆಳವಾದ ಕತ್ತಿನ ವಿನ್ಯಾಸ ಯಾವುದೇ ರವಿಕೆಗೆ ಹೊಂದುತ್ತದೆ.

ನೂತನ ದೊಣಿ ವಿನ್ಯಾಸದ ಪಾರ್ಟಿ ರವಿಕೆ (Latest boat neck blouse design for party)

Latest boat neck blouse design for party

ಕೆಲವು ಕಾಲದ ಹಿಂದೆ ಪರದೆ ಹ್ಜಿಂದೆ ಸರಿದಿದ್ದ ತುಂಬು ತೊಳಿನ ವಿನ್ಯಸಗಳು ಈಗ ಮತ್ತೆ ಚಾಲ್ತಿಯಲ್ಲಿವೆ ಹಾಗೂ ಹೆಂಗಳೆಯರನ್ನು ಸೆಳೆಯುತ್ತಿದೆ. ಮೇಲಿನ ರೂಪದರ್ಶಿಯು ಧರಿಸಿರುವ ರವಿಕೆಯನ್ನು ಧರಿಸಿದರೆ ಯಾವುದೇ ಪಾರ್ಟಿಯಲ್ಲಿ ನೀವು ಪ್ರಮುಖ ಆಕರ್ಷಣೆಯಾಗಿ ಕಾಣಬಹುದು.

ಹಿಂದಿನ ಕಿಟಕಿ ವಿನ್ಯಾಸದ ಪಾರ್ಟಿ ರವಿಕೆ (Back open blouse design for party)

Back open blouse design for party

ಇದೊಂದು ವಿಶಿಷ್ಟವಾದ ವಿನ್ಯಾಸದ ಪಾರ್ಟಿ ರವಿಕೆ. ಎತ್ತರದ ಕುತ್ತಿಗೆ ಪಟ್ಟಿ, ತೊಳ್ಳೀಲ್ಲದ ವಿನ್ಯಾಸದೊಂದಿಗೆ ಮಣಿಗಳ ಅಲಂಕಾರವೂ ಸೇರಿ ಅಂದವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ನೀರಿನ ಹನಿಯಂತೆ ಕಾಣುವ ಹಿಂದಿನ ಕಿಟಕಿಯ ವಿನ್ಯಾಸ ನೋಡುವವರನ್ನು ಬೆರಗಾಗಿಸಿ ನಿಮ್ಮಗಾಗೆ ಒಂದು ವಿಶಿಷ್ಟವಾದ ಶೈಲಿಯನ್ನು ತರುತ್ತದೆ.

ತೋಳಿರುವ ಪಾರ್ಟಿ ರವಿಕೆ ವಿನ್ಯಾಸ (Sleeve blouse design for party)

Sleeve blouse design for party

ಮೇಲಿನ ರೂಪದರ್ಶಿಯು ಧರಿಸಿರುವ ರವಿಕೆ ಮಾರುಕಟ್ಟೆಯಲ್ಲಿ ಸಿಗುವ ಇತರೆ ರವಿಕೆಗಳಿನ್ದ ಬೇರೆಯೇ ಆಗಿದೆ. ಏಕೆಂದರೆ ಇದಕ್ಕೆ ಇರುವ ಪೆಂಟಗನ್(ಐದು ಭುಜಗಳಿರುವ) ವಿನ್ಯಾಸ, ಅದಕ್ಕಿರುವ ಕೆಂಪು ಬಣ್ಣದ ಅಂಚು ಹಾಗೂ ಮುಕ್ಕಾಲು ತೊಳಿನ ವಿನ್ಯಾಸ ಬಹಳ ಚೆಂದವಾಗಿ ಹೊಂದಿಕೊಳ್ಳುತ್ತದೆ. ಯಾವುದೇ ಪಾರ್ಟಿಗಳಿಗೆ ಈ ವಿನ್ಯಾಸ ಬಹಳ ಚೆಂದವಾಗಿ ಒಪ್ಪುತ್ತದೆ.

ಪಾರ್ಟಿಗಳಿಗಾಗಿ ನೂತನ ವಿನ್ಯಾಸದ ರವಿಕೆ (Modern blouse design for party)

Modern blouse design for party

ಹಳದಿ ಬಣ್ಣದ ಸೀರೆಯಲ್ಲಿರುವ ಈ ರೂಪದರ್ಶಿ ತನ್ನ ಭುಜದ ಮೇಲೆ ಪಟ್ಟಿಗಳಿರುವ ಆಕರ್ಷಕವಾದ ರವಿಕೆಯಲ್ಲಿ ಎಷ್ಟು ಚೆಂದವಾಗಿ ಕಾಣುತ್ತಾಳೊ ನೋಡಿ. ನಿಮ್ಮ ಭಾವಿ ಪತಿಗೆ ನೀವು ಆಕರ್ಷಕವಾಗಿ ಕಾಣಬೇಕಾದರೇ ಈ ರವಿಕೆ ನಿಮ್ಮ ಪ್ರತ್ಯೇಕವಾದ ಸಹಾಯಕ್ಕೆ ಬರುತ್ತದೆ. ಸಪೂರ ಮೈಕಟ್ಟು ಇರುವ ಹುಡುಗಿಯರಿಗೆ ಈ ರವಿಕೆ ಬಹಳ ಚೆಂದವಾಗಿ ಒಪ್ಪುತ್ತದೆ. ಅಷ್ಟೇನೂ ಆಕರ್ಷಕ ಮೈಮಾಟವಿಲ್ಲದವರು ಸಹ ಈ ರವಿಕೆಯನ್ನು ಧರಿಸಿ ಆಕರ್ಷಕವಾಗಿ ಕಾಣಿಸಬಹುದು.

ತೊಳುಗಳಿಲ್ಲದ ಪಾರ್ಟಿ ರವಿಕೆ (Sleeve less blouse design for party)

Sleeve less blouse design for party

ಈ ರವಿಕೆಗೆ ಮುಂದೆ ಕಟ್ಟಿಗೆ ಅಪ್ಪುವಂತಹ ಕುತ್ತಿಗೆ ಪಟ್ಟಿಇರುತ್ತದೆ ಹಾಗೂ ಮುಕ್ಕಾಲು ತೊಳಿರುತ್ತದೆ. ರೂಪದರ್ಶಿಯು ಈ ರವಿಕೆಯನ್ನು ಲೆಹೇಂಗ ಮೇಲೆ ಧರಿಸಿರುತ್ತಾಳೆ. ಆದರೆ ಈ ರವಿಕೆಯನ್ನು ಸೀರೆಯೊಂದಿಗೆ ಸಹ ಧರಿಸಬಹುದು. ಇಡೀ ರವಿಕೆಯ ತುಂಬಾ ಇರುವ ಕಸೂತಿ ಕೆಲಸ ರವಿಕೆಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.

ಮೇಘಾ ತೊಳುಗಳ ರವಿಕೆ ವಿನ್ಯಾಸ (Mega sleeves blouse design for party)

Mega sleeves blouse design for party

ಈ ಕೆಂಪು ಬಣ್ಣದ ಗಿಡ್ಡ ತೋಳಿನ ರವಿಕೆ, ಕೆಂಪು ಅಂಚಿರುವ ಬಿಳಿ ಬಣ್ಣದ ಸೀರೆಯೊಂದಿಗೆ ಚೆಂದವಾಗಿ ಹೊಂದುತ್ತದೆ. ಬೆಂಗಾಲಿ ಹೆಂಗಸಿನಂತೆ ಕಾಣುವ ಮೇಲಿನ ರೂಪದರ್ಶಿಗೆ ಈ ಆಕರ್ಷಕವಾದ ರವಿಕೆ ಹಾಗೂ ಈ ಮಾದರಿಯ ಸೀರೆಗೆ ಬಹಳ ಚೆಂದವಾಗಿ ಒಪ್ಪುತ್ತದೆ.

ವಿನೂತನ ಶೈಲಿಯ ಕುತ್ತಿಗೆ ವಿನ್ಯಾಸದ ಪಾರ್ಟಿ ರವಿಕೆ (Stylish neck blouse design for party)

Stylish neck blouse design for party

ಕಪ್ಪು ರವಿಕೆಗೆ ಜರಿ ಅಂಚಿರುವ ತೋಳುಗಳಿರುವ ಈ ರವಿಕೆ , ಗಿಡ್ಡ ಮಿಡೀಗಳೊಂದಿಗೆ ಹಾಗೂ ಚಿನ್ನದ ಬಣ್ಣದ ದುಪ್ಪಟ್ಟಾಗಳೊಂದಿಗೆ ಧರಿಸಬಹುದು. ರವಿಕೆ ಸಾಮಾನ್ಯವಾಗಿದ್ದರೂ ಇದನ್ನು ವಿಧವಿಧವಾದ ಬಟ್ಟೆಗಳೊಂದಿಗೆ ಧರಿಸಬಹುದು.

ಉತ್ಕೃಷ್ಟವಾದ ಬೆಳ್ಳಿಯ ಕಸೂತಿ ಪಟ್ಟಿಯಿರುವ ಪಾರ್ಟಿ ರವಿಕೆ (Enriched silver lace work party blouse)

Enriched silver lace work party blouse

ತೊಳಿಲ್ಲದ ದೊಣಿ ಕತ್ತಿನ ವಿನ್ಯಾಸ ಹೊಂದಿರುವ ಈ ರವಿಕೆ ಸಾಮಾನ್ಯ ತೊಳಿಲ್ಲದ ರವಿಕೆಗಳಂತಲ್ಲದೆ ಬಹಳ ಆಕರ್ಷಕವಾದ ಹೂವಿನ ಬೆಳ್ಳಿ ಕಸೂತಿಯನ್ನು ತೊಳಿನ ಮೇಲೆ ರೆಕ್ಕೆಗಳಂತೆ ಹೊಂದಿದೆ. ಈ ರವಿಕೆಯನ್ನು ಕೆಂಪು ಹಾಗೂ ಕಪ್ಪು ಸೀರೆಯೊಂದಿಗೆ ಬಹಳ ಆಕರ್ಷಕವಾಗಿ ಕಾಣುತ್ತದೆ.

ತಿಳಿ ಬಣ್ಣದ ಪಾರ್ಟಿ ರವಿಕೆ (Light color trending party blouse)

Light color trending party blouse

ನೀವು ಗಂಭೀರ ಹಾಗೂ ಸರಳವಾಗಿರುವ ರವಿಕೆಯ ವಿನ್ಯಾಸಕ್ಕಾಗಿ ನೋಡುತ್ತಿದ್ದಿರಾದರೆ ಈ ರವಿಕೆ ನಿಮ್ಮಗೆ ಚೆನ್ನಾಗಿ ಹೊಂದುತ್ತದೆ. ತಿಳಿ ಗುಲಾಬಿ ಬಣ್ಣದ, ಸಣ್ಣ ಕಸೂತಿ ಕೆಲಸವಿರುವ ಹಾಗೂ ಭುಜದ ಸುತ್ತ ಇರುವ ನೀಲಿ ಬಣ್ಣದ ಪಾರದರ್ಶಕ ವಿನ್ಯಾಸ ರವಿಕೆಯ ಸ್ಥಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನು ಧರಿಸುವುದರಿಂದ ನಿಮ್ಮ ಅಂದವು ಹೆಚ್ಚಿ ಮತ್ತಷ್ಟು ಪ್ರಕಾಶಮಾನವಾಗಿ ಕಾಣುತ್ತೀರಿ.

ನೀಲಿ ಪಾರಾದರ್ಶಕ ರವಿಕೆ (Blue see through latest party blouse)

Blue see through latest party blouse

Light color trending party blouse

ಈ ದಿನಗಳಲ್ಲಿ ಪಾರಾದರ್ಶಕ ರವಿಕೆಗಳಲು ಬಹಳ ಪ್ರಸಿದ್ಧವಾಗಿವೆ. ಮುಖ್ಯವಾಗಿ ಪಾಶ್ಚಾತ್ಯ ಉಡುಗೆಗಳಿಗಿಂತ ಹೆಚ್ಚಾಗಿ ಸೀರೆಯನ್ನು ಧರಿಸುವ ಹೆಂಗಸರಿಗೆ ಇದು ಬಹಳ ಅಚ್ಚುಮೆಚ್ಚಾಗಿದೆ. ನೀಲಿ ಬಣ್ಣದ ಪಾರದರ್ಶಕ ಸೀರೆಯೊಂದಿಗೆ ಚೆಂದವಾಗಿ ಹೊಂದುವ ಈ ರವಿಕೆ ಇತರೆ ವಿರುದ್ಧ ಬಣ್ಣಗಳೊಂದಿಗೆ ಸಹ ಚೆನ್ನಾಗಿ ಹೊಂದುತ್ತದೆ. ಈ ರವಿಕೆಯನ್ನು ಇಂದೇ ಧರಿಸಿ ಹಾಗೂ ನಿಮ್ಮ ಶೈಲಿಯನ್ನು ಪ್ರಸ್ತುತ ಪಡಿಸಿ.

ಪಾರ್ಟಿಗಳಿಗಾಗಿ ವಿನ್ಯಾಸಮಾಡಿದ ಕಲ್ಲಿನ ಕಸೂತಿಯಿರುವ ರವಿಕೆ (Party wear designer blouse with elegant finish and stone work)

Party wear designer blouse with elegant finish and stone work

ಈ ಅಂಧವಾದ, ಅತ್ಯಾಧುನಿಕವಾದ ಕಸೂತಿ ಇರುವ ಮಾವ್ ಬಣ್ಣದ ಈ ರವಿಕೆ ಸೂಕ್ಷ್ಮ ಕಲ್ಲಿನ ಕಸೂತಿ ಹಾಗೂ ಬಿಳಿ ಪಟ್ಟಿಯ ಕಸೂತಿ ಕೆಲಸದಿಂದ ಗಮನಸೆಳೆಯುತ್ತದೆ. ಬೆನ್ನುಹುರಿಯಮೇಲೆ ಬಂದಿರುವ ಬಿಳಿ ಕಲ್ಲುಗಳ ಕಸೂತಿ ಕೆಲಸವೂ ಬಹಳ ಆಕರ್ಷಣೀಯವಾಗಿ ಮೂಡಿಬಂದಿದೆ. ಈ ರವಿಕೆಯನ್ನು ಧರಿಸಿದರೆ ಪಾರ್ಟಿಯಲ್ಲಿ ನೀವೇ ಮುಖ್ಯ ಆಕರ್ಷಣೇ ಆಗುವುದರಲ್ಲಿ ಸಂದೇಹವಿಲ್ಲ.

ಬಿಳಿ ಹಾಗೂ ಗುಲಾಬಿ ಬಣ್ಣದ ಪಾರ್ಟಿ ರವಿಕೆ (White and pink party blouse collection)

White and pink party blouse collection

ಗಾಡವಾದ ಗುಲಾಬಿ ಬಣ್ಣದ ಅಡಿಪಾಯವನ್ನಾಗಿಸಿ ಮಾಡಿರುವ ಈ ವಿನ್ಯಾಸದಲ್ಲಿ ಬೀಲಿ ಬಣ್ಣದ ಹೊಳೆಯುವ ಕಸೂತಿ ಇರುವುದರಿಂದ ಇದು ಬಹಳ ಗಂಭೀರವಾಗಿ ಕಾಣಿಸುತ್ತದೆ ಹಾಗೂ ಎರಡು ಭುಜಗಳಿಂದ ಹಾದು ಬರುವ ಮಣಿ ಪೋಣಿಸಿದ ದಾರಗಳು ಮಧ್ಯದಲ್ಲಿ ಚೆಂದವಾದ ಮೂಡಿಯಾಗುತ್ತದೆ. ಬಿಳಿ ಪಾರದರ್ಶಕವಾದ ಕಲ್ಲುಗಳ ಕಸೂತಿ ರವಿಕೆಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.

loading...